»   » ಹಾವಿನ ಜೊತೆ ಸರಸವಾಡಿದ ಸ್ಯಾಂಡಲ್ವುಡ್ ನಾಯಕ ಯಾರು?

ಹಾವಿನ ಜೊತೆ ಸರಸವಾಡಿದ ಸ್ಯಾಂಡಲ್ವುಡ್ ನಾಯಕ ಯಾರು?

By: ಕುಸುಮ
Subscribe to Filmibeat Kannada

ಹಾವಿನ ಜೊತೆ ಸರಸವಾಡೋಕೆ ಹೊರಟ ಈ ಸ್ಯಾಂಡಲ್ವುಡ್ ಹೀರೋ ಯಾರು ಅಂತ ಹುಡುಕ್ತಿದ್ದೀರಾ. ಅವರೇ 'ಒಲವೇ ಮಂದಾರ' ಚಿತ್ರದ ನಾಯಕ ಶ್ರೀಕಿ. ಇತ್ತೀಚೆಗೆ ಬರ್ಥ್ ಅನ್ನುವ ಸಿನಿಮಾ ಮೂಲಕ ತೆರೆಗೆ ಬಂದಿದ್ದ ಶ್ರೀಕಿ, ಇತ್ತೀಚೆಗೆ ತಮ್ಮ ಸ್ನೇಹಿತರ ಜೊತೆ ಹಾವಿನ ಜೊತೆ ಸೆಲ್ಫಿ ತೆಗೆದುಕೊಳ್ಳೋ ಸಾಹಸ ಮಾಡಿದ್ದಾರೆ.

ಹಾವಿನ ಜೊತೆ ಸೆಲ್ಫಿ ತೆಗೆದುಕೊಳ್ಳೋಕೆ ಹೋಗಿ ಸಾಕಷ್ಟು ಬಾರಿ ಅನಾಹುತಗಳಾಗಿರುವ ಸುದ್ದಿಯನ್ನು ನಾವು ಈಗಾಗಲೇ ಕೇಳಿದ್ದೇವೆ. ಕೆಲವರು ಪ್ರಾಣವನ್ನೂ ಕಳೆದುಕೊಂಡಿರೋ ಉದಾಹರಣೆಗಳಿವೆ. ಕೆಲವರು ಹಾವಿನಿಂದ ಕಚ್ಚಿಸಿಕೊಂಡು ಆಸ್ಪತ್ರೆಯಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿದ್ದಾರೆ. ಆದರೆ ಹಳ್ಳಿ ಹೈದ ಶ್ರೀಕಿ ಅಂತಹಾ ಡೇಂಜರಸ್ ಸೆಲ್ಫಿ ತೆಗೆಯೋ ಕೆಲಸ ಮಾಡಿದ್ದಾರೆ. [ತುಟಿಗೆ ತುಟಿ ಬೆರೆಸಿದ 'ಬಿತ್ರಿ' ಹರ್ಷಿಕಾ ಪೂಣಚ್ಚ]

Olave Mandara hero Sriki romances with Snake

ತಮ್ಮ ಗೆಳೆಯ ಸೀನನ ಜೊತೆ ಸೆಲ್ಫಿ ಸ್ಟಿಕ್ ಹಿಡಿದು ಅವರು ತೆಗೆದಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ. ಶ್ರೀಕಿ ಇತ್ತೀಚೆಗೆ ಸಿನಿಮಾಗಳಲ್ಲಿ ಆಸಕ್ತಿಯನ್ನ ಅಷ್ಟಾಗಿ ತೋರಿಸುತ್ತಿಲ್ಲ ಎನ್ನುವುದು ಮೂಲಗಳ ಮಾಹಿತಿ. ತಂದೆ ಕಾರ್ಪೊರೇಟರ್ ಆಗಿರೋದ್ರಿಂದ ಅವರಂತೆಯೇ ಶ್ರೀಕಿ ಕೂಡ ರಾಜಕೀಯದಲ್ಲಿ ಆಸಕ್ತಿ ತೋರಿಸುತ್ತಿದ್ದಾರಂತೆ.

ಸದ್ಯ ಶ್ರೀಕಿ ಅಭಿನಯದ ಯಾವ ಸಿನಿಮಾಗಳೂ ಲಿಸ್ಟ್ನಲ್ಲಿಲ್ಲ. ಮುಂದಿನ ಸಿನಿಮಾ ಯಾವುದು ಅಂತ ಶ್ರೀಕಿ ತಲೆಕೆಡಿಸಿಕೊಂಡಿಲ್ಲ. ಚಾಲೆಂಜಿಂಗ್ಸ್ಟಾರ್ ದರ್ಶನ್ ಜೊತೆಗೂ ಆಪ್ತರಾಗಿರುವ ಶ್ರೀಕಿ ಬರುವ ದಿನಗಳಲ್ಲಿ ಯಾವ ಸಿನಿಮಾಗಳಲ್ಲಿ ಕಾಣಿಸಿಕೊಳ್ತಾರೆ ಅನ್ನೋದನ್ನು ಕಾದು ನೋಡಬೇಕು. [ಸ್ಯಾಂಡಲ್ ವುಡ್ ತಾರೆಗಳಿಗೆ ಅದೃಷ್ಟ ಕೈ ಕೊಟ್ಟಾಗ...]

English summary
Srikanth alias Sriki of Olave Mandara fame had an opportunity to take selfie with a deadly snake. He has posted the picture in social media. Son of a corporator is not acting in any Kannada movie these days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada