For Quick Alerts
  ALLOW NOTIFICATIONS  
  For Daily Alerts

  ಡ್ರೋನ್ ಪ್ರತಾಪನ ಭೇಟಿಯಾಗಿ ತಮ್ಮ ಸಿಕ್ಕಿದ ಎಂದ ಡ್ರೋನ್ ಪ್ರಥಮ!

  By ಫಿಲ್ಮೀಬೀಟ್ ಡೆಸ್ಕ್‌
  |

  ಒಳ್ಳೆಯ ಹುಡ್ಗನಾಗಿದ್ದ ಪ್ರಥಮ್ ಇದೀಗ ಡ್ರೋನ್ ಪ್ರಥಮನಾಗುತ್ತಿದ್ದಾರೆ! ಪ್ರಥಮ್, ಡ್ರೋನ್ ಪ್ರತಾಪ್ ಕತೆಯಿಂದ ಸ್ಪೂರ್ತಿಪಡೆದು ನಿರ್ಮಿಸುತ್ತಿರುವ 'ಡ್ರೋನ್ ಪ್ರಥಮ್' ಹೆಸರಿನ ಸಿನಿಮಾದಲ್ಲಿ ಮುಖ್ಯ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ.

  ಡ್ರೋನ್ ಪ್ರತಾಪ್ ಜೀವನ ಆಧರಿಸಿದ ಸಿನಿಮಾಕ್ಕೆ 'ಡ್ರೋನ್ ಪ್ರಥಮ್' ಎಂದು ಹೆಸರಿಡಲಾಗಿದ್ದು, ಸಿನಿಮಾವನ್ನು ಸ್ವತಃ ಪ್ರಥಮ್‌ ನಿರ್ದೇಶನ ಮಾಡುತ್ತಿದ್ದಾರೆ. ಪ್ರತಾಪನ ಪಾತ್ರವನ್ನೂ ಅವರೇ ನಿರ್ವಹಿಸುತ್ತಿದ್ದಾರೆ.

  ಡ್ರೋನ್ ಪ್ರತಾಪ್‌ನ ಪಾತ್ರ ಮಾಡಲು ಸಾಕಷ್ಟು ತಯಾರಿ ಮಾಡಿಕೊಂಡಿರುವುದಾಗಿ ಈ ಹಿಂದೆಯೇ ಹೇಳಿದ್ದ ಪ್ರಥಮ್, ''ಡ್ರೋನ್ ಪ್ರತಾಪ್‌ ಬಗ್ಗೆ ಅರಿತುಕೊಳ್ಳಲು ಸುಮಾರು ನಾಲ್ಕು ತಿಂಗಳು ನಾನು ವ್ಯಯಿಸಿದ್ದೇನೆ. ಡ್ರೋನ್ ಪ್ರತಾಪನ ಸಾಕಷ್ಟು ಭಾಷಣಗಳನ್ನು ಕೇಳಿ ಆತನ ಹಾವ-ಭಾವ ಅಭ್ಯಸಿಸಿದ್ದೇನೆ. ಆತನ ಪಾತ್ರ ನಿರ್ವಹಿಸುವಷ್ಟರ ಮಟ್ಟಿಗೆ ಸ್ವಯಂ ತರಬೇತಿಗೊಂಡಿದ್ದೇನೆ'' ಎಂದಿದ್ದರು. ಆದರೆ ಈಗ ಸ್ವತಃ ಡ್ರೋನ್ ಪ್ರತಾಪ್‌ನನ್ನೇ ಪ್ರಥಮ್ ಭೇಟಿಯಾಗಿದ್ದಾರೆ.

  ಡ್ರೋನ್ ಪ್ರತಾಪ್ ಅನ್ನು ಭೇಟಿಯಾಗಿರುವ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಪ್ರಥಮ್, ''ಡ್ರೋನ್ ಪ್ರತಾಪ್, ಡ್ರೋಮ್ ಪ್ರಥಮ್ ಅನ್ನು ಭೇಟಿಯಾಗಿದ್ದಾನೆ. ಇದು ಅಪೂರ್ವಸಂಗಮ. ನನ್ನ ತಮ್ಮ ಸಿಕ್ಬಿಟ್ಟ'' ಎಂದಿದ್ದಾರೆ. ಇಬ್ಬರ ಸೆಲ್ಫಿಗೆ ವರ್ಷದ ಅತ್ಯುತ್ತಮ ಚಿತ್ರ ಎಂಬ ಬಿರುದನ್ನು ಪ್ರಥಮ್ ಕೊಟ್ಟುಕೊಂಡಿದ್ದಾರೆ. ಅಲ್ಲದೆ 'ಡ್ರೋನ್ ಪ್ರಥಮ್' ಸಿನಿಮಾದ ಚಿತ್ರೀಕರಣ ಮುಂದಿನ ವಾರದಿಂದಲೇ ಪ್ರಾರಂಭವಾಗುವುದಾಗಿಯೂ ಹೇಳಿಕೊಂಡಿದ್ದಾರೆ.

  'ಡ್ರೋನ್ ಪ್ರಥಮ್' ಸಿನಿಮಾವನ್ನು 'ಗೌರಿ ಗಣೇಶ', 'ಸುಬ್ಬಾ ಶಾಸ್ತ್ರಿ', 'ಉಂಡು ಹೋದ ಕೊಂಡು ಹೋದ' ಸಿನಿಮಾಗಳ ರೀತಿಯಲ್ಲಿಯೇ ನಿರ್ಮಿಸುವ ಇರಾದೆ ಇದೆ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿದ್ದು, ಹಾಸ್ಯಮಯವಾದ ಚಿತ್ರಕತೆ ತಯಾರಿಸಲಾಗಿದೆ'' ಎಂದಿದ್ದಾರೆ ಪ್ರಥಮ್. ಸಿನಿಮಾದ ಮುಖ್ಯ ಪಾತ್ರದಲ್ಲಿ ನಟ ತಬಲಾ ನಾಣಿ ಸಹ ಇರಲಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಅದರಲ್ಲಿ ಒಬ್ಬ ನಾಯಕಿ ಮುಂಬೈ ಮೂಲದವರಾಗಿರುತ್ತಾರೆ.

  Olle Hudga Pratham Meets Drone Prathap

  ಈ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಲು ಧ್ರುವ ಸರ್ಜಾ ಪ್ರೇರಣೆ ಎಂದಿರುವ ಪ್ರಥಮ್, ''ಮಾಮೂಲಿ ಮಾಸ್ ಹೀರೋಗಳಿಗಿಂತಲೂ ಭಿನ್ನವಾದ ಸಾಮರ್ಥ್ಯ ನಿನಗೆದೆಯೆಂದು, ಗಂಭೀರ ವಿಷಯಗಳನ್ನು ಹಾಸ್ಯಾತ್ಮಕವಾಗಿ ಪ್ರೆಸೆಂಟ್ ಮಾಡುವುದನ್ನು ಮುಂದುವರೆಸೆಂದು ಧೃವ ಸರ್ಜಾ ಸಲಹೆ ನೀಡಿದ್ದಾಗಿ'' ಪ್ರಥಮ್ ಹೇಳಿದ್ದಾರೆ.

  'ಡ್ರೋನ್ ಪ್ರತಾಪ್ ಸಿನಿಮಾದ ಮುಹೂರ್ತವನ್ನು ಅದ್ಧೂರಿಯಾಗಿ ಮಾಡುವ ಯೋಚನೆಯಲ್ಲಿರುವ ಪ್ರಥಾಪ್, ''ಈ ಹಿಂದೆ ನನ್ನ ಸಿನಿಮಾಗಳಿಗೆ ಎಚ್‌ಡಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಎಲ್‌ಕೆ ಅಡ್ವಾಣಿ ಅಂಥಹಾ ಮಹನೀಯರು ಕ್ಲ್ಯಾಪ್ ಮಾಡಿದ್ದರು. ಈ ಬಾರಿಯೂ ಬಹಳ ಪ್ರಖ್ಯಾತ ವ್ಯಕ್ತಿಯನ್ನು ಕರೆತುರುವ ಯೋಜನೆ ಹಾಕಿಕೊಂಡಿದ್ದೇನೆ'' ಎಂದಿದ್ದಾರೆ.

  ಡ್ರೋನ್ ಪ್ರತಾಪ್ ಕರ್ನಾಟಕದ ಬಹಳ ವಿ(ಕು)ಖ್ಯಾತರು. ತಾನು ಡ್ರೋನ್ ವಿಜ್ಞಾನಿಯೆಂದು ಹೇಳಿ ಹಲವು ಸುಳ್ಳು ಭಾಷಣಗಳನ್ನು ಮಾಡಿ ಖ್ಯಾತರಾಗಿದ್ದರು. ಆದರೆ ಕೊನೆಗೆ ಅವರ ಸಾಧನೆಯೆಂದು ಹೇಳಿಕೊಂಡಿದ್ದದ್ದೆಲ್ಲ ಸುಳ್ಳೆಂದು ಗೊತ್ತಾಗಿ ವಿಪರೀತವಾಗಿ ಟ್ರೋಲ್‌ಗೆ ನಿಂದನೆಗೆ ಒಳಗಾದರು.

  English summary
  Olle Hudga Pratham meets Drone Prathap. Pratham shares photos of them on social media. Pratham directing a movie named 'Drone Pratham' which is based on Drone Prathap's life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X