»   » ಒಂದೇ ಏಟಿಗೆ ಮೂರು ಹಕ್ಕಿ ಹೊಡೆದ ಓಂ ಪ್ರಕಾಶ್ ರಾವ್

ಒಂದೇ ಏಟಿಗೆ ಮೂರು ಹಕ್ಕಿ ಹೊಡೆದ ಓಂ ಪ್ರಕಾಶ್ ರಾವ್

Posted By:
Subscribe to Filmibeat Kannada
Om Prakash Rao busy with three projects
ನಿರ್ದೇಶಕ ಓಂಪ್ರಕಾಶ್ ಒಟ್ಟೊಟ್ಟಿಗೆ ಮೂರು ಚಿತ್ರಗಳನ್ನು ಅನೌನ್ಸ್ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಡಕೋಟ ಫ್ಯಾಮಿಲಿ, ಹುಚ್ಚ, 1 (ಒನ್) ಎಂಬುದು ಓಂಪ್ರಕಾಶ್ ನಿರ್ದೇಶನದ ಮುಂದಿನ ಪ್ರಾಜೆಕ್ಟ್ ಗಳು.

ಉಪ್ಪಿ ಜೊತೆ ತ್ರಿಮೂರ್ತಿ/ತ್ರಿವಿಕ್ರಮ ಮಾಡ್ತೀನಿ ಅಂತ ಹೇಳಿಕೊಂಡು ಒಂದಷ್ಟು ದಿನ ಓಡಾಡಿಕೊಂಡಿದ್ದ ಓಂ ಪ್ರಕಾಶ್ ಇದೀಗ ಏಕಾಏಕಿ ಮೂರು ಚಿತ್ರಗಳನ್ನೂ ಒಟ್ಟಿಗೆ ಸೆಟ್ಟೇರಿಸಲು ಯೋಜನೆ ಹಾಕಿಕೊಂಡಿದ್ದಾರೆ. ಬೆಳಗಾಂ, ಚಾಮರಾಜಪೇಟೆ ಸೇರಿದಂತೆ ಅವರ ಹಳೆಯ ಪ್ರಾಜೆಕ್ಟ್ ಗಳು ಧೂಳು ತಿನ್ನುತ್ತಿರುವಾಗ ಇವರನ್ನು ನಂಬಿ ದುಡ್ಡು ಸುರಿಯಲು ಯಾರು ಮುಂದೆ ಬಂದಿದ್ದಾರೆ ಅನ್ನೋ ಡೌಟು ಎಲ್ಲರಿಗೂ ಇದ್ದಿದ್ದೇ..!

ಹತ್ತು ವರ್ಷದ ಹಿಂದೆ ಸುದೀಪ್ ನಾಯಕನಾಗಿ ನಟಿಸಿದ್ದ ಹುಚ್ಚ ಸಿನಿಮಾ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಇದೀಗ ಅದೇ ಶೀರ್ಷಿಕೆಯಡಿ ಸಿನಿಮಾ ಮಾಡಲು ಹೊರಟಿದ್ದಾರೆ. ಮೃತ್ಯೋಪ ಜನನಂ' ಎಂಬುದು ಚಿತ್ರದ ಟ್ಯಾಗ್‍ ಲೈನ್.

ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಿರ್ಮಾಣಕ್ಕೂ ಓಂ ಕೈ ಹಾಕಿರುವುದು ಮತ್ತೊಂದು ವಿಶೇಷ. ಈ ಚಿತ್ರಕ್ಕೆ ಯಾರು ಹೀರೋ, ಸಂಭಾಷಣೆ ಯಾರು ಎಂದು ಈಗಾಗಲೇ ನಮ್ಮಲ್ಲಿ ಲೇಖನ ಬಂದಿತ್ತು.

ಇನ್ನು ಡಕೋಟ ಫ್ಯಾಮಿಲಿ'ಯನ್ನು ಕೆ.ಪ್ರದೀಪ್ ಸಿಂಗ್ ಎಂಬುವವರು ನಿರ್ಮಿಸುತ್ತಿದ್ದಾರೆ. ಡಕೋಟ ಎಕ್ಷ್ ಪ್ರೆಸ್' ಹಾಗೂ ಡಕೋಟ ಪಿಕ್ಚರ್ಸ್'ನ ಕಲಾವಿದರೇ ಇಲ್ಲೂ ಮುಂದುವರೆಯಲಿದ್ದಾರೆ ಅನ್ನೋದು ಪ್ರಾಥಮಿಕ ಮಾಹಿತಿ.

'ಜಾದಾ ಮಸ್ತಿ ಥೋಡಾ ಪ್ಯಾರ್ ' ಅನ್ನೋದು ಚಿತ್ರದ ಟ್ಯಾಗು. ಓಂ ಇದಕ್ಕೆ ಆ್ಯಕ್ಷನ್ - ಕಟ್ ಹೇಳುವುದರೊಂದಿಗೆ ನಟಿಸಲಿದ್ದಾರೆ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಇದಕ್ಕೂ ಗುರುಪ್ರಸಾದ್‍ ರದ್ದೇ ಸಂಭಾಷಣೆ.

ಮತ್ತೊಂದು ಪ್ರಾಜೆಕ್ಟ್ ಗೆ ಆದಿತ್ಯ ನಾಯಕ. ಚಿತ್ರದ ಹೆಸರು ಒನ್. ಇದೊಂದು ಹೆವಿ ಬಜೆಟ್ ಚಿತ್ರ. ಹೈ ವೋಲ್ಟೇಜ್ ಆ್ಯಕ್ಷನ್ ಇರುವ ಸಿನಿಮಾ ಅನ್ನೋದು ಓಂ ಪ್ರಕಾಶ್ ಡೈಲಾಗು. ಮೇಲಿನ ಎರಡು ಚಿತ್ರಗಳೂ ಮುಗಿದ ನಂತರ ಈ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ. ಎವ್ರಿ ಒನ್ ಫೈಟ್ ಫಾರ್...' ಎಂಬುದು ಚಿತ್ರದ ಅಡಿಬರಹ. ಈ ಪ್ರಾಜೆಕ್ಟ್ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ

ಧರ್ಮಲಿಂಗಂ ಹಾಗೂ ರಘುಕಿರಣ್ ಚಿತ್ರಕ್ಕೆ ಹಣ ಹಾಕಲಿದ್ದಾರೆ. ಸೋ... ಸದ್ಯಕ್ಕೆ ಓಂ ಪ್ರಕಾಶ್ ರಾವ್ ಪುಲ್ ಬಿಜಿ

English summary
Mass director Om Prakash Rao busy with three new projects. In one project he is the producer too.
Please Wait while comments are loading...