»   » ಸೆನ್ಸಾರ್ ನಲ್ಲಿ ಗೆದ್ದ 'ಒಂದು ರೋಮ್ಯಾಂಟಿಕ್ ಕ್ರೈಂ ಕಥೆ'

ಸೆನ್ಸಾರ್ ನಲ್ಲಿ ಗೆದ್ದ 'ಒಂದು ರೋಮ್ಯಾಂಟಿಕ್ ಕ್ರೈಂ ಕಥೆ'

Posted By:
Subscribe to Filmibeat Kannada

ರೊಮ್ಯಾನ್ಸ್ ಗೂ ಕ್ರೈಂಗೂ ಏನು ಲಿಂಕು? ಒಂದೋ ಕಥೆ ರೊಮ್ಯಾಂಟಿಕ್ ಆಗಿರಬೇಕು ಇಲ್ಲಾ ಕ್ರೈಂ ಆಧಾರಿತವಾಗಿರಬೇಕು. ಆದರಿದು ' ಒಂದು ರೊಮ್ಯಾಂಟಿಕ್ ಕ್ರೈಂ ಕಥೆ'. ತೆಲುಗಿನ 'ಒಕ ರೊಮ್ಯಾಂಟಿಕ್ ಕ್ರೈಂ ಕಥ' ಚಿತ್ರದ ಕನ್ನಡ ರೀಮೇಕ್.

ಮೂಲ ಚಿತ್ರದ ನಿರ್ಮಪಕರಾದ ಡಾಕ್ಟರ್ ಮಲಿನೇನಿ ಲಕ್ಷ್ಮಯ್ಯ ಅವರೇ ಕನ್ನಡ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಆಕ್ಷನ್ ಕಟ್ ಹೇಳಿರುವವರು ಶ್ಯಾಮ್ ಜೆ. ಚೈತನ್ಯ. ಇತ್ತೀಚೆಗೆ ಈ ಚಿತ್ರ ಸೆನ್ಸಾರ್ ನಲ್ಲಿ ಪಾಸ್ ಆಗಿದೆ.

Ondu Romantic Crime Kathe cleares censor

ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಅರ್ಹತಾ ಪತ್ರವನ್ನು ನೀಡುವುದರ ಜೊತೆಗೆ ಪ್ರಶಂಸೆಯನ್ನೂ ಸಹ ಕೊಡಮಾಡಿದೆ. ಇಂದಿನ ಯುವ ಪೀಳಿಗೆ ಸಾಗುತ್ತಿರುವ ದಾರಿಯನ್ನು ಎತ್ತಿ ತೋರಿಸಿ ಅದರ ದುಷ್ಪರಿಣಾಮ ತಿಳಿಸುವ ಕಥಾ ಹಂದರ ಹೊಂದಿರುವ ಈ ಚಿತ್ರದ ಬಗ್ಗೆ ಮಂಡಳಿ ಸದಸ್ಯರು ಖುಷಿಗೊಂಡಿದ್ದಾರೆ.

ಸಮಾಜಕ್ಕೆ ಇಂತಹ ಸಿನಿಮಾಗಳು ಅವಶ್ಯಕ ಎಂದು ಸೆನ್ಸಾರ್ ಸದಸ್ಯರು ಹೇಳಿಕೊಂಡಿದ್ದಾರೆ. ಇಂದಿನ ಪೋಷಕರು ಮತ್ತು ಮಕ್ಕಳ ನಡುವೆ ಹೊಂದಾಣಿಕೆ ಇಲ್ಲ ಅಂದರೆ ಏನೆಲ್ಲಾ ಆಗುತ್ತದೆ ಎಂಬುದೇ ಚಿತ್ರದ ಎಳೆ.

ತಾರಾಗಣದಲ್ಲಿ 'ಗೊಂಬೆಗಳ ಲವ್' ಸಿನೆಮಾದ ನಾಯಕ ಅರುಣ್, ಅಶ್ವಿನಿ ಚಂದ್ರಶೇಖರ್, ಪೂಜಶ್ರೀ, ಸೋನಲ್, ಪ್ರಿಯಾಂಕ ಶುಕ್ಲ, ವಿನೋದ್, ಅರ್ಚನ ಹಾಗೂ ಇನ್ನಿತರರು ಇದ್ದಾರೆ. ಪ್ರಭು ಛಾಯಾಗ್ರಾಹಕರು. ರಿಶಾಲ್ ಸಾಯಿ ಅವರು ಗೀತ ರಚನೆಕಾರ ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಅವರ ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Kannada movie Ondu Romantic Crime Kathe cleares censor formalities and got U/A certificate. The movie is a remake of Telugu Oka Romantic Crime Katha. 'Gombegala Love' fame Arun in lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada