Don't Miss!
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- News
ಚಿರತೆ ಹಾವಳಿ ತಡೆಗೆ ಟಾಸ್ಕ್ ಪೋರ್ಸ್ ರಚಿಸಿ ಆದೇಶ ಹೊರಡಿಸಿದ ಸರ್ಕಾರ, ತಂಡಗಳ ವಿವರ ಇಲ್ಲಿದೆ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟ ಧನ್ವೀರ್ ಗೆ ಮತ್ತೊಂದು ಸಂಕಷ್ಟ: ಆನೆ ಏರಿದ್ದಕ್ಕೆ ಎಫ್‌ಐಆರ್
ಬಂಡಿಪುರದಲ್ಲಿ ರಾತ್ರಿ ಸಫಾರಿ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ನಟ ಧನ್ವೀರ್ ಗೌಡ ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.
Recommended Video

ರಾತ್ರಿ ಸಫಾರಿ ಮಾಡಿದ ಪ್ರಕರಣದ ಬಗ್ಗೆ ವಿಚಾರಣೆ ಎದುರಿಸುತ್ತಿರುವ ನಟ ಧನ್ವೀರ್, ಆ ಪ್ರಕರಣ ಮುಗಿಯುವ ಮುನ್ನವೇ ಮತ್ತೊಂದು ಪ್ರಕರಣ ದಾಖಲಾಗಿದೆ.
ಬಂಡೀಪುರದಲ್ಲಿ
ರಾತ್ರಿ
ಸಫಾರಿ
ವಿವಾದ:
ವಿಚಾರಣೆಗೆ
ಹಾಜರಾದ
ನಟ
ಧನ್ವೀರ್
ಕೆಲವು ತಿಂಗಳುಗಳ ಹಿಂದೆ ನಟ ಧನ್ವೀರ್ ಗೌಡ ಅವರು ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ್ದರು. ಆಗ ಆನೆಯ ಮೇಲೆ ಏರಿದ್ದರು. ಆದರೆ ಮಾವುತ, ಕಾವಾಡಿಗಳನ್ನು ಬಿಟ್ಟರೆ ಬೇರೆಯವರು ಆನೆಯ ಮೇಲೆ ಏರುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ.

ಚಿತ್ರ ಹಂಚಿಕೊಂಡಿದ್ದ ನಟ ಧನ್ವೀರ್ ಗೌಡ
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಆನೆಯ ಮೇಲೆ ಏರಿ ಕುಳಿತಿರುವ ಇತ್ರವನ್ನು ಕೆಲ ತಿಂಗಳ ಹಿಂದೆ ಧನ್ವೀರ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬಂಡಿಪುರ ರಾತ್ರಿ ಸಫಾರಿ ವಿಡಿಯೋ ವೈರಲ್ ಆದ ನಂತರ ಆನೆ ಮೇಲೆ ಏರಿರುವ ಚಿತ್ರ ವೈರಲ್ ಆಗಿತ್ತು.

ಆನೆ ಮೇಲೆ ಏರಿದ್ದಕ್ಕೆ ಪ್ರಕರಣ ದಾಖಲು
ಆನೆಯ ಮೇಲೆ ಏರಿ ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಧನ್ವೀರ್ ಗೌಡ ಹಾಗೂ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಸತತವಾಗಿ ಅರಣ್ಯ ಕಾಯ್ದೆ ಉಲ್ಲಂಘಿಸಿರುವುದು ಪರಿಸರ ಪ್ರಿಯರ ಆಕ್ರೋಶಕ್ಕೆ ಸಹ ಕಾರಣವಾಗಿದೆ.
ಬಂಡೀಪುರದಲ್ಲಿ
ನಟ
ಧನ್ವಿರ್
ನೈಟ್
ಸಫಾರಿ:
ಅರಣ್ಯಾಧಿಕಾರಿ
ಹೇಳಿದ್ದು
ಏನು?

ಆರು ಮಂದಿ ವಿರುದ್ಧ ಪ್ರಕರಣ
ವನ್ಯಜೀವಿ ಸಂರಕ್ಷಣ ಕಾಯ್ದೆ 1972 ಅಡಿಯಲ್ಲಿ ಧನ್ವೀರ್ ವಿರುದ್ಧ ಅರಣ್ಯ ಮೊಕದ್ದಮ್ಮೆ ದಾಖಲಾಗಿದೆ. ಪ್ರಕರಣದಲ್ಲಿ ಧನ್ವೀರ್ ಪ್ರಮುಖ ಆರೋಪಿಯಾಗಿದ್ದಾರೆ. ಧನ್ವೀರ್ ಜೊತೆ 5 ಮಂದಿ ಸ್ನೇಹಿತರ ಮೇಲೂ ಎಫ್‌ಐಆರ್ ಆಗಿದೆ. A1 ಧನ್ವೀರ್, A2 ವಿಶ್ವಾಸ್ ಅಯ್ಯಾರ್, A3 ದರ್ಶನ್ ಬಿನ್ ನಂದಕುಮಾರ್ ಹಾಗೂ ಈ ಜೊತೆಗೆ ಹೆಸರು ಪತ್ತೆಯಾಗದ ಇನ್ನು ಮೂವರು ಆರೋಪಿಗಳ ಮೇಲೆ ಕೇಸ್ ದಾಖಲಾಗಿದೆ.

ವಿಚಾರಣೆಗೆ ಹಾಜರಾದ ನಟ ಧನ್ವೀರ್
ಇನ್ನು ಬಂಡಿಪುರದಲ್ಲಿ ರಾತ್ರಿ ಸಫಾರಿ ಮಾಡಿದ್ದಕ್ಕಾಗಿ ಧನ್ವೀರ್ ಗೌಡ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಅದರಂತೆ ವಿಚಾರಣೆಗೆ ಹಾಜರಾಗಿದ್ದಾರೆ ನಟ ಧನ್ವೀರ್ ಗೌಡ.