»   » 'ಚಿರಾಯು' ಹೆಂಗಿದೆ? 99001118811 ನಂಬರ್ ಗೆ ಕಾಲ್ ಮಾಡಿ!

'ಚಿರಾಯು' ಹೆಂಗಿದೆ? 99001118811 ನಂಬರ್ ಗೆ ಕಾಲ್ ಮಾಡಿ!

Posted By:
Subscribe to Filmibeat Kannada

ಒಂದು ಸಿನಿಮಾದ ಪ್ರಮೋಷನ್ ಹೇಗೆ ಮಾಡಬಹುದು? ದಿನಕ್ಕೊಂದು ಸ್ಪೆಷಾಲಿಟಿಗಳನ್ನ ಜಗಜ್ಜಾಹೀರು ಮಾಡುತ್ತಾ ಪಬ್ಲಿಸಿಟಿ ಪಡೆದುಕೊಳ್ಳಬಹುದು. ಇಲ್ಲಾ, ಊರೂರು ತಿರುಗಿ ಪ್ರೇಕ್ಷಕರನ್ನು ಸೆಳೆಯಬಹುದು. ಯಾವುದೂ ಬೇಡ ಅಂದ್ರೆ, ವಾಮ ಮಾರ್ಗ ಹಿಡಿದು 'ಗಿಮಿಕ್' ಮಾಡಿ, ವಿವಾದವನ್ನು ಮೈಮೇಲೆ ಎಳೆದುಕೊಂಡರೆ, ಬೇಡ ಬೇಡ ಅಂದರೂ ಬಿಟ್ಟಿ ಪಬ್ಲಿಸಿಟಿ ಸಿಗುತ್ತೆ.

ಇದೆಲ್ಲವನ್ನು ಪಕ್ಕಕ್ಕಿಟ್ಟು, ಬೇರೆ ದಾರಿ ಹಿಡಿದಿರುವ 'ಒರಟ' ಪ್ರಶಾಂತ್ ತಮ್ಮ ಮೊಬೈಲ್ ನಂಬರ್ ಅನ್ನೇ ಜಾಹೀರಾತು ಕೊಟ್ಟು ಭರ್ಜರಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ.

prashant-shubha punja

ಸ್ಟಾರ್ ಗಳಾದವರು ತಮ್ಮ ಮೊಬೈಲ್ ನಂಬರ್ ನ ಎಂದಾದರೂ ಲೀಕ್ ಮಾಡುವುದುಂಟೇ? ಹಾಗೇನಾದರೂ ಮಾಡಿದರೆ, ಅವರಿಗೆ 'ಪ್ರಶಾಂತ'ವಾಗಿ ನಿದ್ದೆ ಬರುವುದುಂಟೇ? ಅಭಿಮಾನಿಗಳ ಕಿರಿಕಿರಿಯಿಂದಾಗಿ ತಮ್ಮ ಫೋನ್ ನಂಬರ್ ನ ಸ್ಟಾರ್ ಗಳು ಸೀಕ್ರೆಟ್ ಆಗಿ ಮೇನ್ಟೇನ್ ಮಾಡ್ತಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಆದ್ರೆ, ''ನಾವು ಸಿನಿಮಾ ಮಾಡುವುದೇ ಅಭಿಮಾನಿಗಳಿಗಾಗಿ..! ಅಂದ್ಮೇಲೆ ಅವರ ಜೊತೆ ಮಾತನಾಡದಿದ್ದರೆ ಹೇಗೆ? ಫ್ಯಾನ್ಸ್ ಜೊತೆ ಮಾತನಾಡಿದರೆ ಅವರ ಅಭಿಪ್ರಾಯ ನಮಗೆ ಡೈರೆಕ್ಟಾಗಿ ಗೊತ್ತಾಗುತ್ತೆ'', ಅಂತ 'ಒರಟ' ಪ್ರಶಾಂತ್ ಇಂದು ರಿಲೀಸ್ ಆಗುತ್ತಿರುವ ತಮ್ಮ 'ಚಿರಾಯು' ಚಿತ್ರದ ಎಲ್ಲಾ ಪೋಸ್ಟರ್ ಗಳ ಮೇಲೆ ತಮ್ಮ ಫೋನ್ ನಂಬರ್ ಪ್ರಿಂಟ್ ಹಾಕಿಸಿದ್ದಾರೆ.

prashanth-shubha punja

ಇಂದು ರಾಜ್ಯದಾದ್ಯಂತ ತೆರೆಗೆ ಅಪ್ಪಳಿಸಿರುವ 'ಚಿರಾಯು' ಚಿತ್ರವನ್ನು ನೋಡಿದವರು, ಸಿನಿಮಾ ಹೇಗಿದೆ ಅಂತ ''99001118811'' ನಂಬರ್ ಗೆ ಕಾಲ್ ಮಾಡಿ ಹೇಳಬಹುದು. ಕರೆಗಳನ್ನು ಖುದ್ದು ನಿರ್ದೇಶಕ ಕಮ್ ಹೀರೋ ಪ್ರಶಾಂತ್ ಅಟೆಂಡ್ ಮಾಡುತ್ತಾರೆ. [ಯೂಟ್ಯೂಬಲ್ಲಿ ಯಕ್ಕ ಯಕ್ಕ ಶೋಭಕ್ಕ ಸಾಂಗ್ ಗದ್ದಲ]

ಒಂದು ವಾರದ ಹಿಂದೆಯೇ ಪೋಸ್ಟರ್ ಗಳಲ್ಲಿ ತಮ್ಮ ನಂಬರ್ ಹಾಕಿಸಿದ್ದ ಪ್ರಶಾಂತ್ ಗೆ, ದಿನವೊಂದಕ್ಕೆ ನಾಲ್ಕರಿಂದ ಐದು ಸಾವಿರ ಅಭಿಮಾನಿಗಳು ಫೋನ್ ಮಾಡುತ್ತಿದ್ದಾರಂತೆ. ಇಷ್ಟೊಂದು ಕಾಲ್ ಗಳಿಂದ ಕಿರಿಕಿರಿಯಾಗುತ್ತಿಲ್ಲವೇ ಅಂದ್ರೆ, ''ಖಂಡಿತ ಇಲ್ಲ, ನಾನು ನೆಮ್ಮದಿಯಿಂದ ನಿದ್ದೆ ಮಾಡುತ್ತಿರುವುದೇ ಅಭಿಮಾನಿಗಳ ಜೊತೆ ಮಾತನಾಡುತ್ತಿರುವುದರಿಂದ'' ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಪ್ರಶಾಂತ್ ಹಂಚಿಕೊಂಡಿದ್ದಾರೆ.

shubha punja-prashanth

ಇಂತಹ ಪ್ರಯತ್ನ ಪ್ರಶಾಂತ್ ಗೆ ಮೊದಲೇನಲ್ಲ. 'ಚಿರಾಯು' ಚಿತ್ರದ ಟ್ರೇಲರ್ ನ ವಾಟ್ಸ್ ಆಪ್ ನಲ್ಲಿ ರಿಲೀಸ್ ಮಾಡಿದ್ದ ಪ್ರಶಾಂತ್, ತಮ್ಮ ವಾಟ್ಸ್ ಆಪ್ ನಿಂದ ಒಂದುವರೆ ಲಕ್ಷ ಜನಕ್ಕೆ ತಾವೇ ಖುದ್ದಾಗಿ ಟ್ರೇಲರ್ ಕಳುಹಿಸಿದ್ದಾರಂತೆ. [ಒರಟ ಪ್ರಶಾಂತ್ ತಂತ್ರಜ್ಞನಾಗುವ ಕನಸು ಚಿರಾಯು!]

ಸಿನಿಮಾ ಪ್ರಮೋಷನ್ ಅಂತ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ನಿರ್ಮಾಪಕರು ಇರುವಾಗ ಒಂದು ಫೋನ್ ಇಟ್ಟುಕೊಂಡು, ಅದರ ಮೂಲಕವೇ ತಮ್ಮ ಚೊಚ್ಚಲ ನಿರ್ದೇಶನದ 'ಚಿರಾಯು' ಚಿತ್ರಕ್ಕೆ ಸಖತ್ತಾಗಿ ತಮಟೆ ಬಾರಿಸುತ್ತಿದ್ದಾರೆ ಪ್ರಶಾಂತ್. ಅವರ ಜಾಣತನಕ್ಕೆ ಮೆಚ್ಚಲೇಬೇಕು. (ಫಿಲ್ಮಿಬೀಟ್ ಕನ್ನಡ)

English summary
Orata Prashanth has come up with a New Promotion Strategy by publicizing his Personal Phone Number for his Directorial Venture Chirayu. Anybody who watches Chirayu, can ring up 99001118811 and speak to Hero Cum Director Prashanth.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada