»   » ಎಪಿ ಅರ್ಜುನ್ 'ಕಿಸ್' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಯ್ತು

ಎಪಿ ಅರ್ಜುನ್ 'ಕಿಸ್' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಯ್ತು

Posted By:
Subscribe to Filmibeat Kannada
'ಅಂಬಾರಿ', 'ಅದ್ಧೂರಿ' ಮತ್ತು 'ಐರಾವತ' ಹಿಟ್ ಚಿತ್ರಗಳನ್ನು ನೀಡಿದ ಎಪಿ ಅರ್ಜುನ್, ಎಂಟು ತಿಂಗಳ ಹಿಂದೆ ಘೋಷಿಸಿದ್ದ ಸಿನಿಮಾಗೆ ಇಂದು ಚಾಲನೆ ನೀಡಿದ್ದಾರೆ. ಅಲ್ಲದೇ ತಮ್ಮ ಈ ಚಿತ್ರಕ್ಕೆ ಹೊಸ ಪ್ರತಿಭೆಗಳನ್ನು ಪರಿಚಯಿಸಿದ್ದಾರೆ.['ಕಿಸ್' ಕೊಡಲು ನೀವು ರೆಡಿಯಿದ್ದರೆ, ಹೀರೋಯಿನ್ ಆಗ್ಬಹುದು.!]

ಎಪಿ ಅರ್ಜುನ್ 8 ತಿಂಗಳುಗಳ ಹಿಂದೆ 'ಕಿಸ್' ಎಂಬ ಚಿತ್ರ ನಿರ್ಮಿಸುವುದಾಗಿ ಹೇಳಿದ್ದರು. ಆ ಚಿತ್ರಕ್ಕೆ ನಾಯಕ-ನಾಯಕಿ ಹುಡುಕಾಟದಲ್ಲಿ ಬಿಸಿ ಆಗಿದ್ದ ಅರ್ಜುನ್, ಈಗ ಪಾತ್ರಧಾರಿಗಳನ್ನು ಸೆಲೆಕ್ಟ್ ಮಾಡಿ ಫೋಟೋ ಶೂಟ್ ಸಹ ಮಾಡಿಸಿದ್ದಾರೆ.

 A P Arjun Released 'Kiss' First look for Valentines Day

ಅಂದಹಾಗೆ 'ಕಿಸ್' ಚಿತ್ರದಲ್ಲಿ ಅಭಿನಯಿಸಲು ನಾಯಕನಾಗಿ ವಿರಾಟ್ ಮತ್ತು ನಾಯಕಿ ಆಗಿ ಶ್ರೀಲೀಲಾ ಎಂಬುವವರು ಆಯ್ಕೆ ಆಗಿದ್ದು, ಈ ಇಬ್ಬರು ಸಹ ಸಿನಿಮಾ ರಂಗಕ್ಕೆ ಹೊಸ ಪ್ರತಿಭೆಗಳಂತೆ. ನಾಯಕಿ ಪಾತ್ರಕ್ಕಾಗಿ ಎಪಿ ಅರ್ಜುನ್ ಸುಮಾರು 200 ಕ್ಕೂ ಹೆಚ್ಚು ಹುಡುಗಿಯರನ್ನು ಆಡಿಶನ್ ಮಾಡಿ, ಕೊನೆಗೆ ಬಿಷಪ್ ಕಾಟನ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಶ್ರೀಲೀಲಾ ಅವರನ್ನು ಆಯ್ಕೆ ಮಾಡಿರುವುದಾಗಿ ಹೇಳಿದ್ದಾರೆ.[ಯಶ್-ರಾಧಿಕಾ 'ಲಗ್ನ ಪತ್ರಿಕೆ'ಗೆ ಕವನ ಬರೆದ್ದಿದ್ದು ಇವರೇ!]

 A P Arjun Released 'Kiss' First look for Valentines Day

'ಕಿಸ್' ಚಿತ್ರವನ್ನು ರಾಷ್ಟ್ರಕೂಟ ಪಿಕ್ಚರ್ ಅಡಿಯಲ್ಲಿ ವಿ.ರವಿಕುಮಾರ್ ನಿರ್ಮಾಣ ಮಾಡುತ್ತಿದ್ದು, ವಿ.ಹರಿಕೃಷ್ಣ ಅವರು ಸಂಗೀತ ಸಂಯೋಜನೆ ನೀಡಲಿದ್ದಾರೆ. ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಎಪಿ ಅರ್ಜುನ್ ಈಗಾಗಲೇ 'ಕಿಸ್' ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.

English summary
AP Arjun had announced about his next film KISS, and he has released 'Kiss' First for Valentines Day.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada