»   » 'ಕಾಲೇಜ್ ಕುಮಾರ್'ನಿಗೆ ಫಿದಾ ಆದ 'ಕಬಾಲಿ' ನಿರ್ದೇಶಕ

'ಕಾಲೇಜ್ ಕುಮಾರ್'ನಿಗೆ ಫಿದಾ ಆದ 'ಕಬಾಲಿ' ನಿರ್ದೇಶಕ

Posted By:
Subscribe to Filmibeat Kannada

'ಕಾಲೇಜ್ ಕುಮಾರ್' ಸಿನಿಮಾ ಈಗಾಗಲೇ ರಾಜ್ಯದ ಎಲ್ಲ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಇದೀಗ ಸಿನಿಮಾವನ್ನು 'ಕಬಾಲಿ' ಖ್ಯಾತಿಯ ಕಾಲಿವುಡ್ ನಿರ್ದೇಶಕ ಪಾ.ರಂಜಿತ್ ಸಹ ವೀಕ್ಷಿಸಿದ್ದಾರೆ.

'ಕಾಲೇಜ್ ಕುಮಾರ' ನೋಡಿ ಡಿ ಬಾಸ್ ದರ್ಶನ್ ಕೊಟ್ಟ ವಿಮರ್ಶೆ!

ಚೆನ್ನೈನಲ್ಲಿ ನಡೆದ ವಿಶೇಷ ಪ್ರದರ್ಶನದಲ್ಲಿ ಪಾ.ರಂಜಿತ್ ಚಿತ್ರವನ್ನು ನೋಡಿದ್ದಾರೆ. ಇನ್ನು ಈ ವಿಷಯವನ್ನು ಚಿತ್ರದ ನಾಯಕ ವಿಕ್ಕಿ ವರುಣ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುಖ್ಯವಾಗಿ 'ಕಾಲೇಜ್ ಕುಮಾರ್' ಸಿನಿಮಾದ ಕಥೆ ಮತ್ತು ಎಲ್ಲರ ಅಭಿನಯವನ್ನು ಪಾ.ರಂಜಿತ್ ಬಹಳ ಮೆಚ್ಚಿಕೊಂಡಿದ್ದಾರಂತೆ.

Pa Ranjith watched 'College Kumar' movie

ಈ ಹಿಂದೆ ಕನ್ನಡ ಸ್ಟಾರ್ ನಟರಾದ ಪುನೀತ್ ರಾಜ್ ಕುಮಾರ್, ದರ್ಶನ್, ರಕ್ಷಿತ್ ಶೆಟ್ಟಿ, ಅರ್ಜುನ್ ಸರ್ಜಾ, ನಿರ್ದೇಶಕ ಚೇತನ್ ಸೇರಿದಂತೆ ಚಿತ್ರರಂಗದ ಸಾಕಷ್ಟು ಮಂದಿ 'ಕಾಲೇಜ್ ಕುಮಾರ್' ನೋಡಿ ಇಷ್ಟ ಪಟ್ಟಿದ್ದರು. ಈಗ ತಮಿಳು ನಿರ್ದೇಶಕ ಪಾ.ರಂಜಿತ್ ಕೂಡ 'ಕಾಲೇಜ್ ಕುಮಾರ್'ನಿಗೆ ಜೈ ಎಂದಿದ್ದಾರೆ.

ಅಂದಹಾಗೆ, 'ಕಾಲೇಜ್ ಕುಮಾರ್' ಸಿನಿಮಾ ನವೆಂಬರ್ 10ಕ್ಕೆ ರಿಲೀಸ್ ಆಗಿತ್ತು. ಒಂದು ಪಕ್ಕಾ ಯೂತ್ ಅಂಡ್ ಫ್ಯಾಮಿಲಿ ಓರಿಯೆಂಟೆಡ್ ಚಿತ್ರ ಇದಾಗಿದ್ದು, ರವಿಶಂಕರ್ ಅಭಿನಯ ಚಿತ್ರದ ಹೈಲೆಟ್ ಆಗಿದೆ. ಸಂತು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

English summary
Director Pa Ranjith watched 'College Kumar' movie. 'ಕಾಲೇಜ್ ಕುಮಾರ್' ಸಿನಿಮಾವನ್ನು ನಿರ್ದೇಶಕ ಪಾ.ರಂಜಿತ್ ವೀಕ್ಷಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada