»   » ಪದ್ಮಾವತಿ ಬದಲು ಪದ್ಮಾವತ್ ಆಗಿ ಬರಲಿದ್ದಾಳೆ ದೀಪಿಕಾ

ಪದ್ಮಾವತಿ ಬದಲು ಪದ್ಮಾವತ್ ಆಗಿ ಬರಲಿದ್ದಾಳೆ ದೀಪಿಕಾ

Posted By:
Subscribe to Filmibeat Kannada

ವಿವಾದಗಳ ಕೇಂದ್ರ ಬಿಂದುವಾಗಿರುವ ಬಾಲಿವುಡ್ ಸಿನಿಮಾ ಪದ್ಮಾವತಿ ಚಿತ್ರ ಒಂದಿಷ್ಟು ಬದಲಾವಣೆ ಮಾಡಿಕೊಂಡು ಪ್ರೇಕ್ಷಕರ ಮುಂದೆ ಬರಲು ಸಿದ್ದವಾಗಿದೆ. ಯು ಎ ಸರ್ಟಿಫಿಕೇಟ್ ಕೊಡಲು ಒಪ್ಪಿರುವ ಸೆನ್ಸಾರ್ ಮಂಡಳಿ ಸಿನಿಮಾದಲ್ಲಿ ಐದು ಬದಲಾವಣೆಯನ್ನ ಮಾಡಲು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಗೂ ನಿರ್ಮಾಪಕರಿಗೆ ತಿಳಿಸಿದ್ದಾರೆ.

ಟೈಟಲ್ ನಿಂದಲೇ ವಿವಾದ ಸೃಷ್ಠಿ ಆಗಿರುವ ಪದ್ಮಾವತಿ ಸಿನಿಮಾ ಪ್ರೇಕ್ಷಕರ ಮುಂದೆ ಬರುವುದು ಪದ್ಮಾವತ್ ಎನ್ನುವ ಹೆಸರಿನ ಮೂಲಕ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 26 ಕಟ್ ಗಳನ್ನ ನೀಡಲಾಗಿದೆ ಎಂದು ಸುದ್ದಿ ಹರಿದಾಡಿತ್ತು. ಆದರೆ ಯಾವುದೇ ಕಟ್ ಇಲ್ಲದೆ ಬದಲಾವಣೆಯನ್ನ ಮಾತ್ರ ಹೇಳಲಾಗಿದೆಯಂತೆ.

'Padmavati' movie will be released as 'Padmavat'.

'ಪದ್ಮಾವತಿ' ಚಿತ್ರಕ್ಕೆ ಸಿಗಲಿದೆ ಬಿಡುಗಡೆ ಭಾಗ್ಯ.?

ಮೊದಲನೆಯದಾಗಿ ಐತಿಹಾಸಿಕ ಸಿನಿಮಾ ಅನ್ನುವುದನ್ನ ಹೇಳುವಂತಿಲ್ಲ, ಎರಡನೆಯದಾಗಿ ಚಿತ್ರದ ಟೈಟಲ್ ಅನ್ನು ಪದ್ಮಾವತ್ ಎಂದು ಬದಲಾವಣೆ ಮಾಡಲು ತಿಳಿಸಲಾಗಿದೆ. ಮೂರನೆಯದ್ದಾಗಿ ಸದ್ಯ ಬಿಡುಗಡೆಯಾಗಿರುವ ಪದ್ಮಾವತಿ ಚಿತ್ರದ 'ಘೂಮರ್ ಘೂಮರ್' ಹಾಡನ್ನ ಬದಲಾಯಿಸಬೇಕು, ಸಿನಿಮಾ ಚಿತ್ರೀಕರಣದಲ್ಲಿ ಐತಿಹಾಸಿಕ ಸ್ಥಳವನ್ನ ತಪ್ಪಾಗಿ ತೋರಿಸಲಾಗಿದ್ದು ಅವುಗಳ ಹೆಸರನ್ನ ಸರಿಯಾಗಿ ತಿದ್ದು ಪಡಿ ಮಾಡಬೇಕೆಂದು ಸೆನ್ಸಾರ್ ಮಂಡಳಿ ತಿಳಿಸಿದೆ.

'Padmavati' movie will be released as 'Padmavat'.

ಸೆನ್ಸಾರ್ ಮಂಡಳಿಯ ಅಧಿಕಾರಿಗಳ ಜೊತೆಯಲ್ಲಿ ಇತಿಹಾಸಕಾರ ತಂಡವೂ ಪದ್ಮಾವತಿ ಸಿನಿಮಾವನ್ನ ವೀಕ್ಷಣೆ ಮಾಡಿದ್ದಾರೆ. ಸೂಚಿಸಿರುವಂತ ಬದಲಾವಣೆಗಳನ್ನ ಮಾಡಿಕೊಂಡರೆ ಚಿತ್ರಕ್ಕೆ ಯು ಎ ಸರ್ಟಿಫಿಕೇಟ್ ನೀಡಲು ನಿರ್ಧರಿಸಲಾಗಿದೆ.

'Padmavati' movie will be released as 'Padmavat'.

ಇದೇ ವರ್ಷ ಬಿಡುಗಡೆಯಾಗಬೇಕಿದ್ದ ಪದ್ಮಾವತಿ ಸಿನಿಮಾ ಹೊಸ ವರ್ಷಕ್ಕೆ ಹೆಸರನ್ನು ಬದಲಾವಣೆ ಮಾಡಿಕೊಂಡು ಅಭಿಮಾನಿಗಳ ಮುಂದೆ ಎಂಟ್ರಿಕೊಡಲಿದ್ದಾಳೆ. ವಿವಾದ, ಬದಲಾವಣೆ ಏನೇ ಆದರೂ ಕೂಡ ಚಿತ್ರವನ್ನ ನೋಡಲು ಸಿನಿಪ್ರಿಯರು ಕಾತುರದಿಂದ ಕಾದಿರುವುದಂತು ನಿಜ.

English summary
The Censor board has been asked to make five changes to the 'Padmavati' cinema team. 'Padmavati' will be released as 'Padmavat'. The censor board has decided to give a certificate of after changes.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X