For Quick Alerts
  ALLOW NOTIFICATIONS  
  For Daily Alerts

  ಪೈರಸಿಯಿಂದ 'ಪೈಲ್ವಾನ್'ಗೆ ಹಿನ್ನಡೆಯಾಗಿದ್ದು ನಿಜ, ಗೆದ್ದಿದ್ದು ನಿಜ

  |
  ಪೈರಸಿಯಿಂದ ಪೈಲ್ವಾನ್ ಗೆ ನಿಜಕ್ಕೂ ಆಗಿದ್ದೇನು..? | Pailwaan Collection | FILMIBEAT KANNADA

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಪೈರಸಿ ವಿವಾದದಿಂದ ಭಾರಿ ಸುದ್ದಿ ಮಾಡಿದೆ. ರಿಲೀಸ್ ಆದ ಮೊದಲ ದಿನವೇ ಮೂರು ಭಾಷೆಯಲ್ಲಿ ಸಿನಿಮಾ ಲೀಕ್ ಆಗಿತ್ತು. ಸಿನಿಮಾ ಪೈರಸಿ ಆದರೆ ಸಹಜವಾಗಿ ನಿರ್ಮಾಪಕರಿಗೆ ನಷ್ಟ ಆಗುತ್ತೆ.

  ಆದರೆ ದೊಡ್ಡ ಸ್ಟಾರ್ ನಟರ ಚಿತ್ರಗಳಿಗೆ ಇದರಿಂದ ಯಾವುದೇ ಹಿನ್ನಡೆಯಾಗಲ್ಲ. ಸಿನಿಮಾ ಗೆದ್ದೆ ಗೆಲ್ಲುತ್ತೆ, ಗಳಿಕೆ ನಿರೀಕ್ಷೆಯಂತೆ ಆಗುತ್ತೆ ಎಂಬ ಮಾತು ಗಾಂಧಿನಗರದಲ್ಲಿದೆ.

  'ಪೈಲ್ವಾನ್' ಪೈರಸಿ: ದರ್ಶನ್ ಮನಸ್ಸಿನಲ್ಲೇನಿದೆ? ಆಪ್ತರು ಬಿಚ್ಚಿಟ್ಟ ಗುಟ್ಟು

  ಆ ಮಾತು ಪೈಲ್ವಾನ್ ವಿಚಾರದಲ್ಲಿ ಸತ್ಯ ಆಗಿದೆ. ಪೈರಸಿಯಿಂದ ಚಿತ್ರಕ್ಕೆ ಹಿನ್ನಡೆಯಾಗಿದೆ. ಹಾಗಂತ ನಷ್ಟವೂ ಆಗಿಲ್ಲ. ಭರ್ಜರಿ ಗಳಿಕೆಯನ್ನ ಕಂಡಿದೆ. ಈ ಬಗ್ಗೆ ನಿರ್ದೇಶಕರೂ ಕೂಡ ನಿಜ ಒಪ್ಪಿಕೊಂಡಿದ್ದಾರೆ. ಮುಂದೆ ಓದಿ....

  ಪೈಲ್ವಾನ್ ಗೆ ಹಿನ್ನಡೆಯಾಗಿದ್ದು ನಿಜ

  ಪೈಲ್ವಾನ್ ಗೆ ಹಿನ್ನಡೆಯಾಗಿದ್ದು ನಿಜ

  ''ಪೈಲ್ವಾನ್ ಸಿನಿಮಾ ಪೈರಸಿ ಆದ ಕಾರಣ ಚಿತ್ರಕ್ಕೆ ಹಿನ್ನಡೆಯಾಗಿದ್ದು ನಿಜ. ಬೇರೆ ಭಾಷೆಯಲ್ಲಿ ಸಿನಿಮಾಗೆ ಸಮಸ್ಯೆಯಾಗಿದೆ. ಆದರೆ ಕನ್ನಡದಲ್ಲಿ ಅಷ್ಟಾಗಿ ಪರಿಣಾಮ ಆಗಿಲ್ಲ. ಕನ್ನಡಿಗರು ಪ್ರೀತಿಯಿಂದ ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಿದ್ದಾರೆ'' ಎಂದು ನಿರ್ದೇಶಕ ಕೃಷ್ಣ ಹೇಳಿದ್ದಾರೆ.

  ನೂರು ಕೋಟಿ ಗಡಿ ದಾಟಿದ್ಯಾ?

  ನೂರು ಕೋಟಿ ಗಡಿ ದಾಟಿದ್ಯಾ?

  ಮೊದಲ ನಾಲ್ಕು ದಿನದಲ್ಲಿ ಸುಮಾರು 40 ಕೋಟಿವರೆಗೂ ಪೈಲ್ವಾನ್ ಸಿನಿಮಾ ಗಳಿಕೆ ಕಂಡಿದೆ ಎಂದು ಹೇಳಲಾಗಿದೆ. ಈಗ ಪೈಲ್ವಾನ್ ಸಿನಿಮಾ ತೆರೆಕಂಡು ಒಂದು ವಾರ ಕಳೆದಿದೆ. ಅಲ್ಲಿಗೆ ಕಲೆಕ್ಷನ್ ಡಬಲ್ ಆಗಿರಬಹುದು. ಸದ್ಯದ ಲೆಕ್ಕಾಚಾರ ನೋಡಿದ್ರೆ ಪೈಲ್ವಾನ್ ನೂರು ಕೋಟಿ ಕ್ಲಬ್ ಗೆ ಸೇರುವುದು ಪಕ್ಕಾ ಎನ್ನಲಾಗುತ್ತಿದೆ.

  ಪೈಲ್ವಾನ್ ಪೈರಸಿ: ವಿವಾದದ ಕೇಂದ್ರದಲ್ಲಿ 'ಯಜಮಾನನ ಅನ್ನದಾತರು'!

  ಬೇರೆ ಭಾಷೆ ಗಳಿಕೆ ಬಗ್ಗೆ ಮಾಹಿತಿ ಇಲ್ಲ

  ಬೇರೆ ಭಾಷೆ ಗಳಿಕೆ ಬಗ್ಗೆ ಮಾಹಿತಿ ಇಲ್ಲ

  ಪೈಲ್ವಾನ್ ಚಿತ್ರಕ್ಕೆ ಬೇರೆ ಭಾಷೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಆದರೆ, ಪರಭಾಷೆಯಲ್ಲಿ ಪೈಲ್ವಾನ್ ಗಳಿಕೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದು ಸಹಜವಾಗಿ ಗಳಿಕೆಯಲ್ಲಿ ಹಿನ್ನಡೆಯಾಗಿದೆ ಎಂಬುದಕ್ಕೆ ಪುಷ್ಠಿ ಕೊಟ್ಟಂತಿದೆ.

  'ತಪ್ಪು ಯಾರೆ ಮಾಡಿದ್ರು ತಪ್ಪು ತಪ್ಪೇನೆ' ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

  ಶಿವಣ್ಣ ನೋಡಿದ ಪೈಲ್ವಾನ್

  ಶಿವಣ್ಣ ನೋಡಿದ ಪೈಲ್ವಾನ್

  ಪ್ರೇಕ್ಷಕರು ನೋಡಿದ ಮೆಚ್ಚಿಕೊಂಡ ಪೈಲ್ವಾನ್ ಚಿತ್ರವನ್ನ ನಟ ಶಿವರಾಜ್ ಕುಮಾರ್ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸುದೀಪ್ ಅವರ ಹಾರ್ಡ್ ವರ್ಕ್ ಹಾಗೂ ಕೃಷ್ಣ ಅವರ ನಿರ್ದೇಶನ ಚಿತ್ರವನ್ನ ಅದ್ಭುತವಾಗಿ ಬರುವಂತೆ ಮಾಡಿದೆ ಎಂದು ಶ್ಲಾಘಿಸಿದ್ದಾರೆ.

  English summary
  Kiccha Sudeep's Pailwaan Movie faced problems in other languages because of piracy said director krishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X