For Quick Alerts
  ALLOW NOTIFICATIONS  
  For Daily Alerts

  'ಕಿಲ್ಲಿಂಗ್ ವೀರಪ್ಪನ್' ಸ್ಮರಿಸಿದ ಪಾರೂಲ್: ಇದು ನನ್ನ ಫೇವರಿಟ್ ಸಿನಿಮಾ ಎಂದ ನಟಿ

  |

  ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕನ್ನಡದಲ್ಲಿ ನಿರ್ದೇಶಿಸಿದ ಮೊದಲ ಚಿತ್ರ ಕಿಲ್ಲಿಂಗ್ ವೀರಪ್ಪನ್. ಕಾಡುಗಳ್ಳ ವೀರಪ್ಪನ್ ಬಗ್ಗೆ ಹಲವಾರು ಚಿತ್ರಗಳು ಬಂದಿದ್ದರೂ ಆರ್‌ಜಿವಿ ಮಾಡಿದ ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಬಹಳ ವಿಶೇಷ ಹಾಗೂ ಪ್ರೇಕ್ಷಕರಿಗೆ ಇಷ್ಟ ಆಯಿತು.

  ಡಾ ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಎಸ್‌ಟಿಎಫ್ ಅಧಿಕಾರಿಯಾಗಿ ನಟಿಸಿದ್ದರು. ವೀರಪ್ಪನ್ ಪಾತ್ರದಲ್ಲಿ ಬಾಲಿವುಡ್ ನಟ ಸಂದೀಪ್ ಭಾರಧ್ವಜ್ ಕಾಣಿಸಿಕೊಂಡಿದ್ದರು. ಸ್ಯಾಂಡಲ್‌ವುಡ್ ಪಾಲಿಗೆ ಮರೆಯಲಾಗದ ಚಿತ್ರ ಎನ್ನಬಹುದು. ಈ ಚಿತ್ರವನ್ನ ನಟಿ ಪಾರೂಲ್ ಯಾದವ್ ಸ್ಮರಿಸಿಕೊಂಡಿದ್ದಾರೆ. ಐದು ವರ್ಷದ ಬಳಿಕ ಕಿಲ್ಲಿಂಗ್ ವೀರಪ್ಪನ್ ನೆನೆಪಿಸಿಕೊಂಡಿರುವ ನಟಿ ''ಇದು ನನ್ನ ಫೇವರಿಟ್ ಸಿನಿಮಾ'' ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಅಷ್ಟಕ್ಕೂ, ಪಾರೂಲ್ ಈ ಚಿತ್ರ ನೆನಪಿಸಿಕೊಳ್ಳಲು ಕಾರಣವೇನು? ಮುಂದೆ ಓದಿ...

  ಕಿಲ್ಲಿಂಗ್ ವೀರಪ್ಪನ್ ಚಿತ್ರಕ್ಕೆ 5 ವರ್ಷ

  ಕಿಲ್ಲಿಂಗ್ ವೀರಪ್ಪನ್ ಚಿತ್ರಕ್ಕೆ 5 ವರ್ಷ

  ರಾಮ್ ಗೋಪಾಲ್ ವರ್ಮಾ ಮತ್ತು ಡಾ ಶಿವರಾಜ್ ಕುಮಾರ್ ಕಾಂಬಿನೇಷನ್‌ನಲ್ಲಿ ಬಂದಿದ್ದ ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಜನವರಿ 1ಕ್ಕೆ ತೆರೆಕಂಡು ಐದು ವರ್ಷ ಆಗಿದೆ. 2016ರ ಜನವರಿ 1 ರಂದು ಈ ಚಿತ್ರ ಬಿಡುಗಡೆಯಾಗಿದೆ. ಮೊದಲು ಕನ್ನಡದಲ್ಲಿ ರಿಲೀಸ್ ಆದರೂ ನಂತರ ತೆಲುಗು ಹಾಗೂ ಹಿಂದಿಗೆ ಡಬ್ ಆಗಿದೆ.

  'ಆಣೆ ಮಾಡಿ ಹೇಳುತ್ತೇನೆ, ನನಗೆ ತಾಯ್ತನ ಬೇಡ' ಎಂದ ನಟಿ ಪಾರುಲ್ ಯಾದವ್'ಆಣೆ ಮಾಡಿ ಹೇಳುತ್ತೇನೆ, ನನಗೆ ತಾಯ್ತನ ಬೇಡ' ಎಂದ ನಟಿ ಪಾರುಲ್ ಯಾದವ್

  ಹಲವು ಕಾರಣಗಳಿಂದ ವಿಶೇಷ

  ಹಲವು ಕಾರಣಗಳಿಂದ ವಿಶೇಷ

  ''ಕಿಲ್ಲಿಂಗ್ ವೀರಪ್ಪನ್ ಚಿತ್ರವು ಹಲವು ಕಾರಣಗಳಿಂದ ವಿಶೇಷವಾಗಿದೆ. ಈಗಾಗಲೇ ಹಲವಾರು ಬಾರಿ ವೀರಪ್ಪನ್ ಮೇಲೆ ಚಲನಚಿತ್ರಗಳು ಬಂದಿದ್ದರೂ ಕಿಲ್ಲಿಂಗ್ ವೀರಪ್ಪನ್ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಪ್ರದರ್ಶನ ಕಂಡಿತ್ತು. ಈ ಚಿತ್ರದಲ್ಲಿ ನಾನು ಮಾಡಿದ ಪಾತ್ರ "ಶ್ರೇಯಾ"... ಇದು ಬಹಳಷ್ಟು ಜನರಿಗೆ ಇಷ್ಟವಾಗಿತ್ತು...'' ಎಂದು ನಟಿ ಪಾರೂಲ್ ಟ್ವೀಟ್ ಮಾಡಿದ್ದಾರೆ.

  ಅವಾರ್ಡ್ ತಂದು ಕೊಟ್ಟಿತ್ತು

  ಅವಾರ್ಡ್ ತಂದು ಕೊಟ್ಟಿತ್ತು

  ''ಹಾಗೆಯೇ ನನಗೆ #IIFA & #Filmfare ಅವಾರ್ಡ್ಸ್ ಕೂಡ ಸಿಕ್ಕಿತ್ತು. ಆದರೆ ಈ ಚಿತ್ರದ ಬಹುಪಾಲು ಕ್ರೆಡಿಟ್ ನಿರ್ದೇಶಕರಾದ ರಾಮಗೋಪಾಲ್ ವರ್ಮಾ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಗೆ ಸಲ್ಲುಬೇಕು... ಅಂದ ಹಾಗೆ ಈ ಫಿಲಂ ನನ್ನ ಫೇವರಿಟ್ ಸಿನಿಮಾಗಳಲ್ಲಿ ಒಂದು'' ಎಂದು ಪಾರೂಲ್ ಸಂತಸ ಹಂಚಿಕೊಂಡಿದ್ದಾರೆ.

  ಪುರುಷರ್ಯಾರೂ ಡ್ರಗ್ಸ್ ತೆಗೆದುಕೊಳ್ಳುವುದಿಲ್ಲವಾ? ನಟಿ ಪಾರುಲ್ ಯಾದವ್ಪುರುಷರ್ಯಾರೂ ಡ್ರಗ್ಸ್ ತೆಗೆದುಕೊಳ್ಳುವುದಿಲ್ಲವಾ? ನಟಿ ಪಾರುಲ್ ಯಾದವ್

  ಎಸ್‌ಟಿಎಫ್ ಸ್ಪೈ ಆಗಿದ್ದ ಪಾರೂಲ್

  ಎಸ್‌ಟಿಎಫ್ ಸ್ಪೈ ಆಗಿದ್ದ ಪಾರೂಲ್

  ಪಾರೂಲ್ ಯಾದವ್ ಈ ಸಿನಿಮಾದಲ್ಲಿ ಎಸ್‌ಟಿಎಫ್ ಸ್ಪೈ ಆಗಿ ನಟಿಸಿದ್ದರು. ಅಂದ್ರೆ, ಮುತ್ತುಲಕ್ಷ್ಮಿ ಕಡೆಯಿಂದ ವೀರಪ್ಪನ್ ಕುರಿತಾದ ಮಾಹಿತಿಯನ್ನು ಕಲೆಹಾಕಿ ಪೊಲೀಸರಿಗೆ ನೀಡುತ್ತಿದ್ದ ಶ್ರೇಯಾ ಎಂಬ ಯುವತಿಯ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದರು. ಮುತ್ತು ಲಕ್ಷ್ಮಿ ಪಾತ್ರದಲ್ಲಿ ಕನ್ನಡದ ಯಜ್ಞಾ ಶೆಟ್ಟಿ ಅಭಿನಯಿಸಿದ್ದರು.

  English summary
  Indian Actress Parul yadav remembered 'Killing Veerappan' Movie. the movie completes 5 years in industry, starrer dr shiva rajkumar and directed by RGV.
  Sunday, January 3, 2021, 9:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X