»   » ನಟಿ ಪರೂಲ್ ಯಾದವ್ ವೆಬ್ ಸೈಟ್ ಲೋಕಾರ್ಪಣೆ

ನಟಿ ಪರೂಲ್ ಯಾದವ್ ವೆಬ್ ಸೈಟ್ ಲೋಕಾರ್ಪಣೆ

Posted By:
Subscribe to Filmibeat Kannada

ಜನಪ್ರಿಯ ಬಹುಭಾಷಾ ತಾರೆ ಪರೂಲ್ ಯಾದವ್ ಶುಕ್ರವಾರ (ಅ.19) ತನ್ನ ವೆಬ್ ಸೈಟ್ ಲೋಕಾರ್ಪಣೆ ಮಾಡಿದರು. ಈ ಮೂಲಕ ಸ್ವಂತ ವೆಬ್ ಸೈಟ್ ಹೊಂದಿರುವ ದಕ್ಷಿಣ ಭಾರತದ ಕೆಲವೇ ಖ್ಯಾತ ಸಿನಿಮಾ ತಾರೆಯರ ಪಟ್ಟಿಗೆ ಪರುಲ್ ಸಹ ಸೇರ್ಪಡೆಯಾದರು. ಪರೂಲ್ ಯಾದವ್ ವೆಬ್ ಸೈಟ್ ಲಿಂಕ್.

ಕನ್ನಡ ಸಿನಿಮಾ ರಂಗದ ಜನಪ್ರಿಯ ನಿರ್ದೇಶಕರಾದ ಪವನ್ ಒಡೆಯರ್ ವೆಬ್ ಸೈಟನ್ನು ಬೆಂಗಳೂರಿನಲ್ಲಿ ಅಕ್ಟೋಬರ್ 18ರಂದು ಲೋಕಾರ್ಪಣೆ ಮಾಡಿದರು. ಬೆಂಗಳೂರು ಮೂಲದ ಸ್ಪಿಯರ್ ಹೆಡ್ಸ್ ಟೆಕ್ನಾಲಜೀಸ್ ಈ ವೆಬ್ ಸೈಟನ್ನು ಅಭಿವೃದ್ಧಿಪಡಿಸಿದೆ.

ಸೆಲೆಬ್ರಿಟಿಗಳು ಮತ್ತು ಸಾಮಾಜಿಕ ಗಣ್ಯರಿಗೆ ಮಾದರಿಯಾಗುವಂತಿರುವ ಈ ವೆಬ್ ಸೈಟ್ ಅತ್ಯಧಿಕ ಮಟ್ಟದ ಸಂವಹನ ಸಾಧ್ಯತೆ ಹೊಂದಿದೆ. ವೃತ್ತಿಪರ ಮತ್ತು ಸಿನಿಮಾ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರತಿಕ್ಷಣದ ಅಪ್ ಡೇಟ್ ಸಿಗುವಂತೆ ವೆಬ್ ಸೈಟ್ ರೂಪಿಸಲಾಗಿದೆ.

ವೆಬ್ ಸೈಟ್ ಗೆ ಭೇಟಿ ನೀಡುವ ಅಭಿಮಾನಿಗಳಿಗೆ ಹೆಚ್ಚು ಮುದ ನೀಡುವಂತೆ ಪರೂಲ್ ಯಾದವ್ ಅವರ ಸಾಮಾಜಿಕ ಜಾಲತಾಣ ಮತ್ತು ಮೈಕ್ರೋ ಬ್ಲಾಗಿಂಗ್ ಸಂಪರ್ಕಗಳನ್ನೂ ಜೋಡಿಸಲಾಗಿರುವುದು ಇನ್ನೊಂದು ವಿಶೇಷ.

ಅದರ ಜತೆಗೆ ವೆಬ್ ಸೈಟ್ ನಲ್ಲಿ ಚಿತ್ರಗಳು, ವಿಡಿಯೋಗಳು ಮತ್ತು ಪರೂಲ್ ಅವರ ವಿಶೇಷ ಫೋಟೋಗಳೂ ಲಭ್ಯವಿದೆ. ನಟಿಯ ಕೆಲವು ಚಿತ್ರಗಳು ಮತ್ತು ವಾಲ್ ಪೇಪರ್ ಗಳನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಅಭಿಮಾನಿಗಳಿಗೆ ಇನ್ನಷ್ಟು ನಿಕಟವಾಗುವ ಇಚ್ಛೆ

ತನ್ನ ವೆಬ್ ಸೈಟ್ ಕುರಿತು ಮಾತನಾಡಿದ ನಟಿ ಪರೂಲ್ ಯಾದವ್, "ಅಭಿಮಾನಿಗಳಿಗೆ ಇನ್ನಷ್ಟು ನಿಕಟವಾಗುವ ನಿಟ್ಟಿನಲ್ಲಿ ಹಾಗೂ ಸಿನಿಮಾ ಉದ್ಯಮದಲ್ಲಿ ದೀರ್ಘಕಾಲೀನ ಸಂಬಂಧ ಬೆಳೆಸುವ ನಿಟ್ಟಿನಲ್ಲಿ ನನ್ನಂತಹವರು ಟ್ವಿಟ್ಟರ್, ಫೇಸ್ ಬುಕ್ ಹಾಗೂ ವೈಯಕ್ತಿಕ ವೆಬ್ ಸೈಟ್ ಮುಂತಾದ ಆನ್ ಲೈನ್ ಬಹುಮಾಧ್ಯಮಗಳನ್ನು ಬಳಸಿಕೊಳ್ಳುವ ಅಗತ್ಯವಿದೆ...

ಪ್ರೇಕ್ಷಕರನ್ನು ತಲುಪಲು ಇದು ಸುಲಭ ವಿಧಾನ

ಪ್ರೇಕ್ಷಕರು ಆಧುನಿಕ ತಂತ್ರಜ್ಞಾನದ ಬಳಕೆ ಹೆಚ್ಚು ಮಾಡಿದ್ದು, ಮೊಬೈಲ್ ಮತ್ತಿತರ ಸಾಧನಗಳ ಮೂಲಕ ನಟ ನಟಿಯರ ಕುರಿತು ಹಾಗೂ ಅವರ ಸಿನಿಮಾಗಳ ಕುರಿತು ಮಾಹಿತಿಗಳನ್ನು ಬಯಸುತ್ತಿದ್ದು ನಾವು ಈ ಅಂತರವನ್ನು ನೀಗಿಸಬೇಕಾಗಿದೆ. ಅತ್ಯಂತ ಕ್ಷಿಪ್ರ ಸಮಯದಲ್ಲೇ ಲೇಟೆಸ್ಟ್ ಮಾಹಿತಿಗಳನ್ನು ಕೊಡುವ ಮೂಲಕ ಇಂತಹ ಪ್ರೇಕ್ಷಕರನ್ನು ತಲುಪಲು ಇದು ಸುಲಭ ವಿಧಾನ" ಎಂದರು.

ಫೇಸ್ ಬುಕ್ ನಲ್ಲಿ ಸಕ್ರಿಯರಾಗಿದ್ದಾರೆ

ಪರೂಲ್ ಅವರು ಮೈಕ್ರೋ ಬ್ಲಾಗಿಂಗ್ ಸೈಟ್ ಮತ್ತು ಫೇಸ್ ಬುಕ್ ನಲ್ಲಿ ಸಕ್ರಿಯರಾಗಿದ್ದು, ವೈವಿಧ್ಯಮಯ ಗುಂಪಿಗೆ ಸೇರಿದ ಪ್ರೇಕ್ಷಕರನ್ನು ತಲುಪುತ್ತಿದ್ದಾರೆ. ಇವತ್ತು ಸಿನಿಮಾ ಉದ್ಯಮ ಮತ್ತು ತಾರಾ ಸಮೂಹ ಕಾರ್ಪೊರೇಟ್ ಯುಗವನ್ನು ಪ್ರವೇಶಿಸಿದೆ.

ಇಂಟರ್ ನೆಟ್ ಮಾರ್ಕೆಟಿಂಗ್ ಅತ್ಯಗತ್ಯ

ಫೋಟೋ ನೋಡಿಕೊಂಡು ಯಾವುದೇ ನಟಿಯನ್ನು ಆಡಿಷನ್ ಗೆ ಕರೆಯುವ ಕಾಲ ಸಂದುಹೋಗಿದೆ. ಈಗ ಇಂಟರ್ ನೆಟ್ ಮಾರ್ಕೆಟಿಂಗ್ ಯಾವುದೇ ಸೆಲೆಬ್ರಿಟಿ ಅಥವಾ ನಟಿಗೆ ಅತ್ಯಗತ್ಯ.

ಶ್ರಾವಣಿ ಸುಬ್ರಹ್ಮಣ್ಯ ಚಿತ್ರದಲ್ಲಿ ವಿಶೇಷ ಹಾಡು

ನಾನು ಗ್ಯಾಜೆಟ್ ಪ್ರಿಯೆ. ಆನ್ ಲೈನ್ ಪ್ರಚಾರ ನನ್ನಂಥವರಿಗೆ ಅತ್ಯಗತ್ಯ ಎಂದೂ ಪರೂಲ್ ಹೇಳಿದರು. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೂಲ್ಯ ನಟಿಸುತ್ತಿರುವ 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರದ ವಿಶೇಷ ಹಾಡಿನ ಶೂಟಿಂಗ್ ನ್ನು ಪರೂಲ್ ಇತ್ತೀಚೆಗಷ್ಟೇ ಮುಗಿಸಿದ್ದಾರೆ.

ಕೆ.ಎ.ಸುರೇಶ್ ಅವರಿಗೆ ಕೃತಜ್ಞತೆ ಸಲ್ಲಿಸಿದ ಪರೂಲ್

ನನ್ನನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ ಕೆ.ಎ.ಸುರೇಶ್ ಅವರಿಗೆ ಕೃತಜ್ಞತೆ ಸಲ್ಲಿಸಲು ಈ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿದ್ದೇನೆ ಎಂದರು ಪರೂಲ್. ಹಲವು ಖ್ಯಾತ ತಾರೆಯರ ಸಿನಿಮಾಗಳಲ್ಲಿ ವಿಶೇಷ ಹಾಡುಗಳಿಗೆ ನರ್ತಿಸಲು ಆಹ್ವಾನ ಬರುತ್ತಿದೆ.

ಇದೇ ನನ್ನ ಕೊನೆಯ ವಿಶೇಷ ಹಾಡು

ಆದರೆ ಈ ಸಿನಿಮಾದ ವಿಶೇಷ ಹಾಡಿನಲ್ಲಿ ಮಾತ್ರ ನರ್ತಿಸಲು ನಿರ್ಧರಿಸಿದೆ. ಸುರೇಶ್ ಅವರು ನನ್ನನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ್ದಕ್ಕಾಗಿ ಈ ನಿರ್ಧಾರ. ಇದು ನನ್ನ ಜೀವನದ ಮೊದಲ ಮತ್ತು ಕೊನೆಯ ವಿಶೇಷ ಹಾಡಿನ ನೃತ್ಯ ಎಂದು ಅವರು ಹೇಳಿದರು.

English summary
Well-known multilingual actress Parul Yadav has announced the unveiling of her website
 www.parulyadav.com in the presence of the Kannada film fraternity personalities in Bangalore.
 Hit film-maker Pawan Wadyer unveiled the website on Friday.
Please Wait while comments are loading...