»   » ಪತಿಯ ಹಾದಿಯಲ್ಲಿ ಪತ್ನಿ: ಅಂಧರ ಬಾಳಲ್ಲಿ ಹೊಸಬೆಳಕು ಮೂಡಿಸಲಿರುವ 'ದೊಡ್ಮನೆ' ಅಮ್ಮ

ಪತಿಯ ಹಾದಿಯಲ್ಲಿ ಪತ್ನಿ: ಅಂಧರ ಬಾಳಲ್ಲಿ ಹೊಸಬೆಳಕು ಮೂಡಿಸಲಿರುವ 'ದೊಡ್ಮನೆ' ಅಮ್ಮ

Posted By:
Subscribe to Filmibeat Kannada

ಅಂಧತ್ವದ ಕತ್ತಲಿನಲ್ಲಿ ಇರುವ ಜನರ ಬದುಕಿನಲ್ಲಿ ಆಶಾಕಿರಣ ಮೂಡಿಸಲು ಕನ್ನಡ ಚಿತ್ರರಂಗದ ವರನಟ, ಪದ್ಮಭೂಷಣ ಡಾ.ರಾಜ್ ಕುಮಾರ್ ನೇತ್ರದಾನ ಮಾಡಿ ಸಮಾಜಕ್ಕೆ ಮಾದರಿ ಆದರು.

ಇದೀಗ ಪತಿಯ ಹಾದಿಯಲ್ಲೇ ಧರ್ಮಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಕೂಡ ಸಾಗಿದ್ದಾರೆ. ಜೀವನದುದ್ದಕ್ಕೂ ಪತಿ ಡಾ.ರಾಜ್ ಆದರ್ಶ ಪಾಲಿಸಿದ್ದ ಪತ್ನಿ ಪಾರ್ವತಮ್ಮ, ಸಾವಿನ ನಂತರವೂ ಅದೇ ಮಾರ್ಗವನ್ನ ಅನುಸರಿಸಿದ್ದಾರೆ.[ಆರಿದ 'ದೊಡ್ಮನೆ' ದೀಪ: ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಇನ್ನಿಲ್ಲ]

Parvathamma Rajkumar donated her eyes

'ನೇತ್ರದಾನ ಮಹಾದಾನ' ಎಂದು ನಂಬಿದ್ದ ರಾಜಣ್ಣ, ತಮ್ಮ ದೇಹಾಂತ್ಯದ ಬಳಿಕ ಕಣ್ಣುಗಳನ್ನು ದಾನ ಮಾಡಿದ್ದರು. ಅವರಂತೆಯೇ, ಅವರ ಪತ್ನಿ ಪಾರ್ವತಮ್ಮ ಕೂಡ ತಮ್ಮ ಕಣ್ಣುಗಳನ್ನು ದಾನ ನೀಡಿದ್ದಾರೆ. ಈ ವಿಚಾರವನ್ನ 'ನಾರಾಯಣ ನೇತ್ರಾಲಯ'ದ ಮುಖ್ಯಸ್ಥ ಡಾ.ಭುಜಂಗ ಶೆಟ್ಟಿ ತಿಳಿಸಿದ್ದಾರೆ.[ಪಾರ್ವತಮ್ಮ ರಾಜ್ ಕುಮಾರ್ ನಿಧನ: ಸದಾಶಿವನಗರದ ನಿವಾಸದಲ್ಲಿ ಅಂತಿಮ ದರ್ಶನ ]

ಡಾ.ಭುಜಂಗ ಶೆಟ್ಟಿ ರವರ ನೇತೃತ್ವದಲ್ಲಿಯೇ ನಾಳೆ ಇಬ್ಬರು ಅಂಧರಿಗೆ ಪಾರ್ವತಮ್ಮ ನವರ ಎರಡು ಕಣ್ಣುಗಳನ್ನ ಅಳವಡಿಸಲಾಗುತ್ತದೆ.

ಭೌತಿಕವಾಗಿ ಆರಿ ಹೋದ 'ದೊಡ್ಮನೆ' ದೀಪ ಅಂಧರ ಬಾಳಲ್ಲಿ ಹೊಸ ಬೆಳಕು ಮೂಡಿಸಲಿದೆ.

English summary
Parvathamma Rajkumar, wife of Dr.Rajkumar, Kannada Movie Producer, passes away in Bengaluru today (May 31st). Like her husband, she too donated her eyes.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada