For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್ ಕುಮಾರ್ 'ರಣವಿಕ್ರಮ'ಗೆ ಪಾರ್ವತಿ

  By Rajendra
  |

  ಇವರಿಬ್ಬರದ್ದೂ ಹಿಟ್ ಫೇರ್ ಎಂದು 'ಮಿಲನ' ಚಿತ್ರದಲ್ಲೇ ಗೊತ್ತಾಗಿತ್ತು. ಪುನೀತ್ ಅಭಿನಯಿಸಿದ ಚಿತ್ರಗಳಲ್ಲೇ 'ಮಿಲನ' ಚಿತ್ರಕ್ಕೆ ಒಂದು ವಿಶೇಷ ಪ್ರಾಧಾನ್ಯತೆ ಇದೆ. ಇಂದಿಗೂ ಅಭಿಮಾನಿಗಳು ಬಹಳವಾಗಿ ಇಷ್ಟಪಡುವ ಚಿತ್ರವಿದು.

  ಈಗ 'ಮಿಲನ' ಜೋಡಿ ಮತ್ತೆ ಒಂದಾಗುತ್ತಿದೆ. ಪುನೀತ್ ಅವರ ಮುಂದಿನ ಚಿತ್ರ ರಣವಿಕ್ರಮದಲ್ಲಿ ಪಾರ್ವತಿ ಅಭಿನಯಿಸುತ್ತಿದ್ದಾರೆ. ಪವನ್ ಒಡೆಯರ್ ಆಕ್ಷನ್ ಕಟ್ ಹೇಳುತ್ತಿರುವ 'ರಣವಿಕ್ರಮ' ಶೀರ್ಷಿಕೆಯನ್ನು ಧೀರ ರಣವಿಕ್ರಮ ಎಂದು ಬದಲಾಯಿಸಲಾಗಿದೆ. ['ರಣ ವಿಕ್ರಮ' ಥ್ರಿಲ್ಲಿಂಗ್ ಡೀಟೇಲ್ಸ್]

  ಜಯಣ್ಣ ಹಾಗೂ ಭೋಗೇಂದ್ರ ನಿರ್ಮಿಸುತ್ತಿರುವ ಚಿತ್ರ ಇದಾಗಿದ್ದು ಅದಾಗಲೇ ಫೊಟೋಶೂಟ್ ಸಹ ಮುಗಿದಿದೆ. ಚಿತ್ರದಲ್ಲಿ ಪಾರ್ವತಿ ಅವರು ಗಮನಾರ್ಹ ಪಾತ್ರ ಎನ್ನಲಾಗಿದೆ. ಚಿತ್ರಕ್ಕೆ ಹೀರೋಯಿನ್ ಆಯ್ಕೆ ಇನ್ನಷ್ಟೇ ನಡೆಯಬೇಕು.

  ಮಾರ್ಚ್ ತಿಂಗಳಲ್ಲಿ ಮುಹೂರ್ತ ನಡೆಯಲಿದ್ದು ಏಪ್ರಿಲ್ ಮೊದಲ ವಾರದಲ್ಲಿ ಧೀರ ರಣವಿಕ್ರಮ ಚಿತ್ರ ಸೆಟ್ಟೇರಲಿದೆ. ಪುನೀತ್ ಇಲ್ಲಿವರೆಗೂ ಮಾಡಿರದ ಒಂದು ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಪವರ್ ಸ್ಟಾರ್ 'ರಣ ವಿಕ್ರಮ' ಸಿನಿಮಾದಲ್ಲಿ ಪವರ್ ಫುಲ್ ಪೊಲೀಸ್ ಆಫೀಸರ್. ಸಿನಿಮಾದಲ್ಲಿ 'ವಿಕ್ರಮ.. ರಣವಿಕ್ರಮ ಐಪಿಎಸ್' ಅನ್ನೋ ಪವರ್ ಫುಲ್ ಡೈಲಾಗ್ ಹೊಡೆದ್ರೂ ಅಚ್ಚರಿಯಿಲ್ಲ. (ಏಜೆನ್ಸೀಸ್)

  English summary
  Actress Parvathi Menon again teaming up with Puneeth Rajkumar in upcoming movie Rana Vikrama. Puneeth plays a tough police officer in the movie directed by Pawan Wadyar. It is to be produced by Jayanna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X