Just In
Don't Miss!
- News
ಖಾತೆ ಹಂಚಿಕೆ ಅಸಮಾಧಾನ: ಸಚಿವ ಸ್ಥಾನಕ್ಕೆ ಜೆ.ಸಿ. ಮಾಧುಸ್ವಾಮಿ ರಾಜೀನಾಮೆ?
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈಯ್ನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Automobiles
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅಚ್ಚರಿ ಸ್ಟಾರ್ ಗಳು.!

ರಾಜಕೀಯ ಪಕ್ಷಗಳ ಪರವಾಗಿ ಸಿನಿತಾರೆಯರು ಪ್ರಚಾರ ಮಾಡುತ್ತಿದ್ದು, ಕಿಚ್ಚ ಸುದೀಪ್ ಸಿಎಂ ಪರವಾಗಿ ಮತಯಾಚನೆ ಮಾಡ್ತಾರೆ ಎಂಬ ಸುದ್ದಿ ಇಂದು ದೊಡ್ಡ ಚರ್ಚೆಯಾಗಿತ್ತು. ಕೊನೆಗೆ ಇದು ಸುಳ್ಳು, ಸುದೀಪ್ ಯಾರ ಪರವಾಗಿಯೂ ಪ್ರಚಾರ ಮಾಡುತ್ತಿಲ್ಲ ಎಂದು ಸುದೀಪ್ ಅವರ ಆಪ್ತ ಮೂಲಗಳ ತಿಳಿಸಿದರು. ಆದ್ರೆ, ಈ ಬಗ್ಗೆ ಇನ್ನು ನಿಖರ ಮಾಹಿತಿ ಸಿಕ್ಕಿಲ್ಲ.
ಇದೀಗ ಮತ್ತೊಂದು ಅಚ್ಚರಿ ಬೆಳವಣಿಗೆ ನಡೆದಿದೆ. ಜೆಡಿಎಸ್ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಕಿಚ್ಚ ಸುದೀಪ್ ಅವರ ಹೆಸರು ನಮೂದಿಸಲಾಗಿದೆ. ಇದು ಮತ್ತಷ್ಟು ಶಾಕ್ ನೀಡಿದೆ.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದಂತೆ ನನ್ನ ಪರವಾಗಿ ಸುದೀಪ್ ಪ್ರಚಾರಕ್ಕೆ ಬರ್ತಾರೆ ಎಂದಿದ್ದರು. ಅದರಂತೆ ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಪ್ರಚಾರ ಮಾಡ್ತಾರೆ ಎನ್ನಲಾಯಿತು. ಆಮೇಲೆ ಏನಾಯ್ತೋ ಗೊತ್ತಿಲ್ಲ. ಇದೆಲ್ಲ ವದಂತಿ ಎಂದುಬಿಟ್ಟರು. ಮುಂದೆ ಓದಿ.....

ಸುದೀಪ್ ಜೆಡಿಎಸ್ ಪಕ್ಷದ ಸ್ಟಾರ್ ಪ್ರಚಾರಕ
ಜೆಡಿಎಸ್ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸುದೀಪ್ ಹೆಸರಿರುವುದು ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಅವರ ಪರವಾಗಿಯೇ ಪ್ರಚಾರ ಮಾಡ್ತಾರ ಅಥವಾ ಇಲ್ವಾ ಎನ್ನುವುದರ ಬಗ್ಗೆ ಇನ್ನು ನಿರ್ಧಾರವಾಗಿಲ್ಲ. ಈ ಮಧ್ಯೆ ಜೆಡಿಎಸ್ ಪಕ್ಷದ ಸುದೀಪ್ ಹೆಸರು ಜೋರಾಗಿ ಹರಿದಾಡುತ್ತಿದೆ. ಅಂದ್ಹಾಗೆ, ಏಪ್ರಿಲ್ 21 ರಂದು ಬಿಡುಗಡೆಯಾಗಿದ್ದ ಪಟ್ಟಿಯಲ್ಲಿ ಸುದೀಪ್ ಹೆಸರಿದೆ.

ಈ ಹಿಂದಿನ ಭೇಟಿ ರಹಸ್ಯ ಬಯಲು
ಈ ಹಿಂದೆ ಎರಡು ಭಾರಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸುದೀಪ್ ಭೇಟಿ ಮಾಡಿದ್ದರು. ಆಗಲೇ ಬಹುತೇಕ ಖಚಿತವಾಗಿತ್ತು. ಜೆಡಿಎಸ್ ಪರವಾಗಿ ಸುದೀಪ್ ಪ್ರಚಾರ ಮಾಡಬಹುದು ಎಂದು. ಆದ್ರೀಗ, ಅಧಿಕೃತವಾಗಿ ಪಟ್ಟಿ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ.

ಪವನ್ ಕಲ್ಯಾಣ್ ಬರ್ತಾರೆ.!
ಇನ್ನು ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಹೆಸರು ಕೂಡ ಈ ಪಟ್ಟಿಯಲ್ಲಿದೆ. ಈ ಹಿಂದೆ ಪವನ್ ಕಲ್ಯಾಣ್ ಅವರನ್ನ ಕೂಡ ಕುಮಾರಸ್ವಾಮಿ ಅವರು ಭೇಟಿ ಮಾಡಿ ಚರ್ಚಿಸಿದ್ದರು.

ಪೂಜಾ ಗಾಂಧಿ ಮತ್ತು ಅಮೂಲ್ಯ.!
ಇನ್ನು ಇವರ ಜೊತೆ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದ ನಟಿ ಪೂಜಾ ಗಾಂಧಿ ಮತ್ತು ಅಮೂಲ್ಯ ಅವರು ಕೂಡ ಪಕ್ಷದ ಪರವಾಗಿ ಮತ್ತು ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ ಎಂಬುದು ಮಾಹಿತಿ. ಇದು ಏಫ್ರಿಲ್ 21 ರಂದು ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಇರುವ ಹೆಸರುಗಳು. ನಂತರ ಬದಲಾಗಿದ್ದರೂ ಅಚ್ಚರಿಯಿಲ್ಲ.