For Quick Alerts
  ALLOW NOTIFICATIONS  
  For Daily Alerts

  ಮೊದಲ ಮಗುವಿನ ನಿರೀಕ್ಷೆಯಲ್ಲಿ ನಿರ್ದೇಶಕ ಪವನ್ ಒಡೆಯರ್ ದಂಪತಿ: ಬೇಬಿ ಬಂಪ್ ಫೋಟೋಶೂಟ್ ವೈರಲ್

  |

  ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಮತ್ತು ನಟಿ ಅಪೇಕ್ಷಾ ಪುರೋಹಿತ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಂದೆ-ತಾಯಿ ಆಗುತ್ತಿರುವ ಸಂತಸವನ್ನು ದಂಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪವನ್ ಮತ್ತು ಅಪೇಕ್ಷಾ ದಂಪತಿಗೆ ಅಭಿಮಾನಿಗಳು, ಸ್ನೇಹಿತರು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.

  ನಟಿ ಅಪೇಕ್ಷಾ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದು, ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪತ್ನಿಯ ಜೊತೆ ಪವನ್ ಒಡೆಯರ್ ಸಹ ಕ್ಯಾಮರಾಗೆ ಫೋಸ್ ನೀಡಿದ್ದಾರೆ. ತರಹೇವಾರಿ ರೀತಿಯಲ್ಲಿ ಇಬ್ಬರು ಕ್ಯಾಮರಾಗೆ ಪೋಸ್ ನೀಡಿದ್ದು. ಈ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸುತ್ತಿವೆ. ಮುಂದೆ ಓದಿ...

  ಈ ಇಬ್ಬರು ನಟರೊಂದಿಗೆ ಸಿನಿಮಾ ಮಾಡುವಂತೆ ಪವನ್ ಒಡೆಯರ್‌ ಗೆ ಒತ್ತಾಯಈ ಇಬ್ಬರು ನಟರೊಂದಿಗೆ ಸಿನಿಮಾ ಮಾಡುವಂತೆ ಪವನ್ ಒಡೆಯರ್‌ ಗೆ ಒತ್ತಾಯ

  'ವಟ ವಟ ಮಾತನಾಡುವ ನಾನು, ಮೌನಿಯಾದ ಕ್ಷಣಗಳು'

  'ವಟ ವಟ ಮಾತನಾಡುವ ನಾನು, ಮೌನಿಯಾದ ಕ್ಷಣಗಳು'

  ಫೋಟೋ ಜೊತೆಗೆ ಪವನ್ "ಸದಾ ವಟ ವಟ ಮಾತನಾಡುವ ನಾನು. ಮೌನಿಯಾದ ಕ್ಷಣಗಳು. ಹೌದು ನಮ್ಮ ಜೀವನದ ಅತ್ಯಂತ ಸುಂದರ ದಿನಗಳಿಗಾಗಿ ಹಾತೊರೆಯುತ್ತಿದ್ದೇವೆ. ಮಾತುಗಳಲ್ಲಿ ಆ ಖುಷಿ ಹೇಳಲಾಗದೆ. ಹಡಿನರೂಪದಲ್ಲಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದೇವೆ. ಆ ಮುಗುಳುನಗೆ ಹಾಡಿಗಾಗಿ ನಿರೀಕ್ಷಿಸಿ." ಎಂದು ಬರೆದುಕೊಂಡಿದ್ದಾರೆ.

  ಸದ್ಯದಲ್ಲೇ ರಿಲೀಸ್ ಆಗಲಿದೆ ಹಾಡು

  ಸದ್ಯದಲ್ಲೇ ರಿಲೀಸ್ ಆಗಲಿದೆ ಹಾಡು

  ಹಾಡಿನ ಮೂಲಕ ತಂದೆಯಾಗುತ್ತಿರುವ ಖುಷಿಯನ್ನು ಪವನ್ ವ್ಯಕ್ತಪಡಿಸಿದ್ದಾರೆ. ಸದ್ಯದಲ್ಲೇ ಈ ಹಾಡನ್ನು ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಈ ಹಾಡನ್ನು ಖುದ್ದು ಪವನ್ ಒಡೆಯರ್ ಅವರೇ ಬರೆದಿದ್ದಾರೆ. ಆ ಹಾಡಿಗೆ ಪ್ರವೀಣ್ ಆಲಿವರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದ್ದೂರಿಯಾಗಿ ಚಿತ್ರೀಕರಿಸಿರುವ ಈ ಹಾಡನ್ನು ಅಕ್ಟೋಬರ್ 11ರಂದು ರಿಲೀಸ್ ಮಾಡುತ್ತಿದ್ದಾರೆ.

  ನಟ, ನಿರ್ದೇಶಕ, ಬರಹಗಾರರಾಗಬೇಕು ಎಂದುಕೊಂಡವರಿಗೆ ಅವಕಾಶ ಕೊಡ್ತಾರಂತೆ ಈ ನಿರ್ದೇಶಕನಟ, ನಿರ್ದೇಶಕ, ಬರಹಗಾರರಾಗಬೇಕು ಎಂದುಕೊಂಡವರಿಗೆ ಅವಕಾಶ ಕೊಡ್ತಾರಂತೆ ಈ ನಿರ್ದೇಶಕ

  2018ರಲ್ಲಿ ಮದುವೆಯಾಗಿದ್ದ ಜೋಡಿ

  2018ರಲ್ಲಿ ಮದುವೆಯಾಗಿದ್ದ ಜೋಡಿ

  ಪವನ್ ಮತ್ತು ಅಪೇಕ್ಷಾ ಇಬ್ಬರು 2018 ಮೇ 20ರಂದು ಹಸೆಮಣೆ ಏರಿದ್ದರು. ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯಲ್ಲಿ ಇಬ್ಬರು ಅದ್ದೂರಿಯಾಗಿ ಮದುವೆಯಾಗಿದ್ದರು. ಅಪೇಕ್ಷಾ ಪುರೋಹಿತ್ ಕನ್ನಡದ ಕಿರುತೆರೆ ನಟಿಯಾಗಿ ಖ್ಯಾತಿಗಳಿಸಿದ್ದರು. ತ್ರಿವೇಣಿ ಸಂಗಮ, ಸೊಸೆ ತಂದ ಸೌಭಾಗ್ಯ, ಸಾಗುತಾ ದೂರ ದೂರ, ಮರಳಿ ಬಂದಳು ಸೀತೆ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆ ಬಳಿಕ ಟಿ.ಎನ್ ಸೀತಾರಾಮ್ ನಿರ್ದೇಶನದ ಕಾಫಿ ತೋಟ ಸಿನಿಮಾದಲ್ಲಿಯೂ ಮಿಂಚಿದ್ದಾರೆ.

  ಅತ್ತಿಗೆ ಸೀಮಂತ ಮುಗಿಸಿದ ದೊಡ್ಡ ಮನವಿಯೊಂದನ್ನು ಮಾಡಿಕೊಂಡ Dhruva Sarja | Filmibeat Kannada
  'ರೆಮೋ' ಸಿನಿಮಾದಲ್ಲಿ ಪವನ್ ಒಡೆಯರ್ ಬ್ಯುಸಿ

  'ರೆಮೋ' ಸಿನಿಮಾದಲ್ಲಿ ಪವನ್ ಒಡೆಯರ್ ಬ್ಯುಸಿ

  ಪವನ್ ಒಡೆಯರ್ ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್, ಮತ್ತು ನಟ ಸಾರ್ವಭೌಮ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಪವನ್ 'ರೆಮೋ' ಸಿನಿಮಾದ ನಿರ್ದೇಶನದಲ್ಲಿ ನಿರತರಾಗಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಇಶಾನ್ ಮತ್ತು ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Pawan wadeyar and Apeksha Purohit expecting their first baby.Pawan wadeyar creates a special song for his wife.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X