For Quick Alerts
  ALLOW NOTIFICATIONS  
  For Daily Alerts

  ರೈತನಾಗಿ ಟ್ರ್ಯಾಕ್ಟರ್ ಚಾಲನೆ ಮಾಡಿದ ನಿರ್ದೇಶಕ ಪವನ್ ಒಡೆಯರ್

  |

  ಕೊರೊನಾ ವೈರಸ್‌ನಿಂದ ಶೂಟಿಂಗ್‌ಗೆ ಬ್ರೇಕ್ ಕೊಟ್ಟಿರುವ ಪವನ್ ಒಡೆಯರ್ ತಮ್ಮ ಊರಿಗೆ ಹೋಗಿ ಸಮಯ ಕಳೆಯುತ್ತಿದ್ದಾರೆ. ಈ ನಡುವೆ ಸಿನಿಮಾ ನಿರ್ದೇಶನ ಬಿಟ್ಟು ಜಗತ್ತಿನ ಶ್ರೇಷ್ಠ ಕೆಲಸ ಆಯ್ಕೆ ಮಾಡಿಕೊಂಡಿದ್ದಾರೆ.

  ಹೀಗಂತ ನಾವು ಹೇಳ್ತಿಲ್ಲ, ಸ್ವತಃ ಪವನ್ ಒಡೆಯರ್ ತಮ್ಮ ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡು 'ಜಗತ್ತಿನ ಶ್ರೇಷ್ಠ ಕೆಲಸ' ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

  ಸೀಮಂತ ಸಂಭ್ರಮದಲ್ಲಿ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ಸೀಮಂತ ಸಂಭ್ರಮದಲ್ಲಿ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್

  ಹೌದು, ಸ್ಟಾರ್ ನಿರ್ದೇಶಕ ಪವನ್ ಒಡೆಯರ್ ರೈತನಾಗಿ ಟ್ರ್ಯಾಕ್ಟರ್ ಚಾಲನೆ ಮಾಡಿರುವುದು ಗಮನ ಸೆಳೆದಿದೆ. ತಮ್ಮ ತೋಟದಲ್ಲಿ ಟ್ರ್ಯಾಕ್ಟರ್ ಮೂಲಕ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

  ಪವನ್ ಒಡೆಯರ್ ಚೊಚ್ಚಲ ಮಗುವಿಗೆ ತಂದೆಯಾಗುತ್ತಿದ್ದು, ಈಗಷ್ಟೇ ತಮ್ಮ ಪತ್ನಿ ಆಪೇಕ್ಷಾ ಅವರ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ. ಈ ಫೋಟೋಗಳ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಕೊರೊನಾ ವೈರಸ್ ಸಮಯದಲ್ಲಿ 'ಬದಲಾಗು ನೀನು....' ಎಂಬ ಜಾಗೃತಿ ಹಾಡು ಚಿತ್ರೀಕರಿಸಿದ್ದರು. ಈ ಹಾಡಿನಲ್ಲಿ ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಇಂಡಸ್ಟ್ರಿಯ ಬಹುತೇಕ ಕಲಾವಿದರು ಕಾಣಿಸಿಕೊಂಡಿದ್ದರು.

  ಜೈಲಲ್ಲೇ Sanjana ಆಸೆಯನ್ನು ಈಡೇರಿಸ್ತಾರ ಪೊಲೀಸರು | Sanjana 31st Birthday | Filmibeat Kannada

  ಇನ್ನು ನಟಸಾರ್ವಭೌಮ ಸಿನಿಮಾದ ಬಳಿಕ ರೆಮೋ ಎಂಬ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಬಹುತೇಕ ಚಿತ್ರೀಕರಂ ಮುಗಿಸಿರುವ ಪವನ್ ಒಡೆಯರ್, ಅಂತಿಮ ಹಂತದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಉಳಿಸಿಕೊಂಡಿದ್ದಾರೆ.

  English summary
  Kannada film director Pawan Wadeyar turns farmer; Drives tractor in his farmland.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X