For Quick Alerts
  ALLOW NOTIFICATIONS  
  For Daily Alerts

  ಪಿಸಿ ಶೇಖರ್ ಹೊಸ ಚಿತ್ರಕ್ಕೆ 'ಟಗರು' ಪೋರಿ ಮಾನ್ವಿತಾ ಕಾಮತ್ ನಾಯಕಿ

  |

  ಕನ್ನಡ ಚಿತ್ರರಂಗದಲ್ಲಿ ತನ್ನದೇ ವಿಭಿನ್ನ ಶೈಲಿಯಲ್ಲಿ ಸಿನಿಮಾಗಳನ್ನು ಮಾಡುತ್ತಾ ಬಂದಿರುವ ನಿರ್ದೇಶಕ ಪಿಸಿ ಶೇಖರ್. ಗೋಲ್ಡನ್ ಸ್ಟಾರ್ ಗಣೇಶ್, ಪ್ರಜ್ವಲ್ ದೇವರಾಜ್, ಮಿತ್ರ ಅಂತಹ ಕಲಾವಿದರ ಜೊತೆ ವಿಶೇಷವಾದ ಸಿನಿಮಾ ಚಿತ್ರಗಳನ್ನು ಮಾಡಿರುವ ಪಿಸಿ ಶೇಖರ್ ಈಗ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ.

  ಇದು ಪಿಸಿ ಶೇಖರ್ ನಿರ್ದೇಶನ ಮಾಡಲಿರುವ ಒಂಬತ್ತನೇ ಸಿನಿಮಾ ಎನ್ನುವುದು ವಿಶೇಷ. ಈ ಚಿತ್ರದಲ್ಲಿ ಕನ್ನಡ ಯುವ ನಟಿ ಮಾನ್ವಿತಾ ಕಾಮತ್ ನಾಯಕಿಯಾಗಿ ಆಯ್ಕೆಯಾಗಿರುವ ವಿಚಾರ ಹೊರಬಿದ್ದಿದೆ. ಈ ಚಿತ್ರದಲ್ಲಿರುವ ಪಾತ್ರಕ್ಕೆ ಮಾನ್ವಿತಾ ಸೂಕ್ತ ಆಯ್ಕೆ ಎಂದು ನಿರ್ಧರಿಸಿರುವ ನಿರ್ದೇಶಕರು, ಟಗರು ಪೋರಿಯನ್ನು ಸೆಲೆಕ್ಟ್ ಮಾಡಿಕೊಂಡಿದ್ದಾರೆ.

  ಕೊರೊನಾ ಲಾಕ್‌ಡೌನ್‌ನಿಂದ ಬಹಳ ಸೈಲೆಂಟ್ ಆಗಿದ್ದ ನಟಿ ಮಾನ್ವಿತಾ ಕಾಮತ್, ಈಗ ಪಿಸಿ ಶೇಖರ್ ಅವರ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರದೊಂದಿಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಪಾತ್ರ ಮಾನ್ವಿತಾ ಪಾಲಿಗೆ ಬಹಳ ವಿಭಿನ್ನ ಮತ್ತು ವಿಶೇಷವಾಗಿರಲಿದೆ ಎಂದು ನಿರ್ದೇಶಕ ಪಿಸಿ ಶೇಖರ್ ಫಿಲ್ಮಿಬೀಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

  ಅಪ್ಪ ಸಿಕ್ಕಿದ್ದು ಹೀಗೆ: ನಟಿ ಮಾನ್ವಿತಾ ಕಾಮತ್ ಹಂಚಿಕೊಂಡ ಈ ಚಿತ್ರದ ಹಿಂದಿದೆ ನೋವಿನ ಕಥೆಅಪ್ಪ ಸಿಕ್ಕಿದ್ದು ಹೀಗೆ: ನಟಿ ಮಾನ್ವಿತಾ ಕಾಮತ್ ಹಂಚಿಕೊಂಡ ಈ ಚಿತ್ರದ ಹಿಂದಿದೆ ನೋವಿನ ಕಥೆ

  ಮಾನ್ವಿತಾ ಈ ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಳ್ಳಿ ಹುಡುಗಿ ಅಂದಾಕ್ಷಣ ಲಂಗ ದಾವಣಿ ಹಾಕ್ಕೊಂಡು ಮುಗ್ದವಾಗಿ ಇರೋದಲ್ಲ. ಅದಕ್ಕೆ ಸಂಪೂರ್ಣ ವಿರುದ್ಧ ಪಾತ್ರ. ಹಳ್ಳಿ ಹುಡುಗಿಯೇ, ಆದರೆ ಬಹಳ ಜೋರು ಇರ್ತಾರೆ. ಪುರುಷರು ಮಾಡುವ ಎಲ್ಲಾ ಕೆಲಸಗಳನ್ನು ಈಕೆ ಮಾಡುವಷ್ಟು ಶಕ್ತವಾಗಿರ್ತಾರೆ. ಹಳ್ಳಿಗಳಲ್ಲಿ ಹೆಣ್ಣಿನ ಬಗ್ಗೆ ಇರುವ ಪರಿಕಲ್ಪನೆಗೆ ತದ್ವಿರುದ್ದ ಪಾತ್ರ. ಸಂಸ್ಕ್ರತಿ, ಮಡಿವಂತಿಕೆ, ವ್ಯವಸ್ಥೆಗಳನ್ನು ಮೀರಿದ ಹುಡುಗಿ. ಒಂದು ರೀತಿ ಹೋರಾಟಗಾರ್ತಿ ಇದ್ದಂತೆ ಎಂದು ಪಾತ್ರದ ವಿವರಣೆ ಕೊಟ್ಟರು. ಮುಂದೆ ಓದಿ...

  ಬೋಲ್ಡ್ ಹುಡುಗಿ ಪಾತ್ರದಲ್ಲಿ ಮಾನ್ವಿತ

  ಬೋಲ್ಡ್ ಹುಡುಗಿ ಪಾತ್ರದಲ್ಲಿ ಮಾನ್ವಿತ

  ''ಮಾನ್ವಿತಾ ಜೊತೆ ಮೊದಲ ಸಲ ಕೆಲಸ ಮಾಡ್ತಿದ್ದೇನೆ. ಇದರಲ್ಲಿ ಅವರು ಬೋಲ್ಡ್ ಆಗಿ ನಟಿಸಲಿದ್ದಾರೆ. ಹಾಗಂತ, ಇದು ಮಹಿಳಾ ಪ್ರಧಾನ ಕಥೆ ಹೊಂದಿರುವ ಚಿತ್ರವಲ್ಲ. ಇದು ರೆಗ್ಯುಲರ್ ಕಮರ್ಷಿಯಲ್ ಸಿನಿಮಾ. ಈ ಚಿತ್ರದಲ್ಲಿ ಹೀರೋ ಇದ್ದಾರೆ. ಸದ್ಯಕ್ಕೆ ನಾಯಕಿ ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ'' ಎಂದು ನಿರ್ದೇಶಕರು ಮಾಹಿತಿ ನೀಡಿದರು.

  ಆಗಸ್ಟ್ ತಿಂಗಳಲ್ಲಿ ಶೂಟಿಂಗ್

  ಆಗಸ್ಟ್ ತಿಂಗಳಲ್ಲಿ ಶೂಟಿಂಗ್

  ಸದ್ಯಕ್ಕೆ ನಾಯಕಿಯನ್ನು ಮಾತ್ರ ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರು ಆಗಸ್ಟ್ ತಿಂಗಳಲ್ಲಿ ಚಿತ್ರೀಕರಣ ಶುರು ಮಾಡುವ ಯೋಜನೆ ಹೊಂದಿದ್ದಾರೆ. ಇನ್ನುಳಿದಂತೆ ನಾಯಕನಟ ಹಾಗೂ ಪೋಷಕ ಕಲಾವಿದರ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸದ್ಯದಲ್ಲೇ ಈ ಪಾತ್ರಗಳನ್ನು ಸಹ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

  ತೆಲುಗು ಸಿನಿಮಾರಂಗಕ್ಕೆ ಕಾಲಿಟ್ಟ ಕನ್ನಡದ ಮತ್ತೋರ್ವ ಖ್ಯಾತ ನಟಿತೆಲುಗು ಸಿನಿಮಾರಂಗಕ್ಕೆ ಕಾಲಿಟ್ಟ ಕನ್ನಡದ ಮತ್ತೋರ್ವ ಖ್ಯಾತ ನಟಿ

  ಅರ್ಜುನ್ ಜನ್ಯ ಸಂಗೀತ

  ಅರ್ಜುನ್ ಜನ್ಯ ಸಂಗೀತ

  ಚಿತ್ರದ ತಾಂತ್ರಿಕ ವರ್ಗದ ಬಗ್ಗೆ ಹೇಳುವುದಾದರೆ ನಾದ ಕಿರಣ್ ಪಿಕ್ಚರ್ಸ್ ಅಡಿಯಲ್ಲಿ ಎಸ್‌ಆರ್ ವೆಂಕಟೇಶ್ ಗೌಡ ಅವರು ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಈ ಚಿತ್ರಕ್ಕೂ ಸಂಗೀತ ಒದಗಿಸುತ್ತಿದ್ದಾರೆ. ಪಿಸಿ ಶೇಖರ್ ಅವರ ಈ ಹಿಂದಿನ ಎಲ್ಲಾ ಚಿತ್ರಗಳಿಗೂ ಜನ್ಯ ಮ್ಯೂಸಿಕ್ ಕೊಟ್ಟಿದ್ದಾರೆ. ಶಕ್ತಿ ಶೇಖರ್ ಛಾಯಾಗ್ರಾಹಕಾರಗಿ ಕೆಲಸ ಮಾಡಲಿದ್ದಾರೆ. ಸಚಿನ್ ಜಗದೀಶ್ವರ್ ಎಸ್‌ಬಿ ಸಂಭಾಷಣೆ ಮಾಡ್ತಿದ್ದು, ಕಲಾ ವಿಭಾಗದಲ್ಲಿ ರಾಜಶೇಖರ ಕೆಲಸ ಮಾಡಲಿದ್ದಾರೆ. ಸಚಿನ್ ಜಗದೀಶ್ವರ್ ಈ ಹಿಂದೆ 'ರಾಗ' ಮತ್ತು 'ದಿ ಟೆರರಿಸ್ಟ್' ಅಂತಹ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು.

  ಪಿಸಿ ಶೇಖರ್ ಸಿನಿಮಾಗಳು

  ಪಿಸಿ ಶೇಖರ್ ಸಿನಿಮಾಗಳು

  ಅದ್ಹಾಗೆ, ಪಿಸಿ ಶೇಖರ್ ಇದುವರೆಗೂ ಎಂಟು ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. 2006ರಲ್ಲಿ 'ಕಾದಲೇ ಎನ್ ಕಾದಲೇ' ಎಂಬ ತಮಿಳು ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶನ ಶುರು ಮಾಡಿದ ಪಿಸಿ ಶೇಖರ್ ನಂತರ ಕನ್ನಡ ಇಂಡ್ಟ್ರಿಯಲ್ಲಿ ನೆಲೆ ಕಂಡರು. 2010ರಲ್ಲಿ 'ನಾಯಕ್', 2012ರಲ್ಲಿ 'ರೊಮಿಯೋ', 2013ರಲ್ಲಿ 'ಚಡ್ಡಿ ದೋಸ್ತ್', 2015ರಲ್ಲಿ 'ಅರ್ಜುನ್', 2016ರಲ್ಲಿ 'ಸ್ಟೈಲ್ ಕಿಂಗ್', 2017ರಲ್ಲಿ 'ರಾಗ' ಹಾಗೂ 2018ರಲ್ಲಿ 'ದಿ ಟೆರರಿಸ್ಟ್' ಎಂಬ ಚಿತ್ರಗಳನ್ನು ನಿರ್ದೇಶಿಸಿದರು.

  ಎರಡು ವರ್ಷದ ನಂತರ ಕಂಬ್ಯಾಕ್

  ಎರಡು ವರ್ಷದ ನಂತರ ಕಂಬ್ಯಾಕ್

  ಅದಾದ ಮೇಲೆ ಸಿನಿಮಾಗೆ ಸಣ್ಣ ಬ್ರೇಕ್ ಕೊಟ್ಟ ಪಿಸಿ ಶೇಖರ್, ಜಾಹೀರಾತುಗಳಲ್ಲಿ ತೊಡಗಿಕೊಂಡಿದ್ದರು. ಚೆನ್ನೈನ ಪ್ರತಿಷ್ಠಿತ ಕಂಪನಿಗಳಿಗೆ ಜಾಹೀರಾತು ನಿರ್ದೇಶನ ಮಾಡುವ ಅವಕಾಶ ಗಿಟ್ಟಿಸಿಕೊಂಡು, ಅದರಲ್ಲಿ ಕೆಲಸ ಮಾಡಿದ್ದರು. ಈಗ ಮತ್ತೆ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಮಾಡಿರುವ ಪಿಸಿ ಶೇಖರ್ ಒಂದೊಳ್ಳೆ ಚಿತ್ರದೊಂದಿಗೆ ಬರುವ ವಿಶ್ವಾಸದಲ್ಲಿದ್ದಾರೆ.

  English summary
  Actress manvitha kamath to star in PC Shankar's next romantic thriller. its 9th film of PC Shekar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X