Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಂಡೀಪುರದಲ್ಲಿ ನಟ ಧನ್ವೀರ್ ರಾತ್ರಿ ಸಫಾರಿ: ಆಕ್ರೋಶಗೊಂಡ ಸಾರ್ವಜನಿಕರು!
ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಮಯ ಸಫಾರಿ ಮಾಡುವುದು ನಿಷೇಧ ಹಾಗೂ ಕಾನೂನಿ ಪ್ರಕಾರ ಅಪರಾಧ. ಬಂಡೀಪುರ ಅರಣ್ಯದಲ್ಲಿ ಸಾರ್ವಜನಿಕರು ಸಂಚರಿಸಲು ನಿರ್ದಿಷ್ಟ ಸಮಯದಲ್ಲಿ ಮಾತ್ರ ಅವಕಾಶ ನೀಡಲಾಗುವುದು. ಮಾರ್ಗ ಮಧ್ಯದಲ್ಲಿ ವಾಹನ ನಿಲ್ಲಿಸಿದರೂ ದಂಡ ವಿಧಿಸಲಾಗುತ್ತದೆ.
ಆದರೆ, ಈ ಕಾನೂನು ಕೇವಲ ಸಾರ್ವಜನಿಕರಿಗೆ ಮಾತ್ರ. ಸೆಲೆಬ್ರಿಟಿಗಳಿಗೆ ಈ ನಿಯಮ, ಕಾನೂನು ಅನ್ವಯಿಸುವುದಿಲ್ಲವೇ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ. ಇದಕ್ಕೆ ಕಾರಣ, ಬಜಾರ್ ಖ್ಯಾತಿಯ ನಟ ಧನ್ವೀರ್ ಬಂಡೀಪುರದಲ್ಲಿ ರಾತ್ರಿ ಸಮಯ ಸಫಾರಿ ಮಾಡಿದ್ದಾರೆ ಎನ್ನಲಾದ ವಿಡಿಯೋ. ಮುಂದೆ ಓದಿ...

ರಾತ್ರಿ ಸಫಾರಿ ಮಾಡಿದ್ರಾ ಧನ್ವೀರ್?
ಬಂಡೀಪುರ ಅರಣ್ಯ ಪ್ರದೇಶದಲ್ಲಿ ನಟ ಧನ್ವೀರ್ ರಾತ್ರಿ ಸಮಯದಲ್ಲಿ ಸಫಾರಿ ಮಾಡಿದ್ದಾರೆ ಎನ್ನಲಾಗಿದೆ. ಸಫಾರಿ ವೇಳೆ ಹುಲಿ ಕಣ್ಣಿಗೆ ಬಿದ್ದಿದೆ. ಇದನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಸೆರೆಹಿಡಿದಿದ್ದು, ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ''ಬಂಡೀಪುರದಲ್ಲಿ ರಾತ್ರಿ ಸಫಾರಿ ವೇಳೆ ನೋಡಿದ ಹುಲಿ'' ಎಂದು ವಿಡಿಯೋ ಹಂಚಿಕೊಂಡಿದ್ದರು.
ಕರಿ
ಚಿರತೆ
ದತ್ತು
ಪಡೆದ
'ಬಜಾರ್'
ನಟ
ಧನ್ವೀರ್

ರಾತ್ರಿ ಸಫಾರಿಗೆ ಅವಕಾಶ ಕೊಟ್ಟಿದ್ದು ಯಾರು?
ಕಾನೂನಿನ ಪ್ರಕಾರ ರಾತ್ರಿ ಸಮಯದಲ್ಲಿ ಬಂಡೀಪುರದಲ್ಲಿ ಯಾರು ಸಫಾರಿ ಮಾಡುವಂತಿಲ್ಲ. ಹಾಗಿದ್ದರೂ ನಟ ಧನ್ವೀರ್‌ಗೆ ರಾತ್ರಿ ಸಫಾರಿ ಮಾಡಲು ಅನುಮತಿ ಕೊಟ್ಟಿದ್ದು ಯಾರು ಎಂಬ ನೆಟ್ಟಿಗರು ಕೇಳುತ್ತಿದ್ದಾರೆ.

ವಿಡಿಯೋ ಡಿಲೀಟ್ ಆಗಿದೆ!
ರಾತ್ರಿ ಸಫಾರಿ ಹಾಗೂ ಹುಲಿಯನ್ನು ನೋಡಿದ ಸಂತಸದಲ್ಲಿ ನಟ ಧನ್ವೀರ್ ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಬಳಿಕ, ನೆಟ್ಟಿಗರಿಂದ ತೀವ್ರ ಖಂಡನೆ ವ್ಯಕ್ತವಾದ ಬಳಿಕ ವಿಡಿಯೋ ಡಿಲೀಟ್ ಮಾಡಲಾಗಿದೆ.
Recommended Video

ಸಾಮಾನ್ಯರಿಗೊಂದು ನ್ಯಾಯ? ಸೆಲೆಬ್ರೆಟಿಗಳಿಗೊಂದು ನ್ಯಾಯ?
ಬಂಡೀಪುರದಲ್ಲಿ ಧನ್ವೀರ್ ಸಫಾರಿ ಮಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಅದರ ಕೆಲ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಪ್ರಶ್ನಿಸಿರುವ ನೆಟ್ಟಿಗರು ಸಾಮಾನ್ಯರಿಗೊಂದು ನ್ಯಾಯ? ಸೆಲೆಬ್ರೆಟಿಗಳಿಗೊಂದು ನ್ಯಾಯ ಇದ್ಯಾ ಎಂದು ಆಕ್ರೋಶ ಹೊರಹಾಕಿದ್ದಾರೆ.