Just In
- 30 min ago
ಪ್ರಚಾರಕ್ಕಾಗಿ ವಿಡಿಯೋ ಹಂಚಿಕೊಂಡಿಲ್ಲ: ಬಾಂಬ್ ಅಪಘಾತದ ಬಗ್ಗೆ ರಿಷಬ್ ಶೆಟ್ಟಿ
- 35 min ago
'ಯುವರತ್ನ' ಹಾಡಿನಲ್ಲಿ ಕಾಣಿಸಿಕೊಂಡ ದಿಗ್ಗಜರು: ಪುನೀತ್ ಸಿನಿಮಾದಲ್ಲಿ ಸಚಿನ್, ಪಿ ವಿ ಸಿಂಧು
- 1 hr ago
ಎರಡನೇ ಸಲ ನಾಮಿನೇಷನ್: ಇದರ ಹಿಂದಿದ್ಯಾ ಬೇಕಾದವರನ್ನು ಉಳಿಸಿಕೊಳ್ಳುವ ತಂತ್ರ?
- 1 hr ago
'ಯಜಮಾನ' ಚಿತ್ರಕ್ಕೆ 2 ವರ್ಷ: ಸ್ಪೆಷಲ್ ಆಗಿ ವಿಶ್ ಮಾಡಿದ ಠಾಕೂರ್ ಅನೂಪ್
Don't Miss!
- Finance
ದಾಖಲೆ ಮಟ್ಟಕ್ಕೇರಿದ್ದ ಚಿನ್ನ 11, 000 ರು ನಷ್ಟು ಕುಸಿತ ಕಂಡಿದ್ದೇಕೆ?
- Lifestyle
ಏನಿದು ಪಿರಿಯಡ್ ಅಂಡರ್ವೇರ್? ಎಷ್ಟು ಪ್ರಯೋಜನಕಾರಿ?
- Sports
ಕಡೆಗೂ ಆರ್ಸಿಬಿ ದಾಂಡಿಗನಿಂದ ಬಂತು ಸ್ಪೋಟಕ ಆಟ: ಕಿವೀಸ್ ವಿರುದ್ಧ ಆಸಿಸ್ಗೆ ಭರ್ಜರಿ ಗೆಲುವು
- News
ಬರೀ ಮಾತು ಬಿಡಿ, ಮೊದಲು ಚುನಾವಣೆ ಗೆದ್ದು ನೋಡಿ; ಬಿಜೆಪಿಗೆ ಪ್ರಶಾಂತ್ ಹೊಸ ಸವಾಲು
- Automobiles
ಕೊನೆಗೂ ಅಂತ್ಯವಾದ ಟೊಯೊಟಾ ಕಂಪನಿ ನೌಕರರ ಮುಷ್ಕರ
- Education
HAL Recruitment 2021: 4 ಡಿಪ್ಲೋಮಾ ಟೆಕ್ನೀಶಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರಿಗೆ ಪದ್ಮ ಭೂಷಣ ಪ್ರಶಸ್ತಿ
ಭಾರತೀಯ ಸಂಗೀತ ಕ್ಷೇತ್ರಕ್ಕೆ ಕೆಎಸ್ ಚಿತ್ರಾ ಅವರು ನೀಡಿರುವ ಕೊಡುಗೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ಪದ್ಮ ಭೂಷಣ ಪ್ರಶಸ್ತಿ ಘೋಷಿಸಿ ಗೌರವಿಸಿದೆ. ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಪ್ರಕಟಿಸಿದರೆ, ಕೆಎಸ್ ಚಿತ್ರಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಿದೆ.
ವಿಶೇಷ ಅಂದ್ರೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಮತ್ತು ಕೆಎಸ್ ಚಿತ್ರಾ ಅವರು ಅನೇಕ ಹಾಡುಗಳಿಗೆ ಒಟ್ಟಿಗೆ ದನಿಗೂಡಿಸಿದ್ದಾರೆ. ಈ ಇಬ್ಬರಿಗೂ 72ನೇ ವರ್ಷದ ಗಣರಾಜ್ಯೋತ್ಸವ ಅಂಗವಾಗಿ ಭಾರತದ ಅತ್ಯುನ್ನತ ಗೌರವ ನೀಡಲಾಗಿದೆ.
ದಿಗ್ಗಜ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ
ಕೆಎಸ್ ಚಿತ್ರ ಅವರು ಮೂಲತಃ ಸಂಗೀತ ಕುಟುಂಬದಿಂದ ಬಂದವರು. ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. 1979ರಲ್ಲಿ ಹಿನ್ನೆಲೆ ಗಾಯಕಿಯಾಗಿ ವೃತ್ತಿ ಆರಂಭಿಸಿದ ಚಿತ್ರ ಸುಮಾರು ನಾಲ್ಕು ದಶಕಗಳವರೆಗೂ ಸಂಗೀತ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ.
ಕೆಎಸ್ ಚಿತ್ರ ಅವರು ಇದುವರೆಗೂ ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ, ಬೆಂಗಾಳಿ, ತುಳು ಸೇರಿದಂತೆ ಇತರೆ ಪ್ರಮುಖ ಭಾಷೆಗಳಲ್ಲಿ ಸೇರಿ ಸುಮಾರು 25000 ಹಾಡುಗಳನ್ನು ಹಾಡಿದ್ದಾರೆ. ಮಲಯ್, ಲ್ಯಾಟಿನ್, ಅರೇಬಿಕ್, ಸಿಂಹಳೀಯ, ಇಂಗ್ಲಿಷ್ ಮತ್ತು ಫ್ರೆಂಚ್ ಮುಂತಾದ ವಿದೇಶಿ ಭಾಷೆಗಳಲ್ಲೂ ಚಿತ್ರ ಹಾಡಿದ್ದಾರೆ.
ತಮ್ಮ ಅದ್ಭುತ ಗಾಯನಕ್ಕಾಗಿ ಇದುವರೆಗೂ ಏಂಟು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದು ಯಾವ ಮಹಿಳಾ ಗಾಯಕಿಯೂ ಮಾಡಿರದ ಸಾಧನೆ.
ಕೆಎಸ್ ಚಿತ್ರ ಅವರನ್ನು ಉತ್ತರ ಭಾರತದ ಪಿಯಾ ಬಸಂತಿ ಎಂದು, ಆಂಧ್ರಪ್ರದೇಶದ ಮತ್ತು ತೆಲಂಗಾಣದಲ್ಲಿ ಸಂಗೀತ ಸರಸ್ವತಿ ಎಂದು ಹಾಗೂ ತಮಿಳಿನಲ್ಲಿ ಚಿನ್ನಾ ಕುಯಿಲ್ ಎಂದು ಕರೆಯುತ್ತಾರೆ.