Don't Miss!
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- News
ಚಿರತೆ ಹಾವಳಿ ತಡೆಗೆ ಟಾಸ್ಕ್ ಪೋರ್ಸ್ ರಚಿಸಿ ಆದೇಶ ಹೊರಡಿಸಿದ ಸರ್ಕಾರ, ತಂಡಗಳ ವಿವರ ಇಲ್ಲಿದೆ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜೂ, ಸಫಾರಿ, ವನ್ಯಜೀವಿ ಛಾಯಾಗ್ರಹಣಕ್ಕೆ ಹೋಗಬೇಡಿ ಎಂದ ನಟಿ ರಮ್ಯಾ
ನಟನೆ ಹಾಗೂ ರಾಜಕಾರಣ ಎರಡರಿಂದಲೂ ಅಂತರ ಕಾಯ್ದುಕೊಂಡಿದ್ದಾರೆ ನಟಿ ರಮ್ಯಾ. ಬಹು ಆಕಾಂಕ್ಷೆಗಳೊಂದಿಗೆ ರಾಜಕಾರಣಕ್ಕೆ ಕಾಲಿಟ್ಟಿದ್ದ ರಮ್ಯಾ ಅಲ್ಲಿ ಸಫಲವಾಗಲಿಲ್ಲ.
ಪ್ರಸ್ತುತ ಬಹುತೇಕ ತಟಸ್ಥವಾಗಿರುವ ನಟಿ ರಮ್ಯಾ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯಷ್ಟೆ ಕಾಣಿಸಿಕೊಳ್ಳುತ್ತಾರೆ.
ಇದೀಗ ಪ್ರಾಣಿಗಳ ಪರವಾಗಿ ಇನ್‌ಸ್ಟಾಗ್ರಾಂ ನಲ್ಲಿ ಉದ್ದನೆಯ ಪೋಸ್ಟ್ ಹಾಕಿರುವ ನಟಿ ರಮ್ಯಾ, 'ಪ್ರಾಣಿಗಳ ಮೇಲೆ ಪ್ರೀತಿ ಇದ್ದರೆ, ಜೂ, ಸಫಾರಿ, ವನ್ಯಜೀವಿ ಫೊಟೊಗ್ರಫಿಗಳಿಗೆ ಹೋಗಬೇಡಿ' ಎಂದು ಮನವಿ ಮಾಡಿದ್ದಾರೆ.
ನಿಮಗೆ ಪ್ರಾಣಿಗಳ ಮೇಲೆ ಪ್ರೀತಿ ಇದ್ದರೆ ಅವನ್ನು ಅವುಗಳ ಪಾಡಿಗೆ ಇರಲು ಬಿಡಿ. ನಿಮ್ಮ ಸಾಮಾಜಿಕ ಜಾಲತಾಣವನ್ನು ತುಂಬಿಸಲು ಘನ ಅರಣ್ಯದ ರೆಸಾರ್ಟ್‌ಗಳಿಗೆ ಹೋಗಿ ಸಫಾರಿ ಆಗಲಿ ವನ್ಯ ಜೀವಿಗಳ ಚಿತ್ರ ತೆಗೆಯಲು ಹೋಗಬೇಡಿ ಎಂದು ಹೇಳಿದ್ದಾರೆ ರಮ್ಯಾ.

ತಮಿಳುನಾಡು ಘಟನೆ ಬಗ್ಗೆ ರಮ್ಯಾ ಕಿಡಿ
ಕೆಲ ದಿನಗಳ ಹಿಂದೆ ತಮಿಳುನಾಡಿನಲ್ಲಿ ಕೆಲ ದುಷ್ಕರ್ಮಿಗಳು ಹೆಣ್ಣಾನೆಯೊಂದಕ್ಕೆ ಬೆಂಕಿ ಹಚ್ಚಿದ್ದರು. ಆ ಆನೆ ತೀವ್ರ ಹಿಂಸೆ ಅನುಭವಿಸಿ ಅಸುನೀಗಿತು. ಇದರ ಬೆನ್ನಲ್ಲೇ ನಟಿ ರಮ್ಯಾ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಹೆಣ್ಣಾನೆ ಸಾವಿಗೂ ಕಂಬನಿ ಮಿಡಿದಿದ್ದಾರೆ ನಟಿ ರಮ್ಯಾ.

ಮನುಷ್ಯರನ್ನು ನೋಡುವ ಆಸೆ ಪ್ರಾಣಿಗಳಿಗೆ ಇಲ್ಲ: ರಮ್ಯಾ
ಪ್ರಾಣಿಗಳಿಗೆ ಬದುಕುವ ಹಕ್ಕಿದೆ. ಅವುಗಳನ್ನು ಅವುಗಳ ಪಾಡಿಗೆ ಬದುಕಲು ಬಿಡಿ. ನಮಗೆ ಅವನ್ನು ನೋಡಲು ಆಸೆ ಇದೆಯೇ ವಿನಃ ಅವಕ್ಕೆ ನಮ್ಮನ್ನು ನೋಡಲು ಯಾವ ಆಸೆಯೂ ಇಲ್ಲ. ಅವುಗಳ ನಿಶ್ಚಿಂತೆಯಿಂದ ಬದುಕಲು ಬೇಡುತ್ತವೆ, ಅವನ್ನು ಹಾಗೆಯೇ ಬದುಕಲು ಬಿಡಿ' ಎಂದಿದ್ದಾರೆ ನಟಿ ರಮ್ಯಾ.

'ಹಣ ತಿನ್ನಲು ಸಾಧ್ಯವಿಲ್ಲವೆಂದು ಮನುಷ್ಯನಿಗೆ ಆಗ ಅರಿವಾಗುತ್ತದೆ'
'ಕೊನೆಯ ಮರವನ್ನು ಕಡಿದ ಬಳಿಕ, ಕೊನೆಯ ಮೀನನ್ನು ಹಿಡಿದ ಬಳಿಕ, ಪ್ರಕೃತಿಗೆ ವಿಷ ಹಾಕಿದ ಬಳಿಕ ಮನುಷ್ಯನಿಗೆ ಗೊತ್ತಾಗುತ್ತದೆ ಹಣವನ್ನು ತಿನ್ನಲು ಸಾಧ್ಯವಿಲ್ಲವೆಂದು ಎಂದಿರುವ ನಟಿ ರಮ್ಯಾ, ಸರ್ಕಾರವು ಕಾರ್ಪೊರೇಟ್‌ಗಳಿಗಾಗಿ ಪರಿಸರ ಕಾನೂನನ್ನು ಬದಲಾಯಿಸುತ್ತಿದೆ ಎಂದಿದ್ದಾರೆ ನಟಿ ರಮ್ಯಾ.
Recommended Video

ಸಸ್ಯಾಹಾರಿಯಾಗಿ ಬದಲಾದ ನಟಿ ರಮ್ಯಾ
ಪ್ರಾಣಿ ಪ್ರೇಮಿ ಆಗಿರುವ ನಟಿ ರಮ್ಯಾ ಸಸ್ಯಹಾರಿಯಾಗಿ ಬದಲಾಗಿದ್ದಾರೆ. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸಸ್ಯಹಾರಿ ಮಾತ್ರವೇ ಅಲ್ಲ 'ವೀಗನ್' ಸಹ ಆಗುವ ಪ್ರಯತ್ನದಲ್ಲಿದ್ದಾರಂತೆ ನಟಿ ರಮ್ಯಾ. ಡೈರಿ ಉತ್ಪನ್ನಗಳನ್ನು ಸಹ ಸೇವಿಸುವುದು ಬಿಡುವ ನಿರ್ಣಯ ಮಾಡಲಿದ್ದಾರಂತೆ.