For Quick Alerts
  ALLOW NOTIFICATIONS  
  For Daily Alerts

  ಯಶ್ ಹತ್ಯೆಗೆ ಸಂಚು ಸುದ್ದಿ ಬಗ್ಗೆ ನಟ ಶಿವರಾಜ್ ಕುಮಾರ್ ಪ್ರತಿಕ್ರಿಯೆ

  By Naveen
  |
  ಯಶ್ ಹತ್ಯೆ ಬಗ್ಗೆ ಶಿವರಾಜ್‌ಕುಮಾರ್ ಹೇಳಿದ ಮಾತುಗಳಿವು...!! | Filmibeat Kannada

  ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ನೀಡಲಾಗಿದೆ ಎಂಬ ಸುದ್ದಿ ಇಂದು ಬೆಳ್ಳಗೆಯಿಂದ ಹರಿದಾಡಿತ್ತು. ಎರಡು ವರ್ಷದ ಹಿಂದೆಯೇ ರೌಡಿ ಸೈಕಲ್ ರವಿ ಯಶ್ ಹತ್ಯೆ ಸಂಚು ರೂಪಿಸಿದ್ದನು ಎಂಬ ಸುದ್ದಿ ಚರ್ಚೆ ಆಗಿತ್ತು. ಬಳಿಕ ಯಶ್ ಹತ್ಯೆ ಸಂಚು ವಂದತಿ ಸುಳ್ಳು ಎಂದು ಹಿರಿಯ ಪೋಲೀಸ್ ಅಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದರು.

  ಇದೀಗ ಈ ಸುದ್ದಿಯ ಬಗ್ಗೆ ನಟ ಶಿವರಾಜ್ ಕುಮಾರ್ ಮಾತನಾಡಿದ್ದಾರೆ. ''ಎಲ್ಲಿಯೂ ಕ್ರೈಂ ನಡೆಯಲೇಬಾರದು. ಈ ರೀತಿಯ ವಿಷಯ ತಿಳಿದ ತಕ್ಷಣ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಕಲಾವಿದರಿಗೆ ಮಾತ್ರವಲ್ಲ ಯಾರಿಗೆ ಆಗಲಿ ಈ ರೀತಿ ಆಗಬಾರದು. ಎಲ್ಲರ ಬಗ್ಗೆ ಗಮನ ಇರಬೇಕು.

  ರಾಕಿಂಗ್ ಸ್ಟಾರ್ ಹತ್ಯೆಗೆ ಸಂಚು ಅನ್ನೋದು ಸುಳ್ಳು ರಾಕಿಂಗ್ ಸ್ಟಾರ್ ಹತ್ಯೆಗೆ ಸಂಚು ಅನ್ನೋದು ಸುಳ್ಳು

  ಈ ರೀತಿಯ ಘಟನೆ ಆದಾಗ ನಾವು ಕೂಡ ಪೊಲೀಸರಿಗೆ ಸಹಾಯ ಮಾಡಬೇಕು'' ಎಂದು ಶಿವಣ್ಣ ಹೇಳಿದ್ದಾರೆ.

  ಇಂದು ಶಿವರಾಜ್ ಕುಮಾರ್ ತಮ್ಮ 56ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದು, ಡಾ.ರಾಜ್ ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು ಯಶ್ ಹತ್ಯೆ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

  ಇದರ ಜೊತೆಗೆ ರೌಡಿ ಶೀಟರ್ ಸೈಕಲ್ ರವಿ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೈಕಲ್ ರವಿ ಜೊತೆ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ನಂಟು ಹೊಂದಿದ್ದಾರೆ ಎಂಬ ಸುದ್ದಿ ಕೂಡ ಇತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಾಧುಕೋಕಿಲ ''ರೌಡಿ ಶೀಟರ್ ರವಿಕುಮಾರ್ ಗೂ ನನಗೂ ಯಾವುದೇ ಲಿಂಕ್ ಇಲ್ಲ'' ಎಂದು ತಿಳಿಸಿದ್ದಾರೆ.

  English summary
  Plot to murder Kannada Actor Yash: Shiva Rajkumar reaction.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X