»   » ಸ್ಯಾಂಡಲ್ ವುಡ್ ಹೊಸ ಇತಿಹಾಸ: ಕನ್ನಡ ಟ್ರೈಲರ್ ಲಾಂಚ್ ಮಾಡಿದ ಪ್ರಧಾನಿ ಮೋದಿ

ಸ್ಯಾಂಡಲ್ ವುಡ್ ಹೊಸ ಇತಿಹಾಸ: ಕನ್ನಡ ಟ್ರೈಲರ್ ಲಾಂಚ್ ಮಾಡಿದ ಪ್ರಧಾನಿ ಮೋದಿ

Posted By:
Subscribe to Filmibeat Kannada

ನಮ್ಮ ದೇಶದ ಪ್ರಧಾನಿ ಮೋದಿ ಅವರು ಕನ್ನಡ ಚಿತ್ರದ ಟ್ರೈಲರ್ ಒಂದನ್ನು ನೋಡಿ ಖುಷಿಪಟ್ಟು, ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದಾರೆ ಅಂದ್ರೆ ಊಹಿಸಿ ನಮ್ಮ ಸ್ಯಾಂಡಲ್ ವುಡ್ ಎಲ್ಲಿಗೋ ಹೋಗ್ತಿದೆ ಅಲ್ವಾ?.

ರಾಷ್ಟ್ರಧ್ವಜ, ರಾಷ್ಟ್ರಪ್ರೇಮದ ಕುರಿತು ಸಂದೇಶ ಸಾರುವ '22 ಜುಲೈ 1947' ಎಂಬ ಕನ್ನಡ ಚಿತ್ರದ ಟ್ರೈಲರ್ ಲಾಂಚ್ ಮಾಡಿರುವ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

PM Narendra Modi launched Kannada Movie '22 July 1947'

ಬೆಳಗಾಂ ಇಂಡಿಯನ್ ಎಕ್ಸ್ ಪ್ರೆಸ್ ಎಡಿಟರ್ ಸರಾಜು ಕಾತ್ಕ್ಕರ್ ಅವರ ಕಾದಂಬರಿಯನ್ನು ಸಿನಿಮಾ ಮಾಡಿರುವ 'ಇಂಗಳೆ ಮಾರ್ಗ' ಚಿತ್ರದ ಖ್ಯಾತಿಯ ನಿರ್ದೇಶಕ ವಿಶಾಲ್ ರಾಜ್ ಅವರು, ರಾಷ್ಟ್ರಧ್ವಜ ಹುಟ್ಟಿದ ದಿನವಾದ '22 ಜುಲೈ 1947' ಅನ್ನೇ ಈ ಚಿತ್ರಕ್ಕೆ ಟೈಟಲ್ ಆಗಿ ಇಟ್ಟಿದ್ದಾರೆ.

ಚಿತ್ರಕ್ಕೆ ನಂಜೇಗೌಡ ಬಂಡವಾಳ ಹೂಡಿದ್ದು, ಇದೇ ಮೊದಲ ಬಾರಿಗೆ ಸಂಗೀತ ಕಟ್ಟಿ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

PM Narendra Modi launched Kannada Movie '22 July 1947'

ಹುಬ್ಬಳ್ಳಿಯ ಸತ್ಯಪ್ಪ ಎಂಬ ವ್ಯಕ್ತಿಯೊಬ್ಬರ ನಿಜ ಜೀವನ ಕಥೆಯಾಧರಿತ ಈ ಚಿತ್ರದಲ್ಲಿ ನಟ ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್, ನಂಜೇಗೌಡ, ಸುಧಾರಾಣಿ, ಶೋಭರಾಜ್, ಲಯ ಕೋಕಿಲ, ಸತೀಶ್ ಮುಂತಾದವರು ಪ್ರಮುಖ ಪಾತ್ರ ವಹಿಸಿದ್ದಾರೆ.

'ಬೆಳಗಾಂನ ಡಿಸಿ ಕಛೇರಿಯಲ್ಲಿ ಸತ್ಯಪ್ಪ ಎನ್ನುವವರು ಬೆಳಗ್ಗೆ ಸೂರ್ಯೋದಯ ಆಗೋ ಮುಂಚೆ ಧ್ವಜ ಹಾರಿಸಿ, ಸಂಜೆ ಸೂರ್ಯಾಸ್ತ ಆಗೋ ಸಮಯದಲ್ಲಿ ಧ್ವಜ ಇಳಿಸ್ತಾ ಇದ್ರು'. ಆ ವ್ಯಕ್ತಿಯ ರಾಷ್ಟ್ರಪ್ರೇಮವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.

PM Narendra Modi launched Kannada Movie '22 July 1947'

"ಸಂಸದ ಸುರೇಶ್ ಅಂಗಡಿ ಅವರು ಈ ಚಿತ್ರದ ಮುಹೂರ್ತ ಸಂದರ್ಭದಿಂದ ಹಿಡಿದು ಚಿತ್ರ ಕಂಪ್ಲೀಟ್ ಆಗೋವರೆಗೂ ಫಾಲೋ ಮಾಡುತ್ತಿದ್ದರು. ಜೊತೆಗೆ ಅವರು ಕಾದಂಬರಿಯನ್ನು ಕೂಡ ಓದಿದ್ದರು. ಆದ್ದರಿಂದ ಅವರು ಈ ಚಿತ್ರದ ಟ್ರೈಲರ್ ಅನ್ನು ಮೋದಿ ಅವರ ಕೈಯಲ್ಲಿ ಬಿಡುಗಡೆ ಮಾಡಿಸೋಣ ಅಂತ ಪ್ಲ್ಯಾನ್ ಮಾಡಿದ್ರು.

PM Narendra Modi launched Kannada Movie '22 July 1947'

"ಆಮೇಲೆ ಸುರೇಶ್ ಅವರು ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿಸಿದ್ರು, ಅವರು ನೋಡಿ ಮೆಚ್ಚಿಕೊಂಡು ಮೋದಿ ಅವರ ಭೇಟಿಗೆ ಅವಕಾಶ ಮಾಡಿಕೊಟ್ಟರು. ಮೋದಿ ಅವರು ತಮ್ಮ ಕೆಲಸದ ಒತ್ತಡದ ನಡುವೆಯೂ, ಬಿಡುವು ಮಾಡಿಕೊಂಡು ನಮ್ಮ ಚಿತ್ರದ ಟ್ರೈಲರ್ ನೋಡಿ ಖುಷಿಪಟ್ಟು, ಈ ಸಿನಿಮಾ ಎಲ್ಲಾ ಭಾಷೆಗೂ ಡಬ್ ಆಗಲಿ ಎಂದು ಹಾರೈಸಿದ್ದಾರೆ".

PM Narendra Modi launched Kannada Movie '22 July 1947'

'ಹಾಗೂ ನಮ್ಮ ತಂಡದ ಪ್ರಯತ್ನಕ್ಕೆ ಪ್ರಧಾನಿ ಮೋದಿ ಅವರು ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದು, ನಮಗೆ ನೂರಾನೆ ಬಲ ಬಂದ ಹಾಗಾಗಿದೆ" ಎಂದು ಸಂಭ್ರಮ ವ್ಯಕ್ತಪಡಿಸುತ್ತಾರೆ ನಿರ್ದೇಶಕ ವಿಶಾಲ್ ರಾಜ್ ಅವರು.

PM Narendra Modi launched Kannada Movie '22 July 1947'

ಅಂತೂ ಮೊಟ್ಟ ಮೊದಲ ಬಾರಿಗೆ ಯಾವುದೇ ಚಿತ್ರರಂಗದಲ್ಲಿ ನಡೆಯದ ಅದ್ಭುತ ಘಟನೆಯೊಂದು ನಮ್ಮ ಕನ್ನಡ ಚಿತ್ರರಂಗದಲ್ಲಿ ನಡೆದಿದೆ ಅಂದ್ರೆ, ಕನ್ನಡಿಗರಾದ ನಮಗೆ ಹೆಮ್ಮೆ ಅಲ್ಲವೇ. ಅಂದಹಾಗೆ ಈ ಸಿನಿಮಾ ಇನ್ನೇನು ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ.

English summary
PM Narendra Modi launched Kannada Movie '22 July 1947'. This is the first movie to be launched by our Prime Minister. It is our proud that a Kannada Movie has been promoted by our PM. The story revolves around the importance of our NATIONAL FLAG.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada