For Quick Alerts
  ALLOW NOTIFICATIONS  
  For Daily Alerts

  'ಸರಿಗಮಪ' ಪೊಲೀಸ್ ಕಾನ್ಸ್‌ಟೇಬಲ್ ಪತ್ನಿ ಸಾವು ಪ್ರಕರಣಕ್ಕೆ ತಿರುವು

  |

  'ಸರಿಗಮಪ' ರಿಯಾಲಿಟಿ ಶೋನಲ್ಲಿ ಹಾಡುಹಾಡಿ ಖ್ಯಾತಿಗಳಿಸಿದ್ದ ಪೊಲೀಸ್ ಕಾನ್ಸ್‌ಟೇಬಲ್ ಸುಬ್ರಹ್ಮಣ್ಯ ಪತಿ ಜ್ಯೋತಿ ನಿನ್ನೆ ನಿಧನರಾಗಿದ್ದಾರೆ.

  ಸರಿಗಮಪ ಸುಬ್ರಹ್ಮಣ್ಯ ಪತ್ನಿ ಸಾವಿಗೆ ಹೊಸ ಟ್ವಿಸ್ಟ್: ಕೊರೋನ ಅಲ್ಲ ಆತ್ಮಹತ್ಯೆಯಿಂದ ಸಾವು | Filmibeat Kannada

  ಜ್ಯೋತಿ ಅವರಿಗೆ ಕೊರೊನಾ ವೈರಸ್ ಆಗಿತ್ತು, ಹಲವಾರು ಕಡೆ ಬೆಡ್‌ ಮತ್ತು ಆಕ್ಸಿಜನ್‌ಗಾಗಿ ಹುಡುಕಾಡಿ ಕೊನೆಗೆ ಹೊಸಕೋಟೆ ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದೆ ಅವರು ಸಾವನ್ನಪ್ಪಿದರು ಎಂಬ ಸುದ್ದಿಗಳು ಹರಿದಾಡಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಬೇರೆ ಮಾಹಿತಿ ಹೊರಗೆ ಬಂದಿದೆ.

  ಸುಬ್ರಹ್ಮಣ್ಯ ಪತ್ನಿ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಜ್ಯೋತಿ ಅವರು ಇತ್ತೀಚೆಗಷ್ಟೆ ಕೋಲಾರಕ್ಕೆ ತೆರಳಿದ್ದರು. ಅವರು ಅಲ್ಲಿಯೇ ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ. ಕೂಡಲೇ ಅವರನ್ನು ಹೊಸಕೋಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ. ಶವ ಹಸ್ತಾಂತರಕ್ಕೂ ಮುನ್ನಾ ಪರೀಕ್ಷೆ ಮಾಡಿದಾಗ ಅವರಿಗೆ ಕೋವಿಡ್ ಇರುವುದು ಗೊತ್ತಾಗಿದೆ.

  ಕೋಲಾರ ಮೂಲದ ಸುಬ್ರಮಣಿ ಬಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಹಳೇ ಕನ್ನಡ ಹಾಡು ಹಾಡುತ್ತಿದ್ದ ಸುಬ್ರಮಣಿ ಪೊಲೀಸರಿಗೆ ಸಂಬಂಧಿಸಿದಂತೆ ಒಂದು ಹಾಡು ಹಾಡಿದ್ದರು. ಅದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಆನಂತರ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪದಲ್ಲಿ ಹಾಡುವ ಅವಕಾಶ ಸಿಕ್ಕಿತ್ತು. ಅಲ್ಲಿ ಕನ್ನಡದ ಹಾಡುಗಳನ್ನು ಹಾಡುವ ಮೂಲಕ ಸುಬ್ರಮಣಿ ರಾಜ್ಯದ ಮನೆ ಮಾತಾಗಿದ್ದರು. ಕೆ.ಆರ್.ಪುರಂನಲ್ಲಿ ತನ್ನ ಪತ್ನಿ ಜ್ಯೋತಿಯೊಂದಿಗೆ ನೆಲೆಸಿದ್ದರು. ಜ್ಯೋತಿಯವರು ಸಹ ಸುಬ್ರಹ್ಮಣ್ಯ ಜೊತೆಗೆ ಒಮ್ಮೆ ಸರಿಗಮಪ ಶೋನಲ್ಲಿ ಕಾಣಿಸಿಕೊಂಡಿದ್ದರು.

  ಸುಬ್ರಹ್ಮಣ್ಯ ಪತ್ನಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

  English summary
  Police constable Subramani who got fame from singing in reality show his wife commit suicide.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X