For Quick Alerts
  ALLOW NOTIFICATIONS  
  For Daily Alerts

  ಡಿ-ಬಾಸ್ ಹುಟ್ಟುಹಬ್ಬಕ್ಕೆ ಶುಭಕೋರಿದ ರಾಜಕಾರಣಿಗಳು, ಯಾರ್‌ ಯಾರು?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಸ್ಯಾಂಡಲ್‌ವುಡ್ ತಾರೆಯರು, ಅಭಿಮಾನಿಗಳು ಟ್ವಿಟ್ಟರ್, ಫೇಸ್‌ಬುಕ್, ಇನ್ಸ್ಟಾಗ್ರಾಂ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ. ಡಿ ಬಾಸ್ ಬರ್ತಡೇಗೆ ಕರ್ನಾಟಕದ ಖ್ಯಾತ ರಾಜಕಾರಣಿಗಳು ಸಹ ವಿಶ್ ಮಾಡಿದ್ದಾರೆ.

  ಕರ್ನಾಟಕದ ಘಟಾನುಘಟಿ ರಾಜಕಾರಣಿಗಳು ಟ್ವಿಟ್ಟರ್ ಮೂಲಕ ಕನ್ನಡ ಚಿತ್ರರಂಗದ ಬಾಕ್ಸ್‌ ಆಫೀಸ್‌ ಸುಲ್ತಾನನಿಗೆ ಹಾರೈಸಿದ್ದಾರೆ. ಶ್ರೀರಾಮುಲು, ಅಶ್ವತ್ ನಾರಾಯಣ್, ಬಿ.ವೈ.ರಾಘವೇಂದ್ರ, ವಿಜಯೇಂದ್ರ, ಸುಮಲತಾ, ಬಿಸಿ, ಪಾಟೀಲ್ ಸೇರಿದಂತೆ ಹಲವರು ನಟ ದರ್ಶನ್ ಅವರ ಜನುಮದಿನಕ್ಕೆ ವಿಶ್ ಮಾಡಿದ್ದಾರೆ. ಹಾಗಾದ್ರೆ, ಯಾವ ರಾಜಕಾರಣಿ ಏನೆಂದು ಶುಭಕೋರಿದ್ದಾರೆ? ಮುಂದೆ ಓದಿ....

  ದರ್ಶನ್ ಜರ್ನಿಯಲ್ಲಿ ಮರೆಯಲಾಗದ ಆರು ಚಿತ್ರಗಳು, ಏಕೆ ಎಂಬ ಕಾರಣ ಇಲ್ಲಿದೆ?

  ಸಚಿವ ಶ್ರೀರಾಮುಲು

  ಸಚಿವ ಶ್ರೀರಾಮುಲು

  ''ಕನ್ನಡ ಚಿತ್ರರಂಗದ ಖ್ಯಾತ ನಟರು, ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಶ್ರೀ ದರ್ಶನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ಮುಂದಿನ ಎಲ್ಲ ಸಿನಿಮಾಗಳು ಯಶಸ್ಸು ಕಾಣಲಿ ಎಂದು ಪ್ರಾರ್ಥಿಸುತ್ತೇನೆ'' ಎಂದು ಸಚಿವ ಶ್ರೀರಾಮುಲು ಟ್ವೀಟ್ ಮಾಡಿ ಶುಭಹಾರೈಸಿದ್ದಾರೆ.

  ಸಂಸದ ರಾಘವೇಂದ್ರ

  ಸಂಸದ ರಾಘವೇಂದ್ರ

  ''ಕನ್ನಡ ಚಿತ್ರರಂಗದ ಖ್ಯಾತ ನಟರು, ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಶ್ರೀ ದರ್ಶನ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಚಲನಚಿತ್ರರಂಗದ ಈ ಸೇವೆ ಹೀಗೆ ಮುಂದುವರೆದು ಇನ್ನಷ್ಟು ಯಶಸ್ಸು, ಕೀರ್ತಿಗಳು ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ'' ಎಂದು ಬಿವೈ ರಾಘವೇಂದ್ರ ವಿಶ್ ಮಾಡಿದ್ದಾರೆ.

  ಕುಮಾರ್ ಬಂಗಾರಪ್ಪ

  ಕುಮಾರ್ ಬಂಗಾರಪ್ಪ

  ''ಆತ್ಮೀಯ ಸ್ನೇಹಿತರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು, ಇನ್ನೂ ಹೆಚ್ಚಿನ ಯಶಸ್ಸು,ಆರೋಗ್ಯವನ್ನು ದೇವರು ನಿಮಗೆ ಕರುಣಿಸಲಿ'' ಎಂದು ಶಾಸಕ ಕುಮಾರ್ ಬಂಗಾರಪ್ಪ ವಿಶ್ ಮಾಡಿದ್ದಾರೆ. ಚಕ್ರವರ್ತಿ ಸಿನಿಮಾದಲ್ಲಿ ದರ್ಶನ್ ಜೊತೆ ನಟಿಸಿದ್ದರು.

  ಆರೋಗ್ಯ ಸಚಿವ ಸುಧಾಕರ್

  ಆರೋಗ್ಯ ಸಚಿವ ಸುಧಾಕರ್

  ''ಚಂದನವನದ ಚಾಲೆಂಜಿಂಗ್ ಸ್ಟಾರ್ ಶ್ರೀ ದರ್ಶನ್ ತೂಗುದೀಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಕನ್ನಡ ಕಲಾದೇವಿಯ ತೇರನ್ನು ಎಳೆಯುವ 'ಸಾರಥಿ'ಯಾಗಿ ಇನ್ನಷ್ಟು ದೀರ್ಘಕಾಲ ಸೇವೆ ಸಲ್ಲಿಸುವ ಅವಕಾಶ ಸಿಗಲಿ ಎಂದು ಹಾರೈಸುತ್ತೇನೆ'' ಎಂದು ಆರೋಗ್ಯ ಸಚಿವ ಡಾ ಸುಧಾಕರ್ ಟ್ವೀಟ್ ಮಾಡಿದ್ದಾರೆ.

  ಕಾಮನ್ ಡಿಪಿ ಹಂಚಿಕೊಂಡು ದರ್ಶನ್ ಹುಟ್ಟುಹಬ್ಬಕ್ಕೆ ಶುಭಕೋರಿದ ಜಗ್ಗೇಶ್

  ಕೃಷಿ ಸಚಿವ ಬಿಸಿ ಪಾಟೀಲ್

  ಕೃಷಿ ಸಚಿವ ಬಿಸಿ ಪಾಟೀಲ್

  ''ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ಕನ್ನಡ ಚಿತ್ರರಂಗದ ನಟ ಹಾಗೂ ಆತ್ಮೀಯರಾದ ಶ್ರೀ ದರ್ಶನ್ ಅವರಿಗೆ ಜನ್ಮದಿನದ ಶುಭಹಾರೈಕೆಗಳು. ಭಗವಂತ ನಿಮಗೆ ಉತ್ತಮ ಆಯುರಾರೋಗ್ಯ ನೀಡಿ, ಕನ್ನಡ ಚಿತ್ರರಂಗಕ್ಕೆ ಹಾಗೂ ನಾಡು ನುಡಿಗೆ ಇನ್ನೂ ಹೆಚ್ಚಿನ ಕೊಡುಗೆ ನೀಡುವ ಶಕ್ತಿ ದಯಪಾಲಿಸಲಿ ಎಂದು ಹಾರೈಸುತ್ತೇನೆ'' ಎಂದು ಕೃಷಿ ಸಚಿವ ಬಿಸಿ ಪಾಟೀಲ್ ವಿಶ್ ಮಾಡಿದ್ದಾರೆ.

  ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ

  ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ

  ''ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಸಾಮಾಜಿಕ ಕಾರ್ಯಗಳು, ಮುಂತಾದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವ ನೀವು ಯುವಜನತೆಗೆ ಪ್ರೇರಣೆ. ಉಜ್ವಲ ಭವಿಷ್ಯಕ್ಕಾಗಿ ನನ್ನ ಶುಭ ಹಾರೈಕೆಗಳು'' ಎಂದು ಉಪಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ ಟ್ವೀಟ್ ಮಾಡಿದ್ದಾರೆ.

  ಪ್ರತಾಪ ಸಿಂಹ ಹಾರೈಕೆ

  ಪ್ರತಾಪ ಸಿಂಹ ಹಾರೈಕೆ

  ''ಚಂದನವನದ ಚಾಲೆಂಜಿಂಗ್ ಸ್ಟಾರ್ ಶ್ರೀ ದರ್ಶನ್ ತೂಗುದೀಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು'' ಎಂದು ಕೊಡಗು-ಮೈಸೂರು ಸಂಸದ ಪ್ರತಾಪ ಸಿಂಹ ಟ್ವಿಟ್ಟರ್ ಮೂಲಕ ದರ್ಶನ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.

  ಬಿವೈ ವಿಜಯೇಂದ್ರ

  ಬಿವೈ ವಿಜಯೇಂದ್ರ

  ''ಪ್ರತಿಭಾವಂತ ಕಲಾವಿದ, ಅಭಿಮಾನಿಗಳ ನೆಚ್ಚಿನ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ತೂಗುದೀಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿರಂತರ ಪರಿಶ್ರಮದಿಂದ ಎತ್ತರದ ಸ್ಥಾನಕ್ಕೆ ಏರಿರುವ ನಿಮ್ಮಿಂದ, ಕನ್ನಡ ಚಿತ್ರರಂಗದ ಖ್ಯಾತಿ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಹರಡುವಂತಾಗಲಿ ಎಂದು ಹಾರೈಸುತ್ತೇನೆ'' ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ವಿಶ್ ಮಾಡಿದ್ದಾರೆ.

  ಸಂಸದೆ ಶೋಭಾ ಕರಂದ್ಲಾಜೆ

  ಸಂಸದೆ ಶೋಭಾ ಕರಂದ್ಲಾಜೆ

  ''ಚಂದನವನದ ಧ್ರುವತಾರೆ, ಚಾಲೆಂಜಿಂಗ್ ಸ್ಟಾರ್ ಶ್ರೀ ದರ್ಶನ್ ತೂಗುದೀಪ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಕನ್ನಡ ಕಲಾದೇವಿಯ ಸೇವೆಯನ್ನು ಮತ್ತಷ್ಟು ವರ್ಷಗಳ ಕಾಲ ಮಾಡುವ ಭಾಗ್ಯ ನಿಮ್ಮದಾಗಲಿ ಎಂದು ಶುಭ ಹಾರೈಸುತ್ತೇನೆ'' ಎಂದು ಸಂಸದೆ ಶೋಭಾ ಕರಂದ್ಲಾಜೆ ಹಾರೈಸಿದ್ದಾರೆ.

  ಎಚ್‌ಸಿ ಬಾಲಕೃಷ್ಣ

  ಎಚ್‌ಸಿ ಬಾಲಕೃಷ್ಣ

  ''ಕನ್ನಡ ಚಿತ್ರರಂಗದ ಖ್ಯಾತ ನಟರು, ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಶ್ರೀ ದರ್ಶನ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಚಲನಚಿತ್ರರಂಗದ ಈ ಸೇವೆ ಹೀಗೆ ಮುಂದುವರೆದು ಇನ್ನಷ್ಟು ಯಶಸ್ಸು, ಕೀರ್ತಿಗಳು ಲಭಿಸಲಿ ಎಂದು ಶುಭ ಹಾರೈಸುತ್ತೇನೆ'' ಎಂದು ಎಚ್‌ಸಿ ಬಾಲಕೃಷ್ಣ ಟ್ವೀಟ್ ಮಾಡಿದ್ದಾರೆ.

  ಸಚಿವ ಸಿಪಿ ಯೋಗೇಶ್ವರ್

  ಸಚಿವ ಸಿಪಿ ಯೋಗೇಶ್ವರ್

  ''ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಶ್ರೀ ದರ್ಶನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ಮುಂದಿನ ಜೀವನ ಇನ್ನೂ ಹೆಚ್ಚಿನ ಯಶಸ್ಸಿನಿಂದ ಕೂಡಿರಲಿ'' ಎಂದು ನೂತನ ಸಚಿವ ಸಿಪಿ ಯೋಗೇಶ್ವರ್ ವಿಶ್ ಮಾಡಿದ್ದಾರೆ.

  ಸಂಸದ ಪಿಸಿ ಮೋಹನ್

  ಸಂಸದ ಪಿಸಿ ಮೋಹನ್

  ''ನಮ್ಮೆಲ್ಲರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನವಗ್ರಹದ ಜಗ್ಗು...ಯಜಮಾನದ ಕೃಷ್ಣ...ಕುರುಕ್ಷೇತ್ರದ ದುರ್ಯೋಧನ. ಹೀಗೆ ಪ್ರತಿ ಪಾತ್ರದಲ್ಲೂ ನಿಮಗೆ ನೀವೇ ಸಾಟಿ. ಕನ್ನಡ ಚಿತ್ರರಂಗದ ಡಿ ಬಾಸ್ ಇನ್ನೂ ಕೋಟಿ ಕೋಟಿ ಜನರ ಮನಸ್ಸಿನ ಯಜಮಾನನಾಗಲಿ ಎಂದು ಹಾರೈಸುವೆ'' ಎಂದು ಬಿಜೆಪಿ ಸಂಸದ ಪಿಸಿ ಮೋಹನ್ ಶುಭಹಾರೈಸಿದ್ದಾರೆ.

  ನಂಬರ್ ಒನ್ ಆಯ್ತು ರಾಬರ್ಟ್ ಟ್ರೈಲರ್ | Filmibeat Kannada
  English summary
  Sriramulu, ashwath narayan, BY Raghavendra, By Vijayendra, BC patil and Other Politicians wishes Challenging Star Darshan on his Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X