»   » ಬಾಲಿವುಡ್ ಚಿತ್ರಕ್ಕೆ ಪ್ರಭಾಸ್ ಚಾಲನೆ: 150 ಕೋಟಿ ಬಜೆಟ್

ಬಾಲಿವುಡ್ ಚಿತ್ರಕ್ಕೆ ಪ್ರಭಾಸ್ ಚಾಲನೆ: 150 ಕೋಟಿ ಬಜೆಟ್

Posted By:
Subscribe to Filmibeat Kannada

'ಬಾಹುಬಲಿ' ಚಿತ್ರಕ್ಕಾಗಿ ನಾಲ್ಕು ವರ್ಷ ಕಾಲ್ ಶೀಟ್ ಕೊಟ್ಟಿದ್ದ ಪ್ರಭಾಸ್ ಇತ್ತೀಚಿಗಷ್ಟೆ 'ಬಾಹುಬಲಿ' ಚಿತ್ರೀಕರಣ ಮುಗಿಸಿ ಹೊರ ಬಂದಿದ್ದರು. ಹೀಗಾಗಿ, ಪ್ರಭಾಸ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಇಡೀ ಚಿತ್ರಲೋಕವನ್ನೇ ಕಾಡಿತ್ತು. ಇದೀಗ ಈ ಕುತೂಹಲಕ್ಕೆ ಬ್ರೇಕ್ ಬಿದ್ದಿದ್ದು, ಪ್ರಭಾಸ್ ಹೊಸ ಚಿತ್ರಕ್ಕೆ ಅಧೀಕೃತವಾಗಿ ಚಾಲನೆ ಸಿಕ್ಕಿದೆ.['ಬಾಹುಬಲಿ-2' ಚಿತ್ರೀಕರಣದಿಂದ ಪ್ರಭಾಸ್ ಔಟ್!]

ಸರ್ಪ್ರೈಸ್ ಅಂದ್ರೆ, ಪ್ರಭಾಸ್ ಮುಂದಿನ ಸಿನಿಮಾ ಹಿಂದಿಯಲ್ಲೂ ತಯಾರಾಗುತ್ತಿದೆ. ಹೌದು, 'ಬಾಹುಬಲಿ' ಚಿತ್ರದ ಮೂಲಕ ಬಾಲಿವುಡ್ ಗೆ ಲಗ್ಗೆಯಿಟ್ಟಿದ್ದ ಪ್ರಭಾಸ್, ಈಗ ಮತ್ತೊಂದು ಚಿತ್ರದ ಮೂಲಕ ಬಿ-ಟೌನ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಮುಂದೆ ಓದಿ...

ಪ್ರಭಾಸ್ ಹೊಸ ಚಿತ್ರಕ್ಕೆ ಚಾಲನೆ

'ಬಾಹುಬಲಿ' ಚಿತ್ರವನ್ನ ಮುಗಿಸಿದ ಪ್ರಭಾಸ್, ತಮ್ಮ ಹೊಸ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ಫೆಬ್ರವರಿ 13ರಂದು ತಮ್ಮ ಹೊಸ ಚಿತ್ರಕ್ಕೆ ಅಧೀಕೃತವಾಗಿ ಚಾಲನೆ ನೀಡಿ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಪ್ರಭಾಸ್ 19ನೇ ಚಿತ್ರ

ಪ್ರಭಾಸ್ ಅಭಿನಯಿಸಲಿರುವ 19ನೇ ಚಿತ್ರ ಇದಾಗಿದ್ದು, ಚಿತ್ರದ ಮೊದಲ ದೃಶ್ಯಕ್ಕೆ ಹಿರಿಯ ನಟ ಕೃಷ್ಣಂ ರಾಜು ಕ್ಲಾಪ್ ಮಾಡಿ ಶುಭ ಹಾರೈಸಿದರು.

ಹೊಸ ನಿರ್ದೇಶಕನ ಜೊತೆ ಪ್ರಭಾಸ್ ಸಿನಿಮಾ

ಅಂದ್ಹಾಗೆ, ಈ ಚಿತ್ರವನ್ನ ಸುಜಿತ್ ಎಂಬ ಯುವ ನಿರ್ದೇಶಕ ನಿರ್ದೇಶನ ಮಾಡುತ್ತಿದ್ದಾರೆ. ಸುಜಿತ್ ಈ ಹಿಂದೆ 2014 ರಲ್ಲಿ 'ರನ್ ರಾಜಾ ರನ್' ಸಿನಿಮಾವನ್ನ ನಿರ್ದೇಶನ ಮಾಡಿದ್ದರು. ಇನ್ನೂ ಈ ಚಿತ್ರಕ್ಕೆ ಶಂಕರ್, ಇಸಾನ್ ರಾಯ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ.

'ಬಾಲಿವುಡ್'ಗೆ ಮತ್ತೆ ಪ್ರಭಾಸ್ ಎಂಟ್ರಿ

ಪ್ರಭಾಸ್ ಮುಂದಿನ ಚಿತ್ರ ಮೂರು ಭಾಷೆಗಳಲ್ಲಿ ತಯಾರಾಗುತ್ತಿದ್ದು, ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮೂಡಿ ಬರಲಿದೆ. ಈ ಮೂಲಕ 'ಬಾಹುಬಲಿ' ಚಿತ್ರದ ನಂತರ ಪ್ರಭಾಸ್ ಮತ್ತೆ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ.

150 ಕೋಟಿ ಬಜೆಟ್

ಈ ಚಿತ್ರವನ್ನ ವಂಶಿ ಮತ್ತು ಪ್ರಮೋದ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದು, ಈ ಚಿತ್ರದ ಬಜೆಟ್ ಸುಮಾರು 150 ಕೋಟಿ ಇರಲಿದೆಯಂತೆ. ಹೀಗಾಗಿ, ಇದು ಟಾಲಿವುಡ್ ಇಂಡಸ್ಟ್ರಿಯ ಮತ್ತೊಂದು ಮೆಗಾಮೂವಿಯಾಗಲಿದೆ.

ಇಬ್ಬರು ನಾಯಕಿಯರು

ಪ್ರಭಾಸ್ ಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಜೊತೆಯಾಗಲಿದ್ದಾರಂತೆ. ಸದ್ಯ, ನಾಯಕಿಯರ ಹುಡುಕಾಟದಲ್ಲಿರುವ ಚಿತ್ರತಂಡ ಇದುವರೆಗೂ ಯಾವುದೇ ನಾಯಕಿಯರು ಅಂತಿಮವಾಗಿಲ್ಲ ಎಂದು ಸ್ವಷ್ಟಪಡಿಸಿದೆ.

English summary
Telugu Super Star Prabhas Has Wrapped up Baahubali 2, He has Started his new film on Monday (february 13) with Director Sujeeth of 'Run Raja Run' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada