Don't Miss!
- Technology
ಚೀನಾಗೆ ಬಿಗ್ ಶಾಕ್ ನೀಡಿದ ಭಾರತ! 138 ಬೆಟ್ಟಿಂಗ್ ಆ್ಯಪ್ಗಳಿಗೆ ಗೇಟ್ಪಾಸ್!
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರಜ್ವಲ್ ದೇವರಾಜ್ ಅಭಿಮಾನಿಗಳಿಗೆ ವಿಶೇಷ ಮನವಿ
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದ ಹಿನ್ನೆಲೆ ತಮ್ಮ ಅಭಿಮಾನಿಗಳಲ್ಲಿ ವಿಶೇಷವಾದ ಮನವಿ ಮಾಡಿಕೊಂಡಿದ್ದಾರೆ. ಜುಲೈ 4 ರಂದು ಪ್ರಜ್ವಲ್ ದೇವರಾಜ್ ತಮ್ಮ 34ನೇ ವರ್ಷದ ಜನುಮದಿನ ಆಚರಿಸಿಕೊಳ್ಳಲಿದ್ದಾರೆ. ಆದರೆ, ಈ ವರ್ಷ ಹುಟ್ಟುಹಬ್ಬವನ್ನು ಸಂಭ್ರಮಿಸದಿರಲು ನಿರ್ಧರಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.
''ನನ್ನ ಪ್ರೀತಿಯ ಅಭಿಮಾನಿಗಳಿಗೆ ನನ್ನೆಲ್ಲಾ ಅಭಿಮಾನಿ ಗೆಳೆಯರಿಗೆ ನಿಮ್ಮ ಸವಿನೆನಪುಗಳೊಂದಿಗೆ ಪ್ರಜ್ವಲ್ ದೇವರಾಜ್ ಮಾಡುವ ನಮಸ್ಕಾರಗಳು....ವಿಷಯ ನನ್ನ ಹುಟ್ಟುಹಬ್ಬದ ಬಗ್ಗೆ....'' ಎಂದು ಪತ್ರ ಬರೆದಿರುವ ಪ್ರಜ್ವಲ್ ಕೊರೊನಾ ಸಂತ್ರಸ್ಥರಿಗೆ ಸಹಾಯ ಮಾಡಿ ಎಂದು ಕರೆ ನೀಡಿದ್ದಾರೆ. ಮುಂದೆ ಓದಿ...

ಪೆನ್ನು-ಪುಸ್ತಕ ವಿತರಿಸಿದ್ದು ಸಂತಸ
ಹಿಂದಿನ ವರ್ಷ ನನ್ನ ಹುಟ್ಟುಹಬ್ಬದ ದಿನ ನನ್ನ ಅಭಿಮಾನಿಗಳೆಲ್ಲರೂ ರಾಜ್ಯಾದ್ಯಂತ ಬಡ ಶಾಲಾ ಮಕ್ಕಳಿಗೆ ಪೆನ್ನು ಪುಸ್ತಕಗಳನ್ನು ವಿತರಿಸಿದ್ದು ನನಗೆ ಸಂತಸ ತಂದಿದೆ. ಅದರಲ್ಲೂ ನೀವು ನೀಡಿದಂತಹ ಪೆನ್ನು ಪುಸ್ತಕ ಪರಿಕರಗಳನ್ನು ನಾನು ದತ್ತು ಪಡೆದ ಶಾಲಾ ಮಕ್ಕಳಿಗೆ ವಿತರಿಸಿದಾಗ ಆ ಮಕ್ಕಳು ಸಂತೋಷ ಪಟ್ಟಿದ್ದು, ಅವರ ಸಂತೋಷದಲ್ಲಿ ನಾನು ಭಾಗಿಯಾಗಿದ್ದು ನಿಜವಾಗಿಯೂ ಸಂತಸದ ವಿಷಯ.
ಪ್ರಜ್ವಲ್
ದೇವರಾಜ್
ಹುಟ್ಟುಹಬ್ಬಕ್ಕೆ
PD35
ಚಿತ್ರದ
ಟೈಟಲ್
ಅನಾವರಣ

ಹುಟ್ಟುಹಬ್ಬ ಆಚರಿಸುವುದು ಬೇಡ
ಆದರೆ ಈಗಿನ ಪರಿಸ್ಥಿತಿ ಹಿಂದಿನ ವರ್ಷದ ಪರಿಸ್ಥಿತಿಗಿಂತ ವಿಷಮಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಕೆಟ್ಟ ಪರಿಸ್ಥಿತಿಯಲ್ಲಿ ಇಷ್ಟೊಂದು ಸಾವು ನೋವುಗಳ ಮಧ್ಯೆ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದು ಎಷ್ಟು ಸಮಂಜಸ? ಆದ್ದರಿಂದ ಈ ಪರಿಸ್ಥಿತಿಯಲ್ಲಿ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ.

ಕೊರೊನಾ ಸಂತ್ರಸ್ಥರಿಗೆ ಸಹಾಯ ಮಾಡಿ
ತಾವುಗಳು ನನ್ನ ಹುಟ್ಟುಹಬ್ಬಕ್ಕೆ ಹಾರ, ಕೇಕ್, ಉಡುಗೊರೆಗಾಗಿ ಖರ್ಚು ಮಾಡುವ ಹಣವನ್ನು ಕೊರೊನಾದಿಂದ ಬಳಲಿರುವ ಜನರಿಗೆ ಸಹಾಯ ಹಸ್ತ ನೀಡಿದರೆ ಅದೇ ನನಗೆ ನೀವು ತೋರುವ ಪ್ರೀತಿಯ ಅಭಿಮಾನ. ಆದ್ದರಿಂದ ದಯವಿಟ್ಟು ಅಭಿಮಾನಿಗಳು ಕೊರೊನಾ ಸಂತ್ರಸ್ಥರಿಗೆ ಸಹಾಯ ಹಸ್ತ ನೀಡುವ ಮೂಲಕ ನನ್ನ ಹುಟ್ಟುಹಬ್ಬಕ್ಕೆ ಹರಸಿ ಹಾರೈಸಿ ಎಂದು ಕೇಳಿಕೊಳ್ಳುತ್ತೇನೆ- ಪ್ರಜ್ವಲ್ ದೇವರಾಜ್
Recommended Video

ಟೈಟಲ್ ಮತ್ತು ಪೋಸ್ಟರ್ ಬಿಡುಗಡೆ
ಡೈನಾಮಿಕ್ ಪ್ರಿನ್ಸ್ ಹುಟ್ಟುಹಬ್ಬದ ಹಿನ್ನೆಲೆ ತಮ್ಮ 35ನೇ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಪೋಸ್ಟರ್ ಜುಲೈ 4 ರಂದು ಬೆಳಗ್ಗೆ 10:10 ಗಂಟೆಗೆ ಅನಾವರಣವಾಗಲಿದೆ. ಈ ಹಿಂದೆ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ನಟಿಸಿದ್ದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ನಿರ್ದೇಶಿಸಿದ್ದ ಗುರುದತ್ ಗಾಣಿಗ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.