»   » ಪ್ರಜ್ವಲ್ ದೇವರಾಜ್ ಸಾಗರ್ ಬಿಡುಗಡೆಗೆ ಕ್ಷಣಗಣನೆ

ಪ್ರಜ್ವಲ್ ದೇವರಾಜ್ ಸಾಗರ್ ಬಿಡುಗಡೆಗೆ ಕ್ಷಣಗಣನೆ

Posted By:
Subscribe to Filmibeat Kannada

ಕೋಟಿ ರಾಮು ನಿರ್ಮಾಣದ 'ಸಾಗರ್' ಚಿತ್ರ ನಾಳೆ, ಅಂದರೆ 10 ಆಗಸ್ಟ್ 2012 ರಂದು ತೆರೆಗೆ ಬರಲಿದೆ. ಪ್ರಜ್ವಲ್ ದೇವರಾಜ್ ನಾಯಕತ್ವದ ಈ ಚಿತ್ರದಲ್ಲಿ ರಾಧಿಕಾ ಪಂಡಿತ್, ಹರಿಪ್ರಿಯಾ ಹಾಗೂ ಸಂಜನಾ ನಾಯಕಿಯರು. ಕೆಜಿ ರಸ್ತೆಯ 'ಸಾಗರ್' ಚಿತ್ರಮಂದಿರಕ್ಕಾಗಿ ಕಾದಿದ್ದ 'ಸಾಗರ್' ಚಿತ್ರತಂಡ, ಅಲ್ಲಿ ಅದ್ದೂರಿ ಚಿತ್ರ 50 ಯಶಸ್ವಿ ದಿನ ಪೂರೈಸಿಯೂ ಮುನ್ನುಗ್ಗುತ್ತಿರುವ ಕಾರಣಕ್ಕೆ 'ತ್ರಿವೇಣಿ ಚಿತ್ರಮಂದಿರದಲ್ಲಿ ಬಿಡುಗಡೆ ಘೋಷಿಸಿದೆ.

ಇತ್ತೀಚಿಗೆ ನಟ ಪ್ರಜ್ವಲ್ ದೇವರಾಜ್ ಚಿತ್ರ ತೆರೆ ಕಂಡಿರಲಿಲ್ಲ. ಹೀಗಾಗಿ ಪ್ರಜ್ವಲ್ ಅಭಿಮಾನಿಗಳಲ್ಲಿ ಈ 'ಸಾಗರ್' ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಈ ಹಿಂದೆ ಬಂದಿದ್ದ ಪ್ರಜ್ವಲ್ ಚಿತ್ರ 'ಗುಲಾಮ' ನಿರ್ಮಾಪಕರೂ ಕೂಡ ಕೋಟಿ ರಾಮು. ಆದರೆ ಆ ಚಿತ್ರ ಸೋಲು ಕಂಡಿತ್ತು. ಈಗ ಎಂಡಿ ಶ್ರೀಧರ್ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಸಾಗರ್' ಬಗ್ಗೆ ನಿರ್ಮಾಪಕ ರಾಮುಗೆ ಭಾರಿ ಭರವಸೆಯಿದೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್ ಛಾಯಾಗ್ರಹಣವಿದೆ.

ಎಂಡಿ ಶ್ರೀಧರ್ ನಿರ್ದೇಶನದ ಈ ಚಿತ್ರ ಸ್ವಮೇಕ್ ಎನ್ನುವುದು ವಿಶೇಷ. ಈ ಚಿತ್ರದ ಮೂಲಕ ತೆಲುಗಿನ 'ಮಗಧೀರ' ಖ್ಯಾತಿಯ ದೇವಗಿಲ್ ಕನ್ನಡಕ್ಕೆ ಬಂದಿದ್ದಾರೆ. ಅವರ ಪಾತ್ರಕ್ಕೆ ಡಬ್ಬಿಂಗ್ ಮಾಡಿರುವವರು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್. ಈ ಚಿತ್ರದ ಮೂಲಕ ಮೊದಲ ಬಾರಿಗೆ ಡಬ್ಬಿಂಗ್ ಕ್ಷೇತ್ರಕ್ಕೂ ಕಾಲಿಟ್ಟಿರುವ ಸಂಗೀತ ನಿರ್ದೇಶಕ ಗುರುಕಿರಣ್, ಈ ತಮ್ಮ ಪ್ರಯತ್ನಕ್ಕೆ ಪ್ರೇಕ್ಷಕರಿಂದ ಬರುವ ಪ್ರತಿಕ್ರಿಯೆಗಾಗಿ ಕಾದಿದ್ದಾರೆ.

ನಿರ್ಮಾಪಕ ರಾಮು ಈ ಮೊದಲು 'ಸಾಗರ್' ಚಿತ್ರವನ್ನು ತೆಲುಗಿನಲ್ಲಿ ನಿರ್ಮಿಸಲು ಮುಂದಾಗಿದ್ದರು. ಅವರ ನಿರ್ಧಾರವನ್ನು ಬದಲಿಸಿ ಅದನ್ನು ಕನ್ನಡದಲ್ಲಿ ನಿರ್ದೇಶಿಸಿದ್ದು ಎಂಡಿ ಶ್ರೀಧರ್. ನಾಳೆ ಬಿಡಗಡೆಯಾಗಲಿರುವ ಸಾಗರ್, ಕನ್ನಡದಲ್ಲಿ ಯಶಸ್ವಿಯಾದರೆ ಮುಂದೆ 'ಸಾಗರ್' ಚಿತ್ರ ತೆಲುಗಿಗೆ ರಿಮೇಕ್ ಅಥವಾ ಡಬ್ ಆಗಲಿದೆ. ಸದ್ಯಕ್ಕೆ ಕರ್ನಾಟಕದಾದ್ಯಂತ ಒಟ್ಟೂ 120 ಚಿತ್ರಮಂದಿರಗಳಲ್ಲಿ ಸಾಗರ್ ಬಿಡುಗಡೆಯಾಗಲಿದೆ. (ಒನ್ ಇಂಡಿಯಾ ಕನ್ನಡ)

English summary
Prajwal Devaraj movie Sagar Releases Tomorrow, on 10th August 2012. Sagar releases more than 120 Theaters in all over Karnataka. Gurukiran Music is for this Koti Ramu Produced movie. Radhika Pandit, Haripriya and Sanjana are the heroines. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada