For Quick Alerts
  ALLOW NOTIFICATIONS  
  For Daily Alerts

  ಕಟಕಟೆಯಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್

  By Rajendra
  |

  ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈ ಬಾರಿ ಕೌಟುಂಬಿಕ ಕಥಾಹಂದರ ಚಿತ್ರದ ಜೊತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಪ್ರಜ್ವಲ್ ಅವರು ಕಟಕಟೆಯಲ್ಲಿ ಎದುರಿಸುವ ಸವಾಲ್ ಜೊತೆಗೆ ಗಟ್ಟಿ ಮುಟ್ಟಾದ ಖಳ ನಟ ರಾಜ್ ಕೆ ಪುರೋಹಿತ್ 'ಸವಾಲ್' ಎದುರಿಸುವ ಸಂದರ್ಭ ಸಿನೆಮಾದಲ್ಲಿ ಕಾಣಲಿದೆ.

  ಶ್ರೀ ತಿರುಮಲಾ ಮೂವಿ ಮಕೇರ್ಸ್ ಅವರ 'ಸವಾಲ್' ಮನೆ ಮಂದಿಗೆಲ್ಲ ಮನರಂಜನೆ ನೀಡಲು ಈ ವಾರ (ಮಾ.14) ತೆರೆ ಕಾಣುತ್ತಿದೆ. 'ಸವಾಲ್' ನಾಯಕ ಕೋರ್ಟಿನ ಕಟಕಟೆ ಅಲ್ಲಿ ಅದೆಂತಹ ಸವಾಲುಗಳನ್ನು ಎದುರಿಸುತ್ತಾನೆ ಹಾಗೂ ಹಾಕುತ್ತಾನೆ ಎಂಬುದು ಕುತೂಹಲದ ವಿಚಾರ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮತ್ತೊಮ್ಮೆ ವಕೀಲನಾಗಿ ಅಭಿನಯಿಸಿದ್ದಾರೆ. ಸೋನ ಚಿತ್ರದ ನಾಯಕಿ. ['ಅಂಗಾರಕ'ವಿಮರ್ಶೆ]

  ಮುತ್ತುರಾಜ್, ಶೋಭಾರಾಜ್, ಅಭಯ್, ಮನೋಹರ್, ರಾಜ್ ಕೆ ಪುರೋಹಿತ್, ರೇಖ ದಾಸ್, ಸಾಧು ಕೋಕಿಲ, ಬುಲ್ಲೆಟ್ ಪ್ರಾಕಾಶ್, ರಾಜು ತಾಳಿಕೋಟೆ, ಅಚ್ಯುತ್ ಕುಮಾರ್, ಟೆನ್ನಿಸ್ ಕೃಷ್ಣ, ಉಮೇಶ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.

  ಭೂಮಿ ತಾಯಿಯ ಸೇವೆಯಲ್ಲಿ ತೊಡಗಿ ರೈತನಾಗಿರುವ ಹಾಗೂ ಪಂಚಾಯತಿ ಸದಸ್ಯರು ಆಗಿರುವ ಕೆ ತಿಮ್ಮರಾಜು ಚಿತ್ರದ ನಿರ್ಮಾಪಕರು. ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನ ಧನಂಜಯ ಬಾಲಾಜಿ ಅವರದು. ವಿ ಮನೋಹರ್ ಅವರ ಸಂಗೀತ, ಪಿ ಕೆ ಎಚ್ ದಾಸ್ ಅವರ ಛಾಯಾಗ್ರಹಣ, ಧನಂಜಯ ಬಾಲಾಜಿ, ಕೆ ವೆಂಕಟೇಶ್, ಪ್ರತಾಪ್, ವಿಶ್ವ, ರಾಜು ಅವರ ಸಂಭಾಷಣೆ, ಮನೋಹರ್, ಯೋಗರಾಜ್ ಭಟ್, ಅಪ್ಪು, ಧನಂಜಯ ಬಾಲಾಜಿ ಅವರ ಗೀತ ಸಾಹಿತ್ಯವಿದೆ.

  ವಿನೋದ್ ಮನೋಹರ್ ಅವರ ಸಂಕಲನ, ಬಾಬು ಖಾನ್ ಅವರ ಕಲೆ, ಡಿಫರೆಂಟ್ ಡ್ಯಾನಿ, ಶಿವು ಅವರ ಸಾಹಸ, ಮುರಳಿ, ರಾಮು, ಸುರೇಶ್, ಮನು ಅಕುಳ್ ಅವರ ನೃತ್ಯ ಸಂಯೋಜನೆ, ಗಂಡಸಿ ನಾಗರಾಜ್ ಅವರ ವಸ್ತ್ರ ವಿನ್ಯಾಸ 'ಸವಾಲ್' ಚಿತ್ರಕ್ಕೆ ಇದೆ. (ಒನ್ಇಂಡಿಯಾ ಕನ್ನಡ)

  English summary
  Dynamic Prince Prajwal Devraj's Savaal movie schedule to release on 14th March. Prajwal will be seen as a lawyer in this flick. Sona plays a female lead. Music by V Manohar, PKH Das camera and dialogues by Dhananjay Balaji.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X