»   » ನಟ ಪ್ರಕಾಶ್ ರೈ 'ಒಗ್ಗರಣೆ'ಗೆ ಐವತ್ತರ ಘಮಘಮ

ನಟ ಪ್ರಕಾಶ್ ರೈ 'ಒಗ್ಗರಣೆ'ಗೆ ಐವತ್ತರ ಘಮಘಮ

Posted By:
Subscribe to Filmibeat Kannada

ನಟ ಪ್ರಕಾಶ್ ರೈ ಹಾಕಿದ 'ಒಗ್ಗರಣೆ' ಘಮಲು ಐವತ್ತರ ಗಡಿ ತಲುಪಿದೆ. ಈ ಚಿತ್ರ ಮಲಯಾಲಂನ 'ಸಾಲ್ಟ್ ಅಂಡ್ ಪೆಪ್ಪರ್' ಚಿತ್ರದ ರೀಮೇಕ್ ಆದರೂ ಪ್ರಕಾಶ್ ರೈ ಅವರು ತಮ್ಮದೇ ಆದಂತಹ ಸೊಗಡನ್ನು ಚಿತ್ರಕ್ಕೆ ಕೊಟ್ಟಿದ್ದರು. ಇದೀಗ ಅರ್ಧ ಶತಕದತ್ತ 'ಒಗ್ಗರಣೆ' ಮುನ್ನುಗ್ಗುತ್ತಿದೆ.

ರಾಜ್ಯದ ಐದು ಕೇಂದ್ರಗಳಲ್ಲಿ ಒಗ್ಗರಣೆ ಐವತ್ತು ದಿನಗಳನ್ನು ಪೂರೈಸಲು ರೆಡಿಯಾಗಿದೆ. ಯಲಹಂಕದ ಗಣೇಶ್, ತಿಪಟೂರಿನ ಲಕ್ಷ್ಮಿ, ಶಹಪುರದ ಜಯಶ್ರೀ, ಬಾದಾಮಿಯ ಕುಮಾರೇಶ್ವರ ಹಾಗೂ ಹರಿಹರದ ಜಯಶ್ರೀ ಚಿತ್ರಮಂದಿರಗಳಲ್ಲಿ 'ಒಗ್ಗರಣೆ' ಘಮಘಮ ಎನ್ನುತ್ತಿದೆ. [ಒಗ್ಗರಣೆ ಚಿತ್ರ ವಿಮರ್ಶೆ]

Oggarane movie still

ಪ್ರಕಾಶ್ ರೈ ಅವರ ಕೆಫೆಯಲ್ಲಿ ಸಿದ್ಧವಾದ 'ಒಗ್ಗರಣೆ' ಚಿತ್ರ ಕೇವಲ ಕಣ್ಣಿಗಷ್ಟೇ ಅಲ್ಲ ಮನಸ್ಸಿಗೂ ರುಚಿ ನೀಡುತ್ತದೆ. ಒಂದು ಸದಭಿರುಚಿಯ ಚಿತ್ರವನ್ನು ಪ್ರೇಕ್ಷಕರು ಮನಸಾರೆ ಸವಿಯುತ್ತಿದ್ದಾರೆ. ಚಿತ್ರದಲ್ಲಿ ಕಥೆಗೆ ಪೂರಕವಾಗಿ ಅಡುಗೆ ಪ್ರಮುಖ ಪಾತ್ರ ವಹಿಸುತ್ತದೆ. ಎರಡು ಮನಸ್ಸುಗಳನ್ನು ಬೆಸೆಯುತ್ತದೆ.

ಇಬ್ಬರು ಮಧ್ಯವಯಸ್ಕರ ನಡುವಿನ ತೊಳಲಾಟ, ಭಾವನೆಗಳ ಸಂಘರ್ಷ, ತಾಕಲಾಟಗಳೇ ಚಿತ್ರದ ಜೀವಾಳ. ಮಧ್ಯವಯಸ್ಕ ಪ್ರೇಮಿಗಳ ಜೊತೆ ಯುವ ಪ್ರೇಮಿಗಳಾಗಿ ತೇಜಸ್ (ಹೊಸ ಪರಿಚಯ) ಹಾಗೂ ಸಂಯುಕ್ತಾ ಹೊರನಾಡ್ ಅವರ ಚಿಲಿಪಿಲಿ ಪ್ರೇಮವೂ ಇದೆ.

ಚಿತ್ರದಲ್ಲಿ ಊರ್ವಶಿ, ಮಂಡ್ಯ ರಮೇಶ್ ಅವರ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಅಡುಗೆಭಟ್ಟನಾಗಿ ಅಚ್ಯುತ ಕುಮಾರ್ ಅವರ ಪಾತ್ರ ಅಮೋಘ. ಇಳಯರಾಜಾ ಅವರ ಸಂಗೀತದ ಹಾಡುಗಳು 'ಒಗ್ಗರಣೆ'ಯಲ್ಲಿ ಸಾಸಿವೆಯಂತೆ ಚಿಟಪಟ ಎಂದು ಸಿಡಿದು ಸೊಗಸಾಗಿವೆ. ಪ್ರೀತಾ ನಾಗರಾಜ್ ಅವರ ಛಾಯಾಗ್ರಹಣ ಕಣ್ಣಿಗೆ ಕಣ್ಣಿಗೆ ಹಿತಮಿತವಾಗಿದೆ. (ಒನ್ಇಂಡಿಯಾ ಕನ್ನಡ)

English summary
Prakash Raj and Sneha lead Kannada movie 'Oggarane' successfully running towards 50 days in five centres. The story of the film revolves around a few foodies, whose fondness of food bonds them together.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada