For Quick Alerts
  ALLOW NOTIFICATIONS  
  For Daily Alerts

  'ವೈರಂ' ಟೀಸರ್‌ ಲಾಂಚ್‌ ವೇದಿಕೆಯಲ್ಲಿ ಅಣ್ಣನನ್ನು ನೆನೆದು ಪ್ರಣಾಮ್ ಭಾವುಕ

  |

  4 ವರ್ಷಗಳ ಹಿಂದೆ 'ಕುಮಾರಿ 21F' ಸಿನಿಮಾ ಮೂಲಕ ಪ್ರಣಾಮ್ ದೇವರಾಜ್ ಬಣ್ಣದಲೋಕಕ್ಕೆ ಕಾಲಿಟ್ಟಿದ್ದರು. ಆದರೆ ಮೊದಲ ಸಿನಿಮಾ ಕೈ ಹಿಡಿಯಲಿಲ್ಲ. ದೊಡ್ಡ ಗ್ಯಾಪ್‌ನ ನಂತರ ಹಿರಿಯ ನಟ ದೇವರಾಜ್ ಕಿರಿಯ ಪುತ್ರ ಆಕ್ಷನ್ ಧಮಾಕ ತೋರಿಸೋಕೆ ಬರ್ತಿದ್ದಾರೆ. 'ವೈರಂ' ಸಿನಿಮಾ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ.

  ಲವರ್ ಬಾಯ್‌ ಆಗಿ ಚಿತ್ರರಂಗಕ್ಕೆ ಬಂದಿದ್ದ ಪ್ರಣಾಮ್ ಈಗ ಮಾಸ್ ಹೀರೊ ಆಗಿ ಅಬ್ಬರಿಸೋಕೆ ಬರ್ತಿದ್ದಾರೆ. ಸಾಯಿ ಶಿವನ್ ಜಂಪಾನ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ವೈರಂ' ಸಿನಿಮಾ ಟೀಸರ್ ರಿಲೀಸ್ ಆಗಿ ಗಮನ ಸೆಳೀತಿದೆ. ಚಿತ್ರದಲ್ಲಿ KGF ಸಿನಿಮಾ ಖ್ಯಾತಿಯ ಗರುಡ ರಾಮ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಪ್ರಣಾಮ್ ಮಾಸ್ ಹೀರೊ ಆಗಿ ದರ್ಬಾರ್ ನಡೆಸಿದ್ದಾರೆ. ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ 'ವೈರಂ' ಸಿನಿಮಾ ಬಿಡುಗಡೆ ಆಗಲಿದೆ. ಸಾಗರ್ ಮಹಾಥಿ ಸಂಗೀತ ಚಿತ್ರಕ್ಕಿದೆ.

  Pranam Devraj Got Emotional In Vairam Movie Teaser Launch Event

  'ವೈರಂ' ಟೀಸರ್ ರಿಲೀಸ್ ಈವೆಂಟ್‌ನಲ್ಲಿ ಇಡೀ ದೇವರಾಜ್ ಕುಟುಂಬ ಭಾಗಿ ಆಗಿತ್ತು. ಆದರೆ ಪ್ರಜ್ವಲ್ ದೇವರಾಜ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. 4 ವರ್ಷಗಳಿಂದ ಈ ಚಿತ್ರಕ್ಕಾಗಿ ಪ್ರಣಾಮ್ ಕಾಯುತ್ತಿದ್ದರು. ಇಷ್ಟು ದಿನಗಳ ಕಾಲ ತಮಗೆ ಬೆಂಬಲವಾಗಿ ನಿಂತ ತಂದೆ ದೇವರಾಜ್ ಹಾಗೂ ಸಹೋದರ ಪ್ರಜ್ವಲ್ ನೆನೆದು ಪ್ರಣಾಮ್ ಭಾವುಕರಾದರು. ವೇದಿಕೆಯಲ್ಲಿ ಮಾತಾಡುತ್ತಾ ಗದ್ಗರಿತರಾದರು. ಪ್ರಜ್ವಲ್ ದೇವರಾಜ್‌ ಸಿನಿಮಾ ಶೂಟಿಂಗ್‌ಗಾಗಿ ಕಳೆದೊಂದು ತಿಂಗಳಿನಿಂದ ಹೈದರಾಬಾದ್‌ನಲ್ಲಿ ಇದ್ದಾರೆ. ಅಣ್ಣನನ್ನು ಈ ಸಮಯದಲ್ಲಿ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಪ್ರಣಾಮ್ ಹೇಳಿದ್ದಾರೆ. ಸಿನಿಮಾ ತಡವಾಗುತ್ತಿದ್ದಾಗ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಜೊತೆಗೆ ನಿಂತರು. ಅವರು ಇಲ್ಲದೇ ಇದ್ದಿದ್ದರೆ ಮತ್ತಷ್ಟು ಕಷ್ಟ ಆಗುತ್ತಿತ್ತು ಎಂದು ಪ್ರಣಾಮ್ ಧನ್ಯವಾದ ತಿಳಿಸಿದ್ದಾರೆ.

  ರೊಮ್ಯಾಂಟಿಕ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ವೈರಂ'. ಚಿತ್ರದಲ್ಲಿ 4 ಹಾಡುಗಳು ಇವೆ. ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಅದನ್ನು ಅಷ್ಟೇ ಸೊಗಸಾಗಿ ಶೂಟ್ ಮಾಡಿದ್ದಾರೆ. ಸದ್ಯ 'ವೈರಂ' ಟೀಸರ್ ಮಾತ್ರ ರಿಲೀಸ್ ಆಗಿದ್ದು, ಶೀಘ್ರದಲ್ಲೇ ಮತ್ತಷ್ಟು ಅಪ್‌ಡೇಟ್ ಸಿಗಲಿದೆ. ಈಗಾಗಲೇ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ.

  "FAT+Her=Father" ಎಂದ ಚಂದನ್, ನಿವೇದಿತಾ: ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ?

  English summary
  Pranam Devraj Got Emotional In Vairam Movie Teaser Launch Event. Sai Shivan Jampana Directed Romantic Action Entertainer movie will be released in Kannada and Telugu simultaneously. Know more.
  Tuesday, January 10, 2023, 5:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X