For Quick Alerts
  ALLOW NOTIFICATIONS  
  For Daily Alerts

  Pranitha Subhash: ಶುಭ ಸುದ್ದಿ ಹಂಚಿಕೊಂಡ ನಟಿ ಪ್ರಣಿತಾ ಸುಭಾಶ್

  |

  ನಟಿ ಪ್ರಣಿತಾ ಸುಭಾಶ್ ಅಭಿಮಾನಿಗಳೊಟ್ಟಿಗೆ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ನಟಿ ಪ್ರಣಿತಾ ಸುಭಾಶ್ ತಾಯಿಯಾಗುತ್ತಿದ್ದಾರೆ. ಈ ಸಂತಸದ ವಿಷಯವನ್ನು ಇನ್ ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ ಈ ನಟಿ.

  ಮಗುವಿನ ಸ್ಕ್ಯಾನಿಂಗ್ ಚಿತ್ರವನ್ನು ಹಿಡಿದು ಪತಿಯೊಟ್ಟಿಗೆ ಖುಷಿಯಿಂದ ಸೆಲೆಬ್ರೇಟ್ ಮಾಡುತ್ತಿರುವ ಚಿತ್ರವನ್ನು ಪ್ರಣಿಯಾ ಸುಭಾಶ್ ಹಂಚಿಕೊಂಡಿದ್ದಾರೆ. ಹಲವು ಮಂದಿ ಅಭಿಮಾನಿಗಳು ಪ್ರಣಿತಾ ಸುಭಾಶ್ ಹಾಗೂ ಪತಿಗೆ ಅಭಿನಂದನೆಗಳನ್ನು ಹೇಳಿದ್ದಾರೆ.

  ಗುಟ್ಟಿನ ಮದುವೆ ಬಗ್ಗೆ ನಟಿ ಪ್ರಣಿತಾ ಸ್ಪಷ್ಟನೆ: ಕೊಟ್ಟ ಕಾರಣವೇನು?ಗುಟ್ಟಿನ ಮದುವೆ ಬಗ್ಗೆ ನಟಿ ಪ್ರಣಿತಾ ಸ್ಪಷ್ಟನೆ: ಕೊಟ್ಟ ಕಾರಣವೇನು?

  ಇನ್ ಸ್ಟಾಗ್ರಾಂನಲ್ಲಿ ಚಿತ್ರ ಹಂಚಿಕೊಂಡಿರುವ ನಟಿ, ''ನನ್ನ ಪತಿಯ 34ನೇ ವರ್ಷದ ಹುಟ್ಟುಹಬ್ಬದ ಸಂದರ್ಭ ಮೇಲಿರುವ ದೇವತೆಗಳು ನಮಗಾಗಿ ಉಡುಗೊರೆ ಕಳಿಸಿದ್ದಾರೆ'' ಎಂದು ನಟಿ ಪ್ರಣಿತಾ ಬರೆದುಕೊಂಡಿದ್ದಾರೆ. ನಟಿ ಪ್ರಣಿತಾ ನಿನ್ನೆ ಹಾಕಿದ್ದ ಇನ್ ಸ್ಟಾಗ್ರಾಂ ಪೋಸ್ಟ್ ನಿಂದಲೇ ಊಹಿಸಿದ್ದರು. 'ನೀವು ಭೇಟಿಯೇ ಆಗದವರ ಮೇಲೆ ಪ್ರೀತಿಗೆ ಬಿದ್ದಿದ್ದೀರ?' ಎಂದು ಬರೆದುಕೊಂಡಿದ್ದರು. ಹಾಗಾಗಿಯೇ ನಿನ್ನೆಯೇ ಕೆಲವರು ಪ್ರಣಿತಾ ತಾಯಿ ಆಗುತ್ತಿರುವ ಬಗ್ಗೆ ಊಹೆ ಮಾಡಿದ್ದರು. ಅದು ಇಂದು ನಿಜವಾಗಿದೆ. ಇಂದು ಅಧಿಕೃತವಾಗಿ ಪ್ರಣಿತಾ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

  ಕಳೆದ ವರ್ಷ ಮೇ 30 ರಂದು ಕನಕಪುರ ಬಳಿಯ ರೆಸಾರ್ಟ ಒಂದರಲ್ಲಿ ನಟಿ ಪ್ರಣಿತಾ, ಉದ್ಯಮಿ ನಿತಿನ್ ರಾಜಾ ಎಂಬುವರೊಡನೆ ವಿವಾಹವಾಗಿದ್ದರು. ಮದುವೆಯನ್ನು ಬಹಳ ಗುಟ್ಟಾಗಿ ಆಗಿದ್ದರು ಪ್ರಣಿತಾ, ವಿವಾಹದ ಸುದ್ದಿಯನ್ನು ಅಲ್ಲಗಳೆದಿದ್ದರು. ಆದರೆ ಮದುವೆಯಾದ ಮಾರನೇಯ ದಿನ ಅಂದರೆ ಮೇ 31ರಂದು ಸುದ್ದಿಯನ್ನು ಅಧಿಕೃತಗೊಳಿಸಿದ್ದರು. ಕೆಲವು ಅನಿವಾರ್ಯ ಕಾರಣಗಳಿಂದಾಗಿ ಮದುವೆಯ ಕುರಿತು ಯಾರಿಗೂ ಹೇಳಲಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು. ಪ್ರಣಿತಾ ಪತಿ ನಿತಿನ್ ರಾಜಾ ಉದ್ಯಮಿಯಾಗಿದ್ದು ಬೆಂಗಳೂರಿನಲ್ಲಿ ಮಾಲ್ ಒಂದನ್ನು ಹೊಂದಿದ್ದಾರೆ ಎನ್ನಲಾಗಿದೆ.

  ಗುಟ್ಟಾಗಿ ಮದುವೆಯಾದ ನಟಿ ಪ್ರಣಿತಾ ಸುಭಾಷ್ಗುಟ್ಟಾಗಿ ಮದುವೆಯಾದ ನಟಿ ಪ್ರಣಿತಾ ಸುಭಾಷ್

  ಇಂದು ಪ್ರಣಿತಾ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರಾದರೂ ಯಾವ ಚಿತ್ರದಲ್ಲಿಯೂ ಪತಿಯ ಮುಖವನ್ನು ತೋರಿಸಿಲ್ಲ. ಮದುವೆಯನ್ನು ಗುಟ್ಟಾಗಿ ಆಗಿದ್ದ ಪ್ರಣಿತಾ, ಪತಿ ಗುರುತನ್ನೂ ಗುಟ್ಟಾಗಿಯೇ ಇರಿಸಿದ್ದಾರೆ.

  Pranitha Subhash Announces Pregnancy; Actress Expecting First Baby

  ಮದುವೆಯಾದ ಮೇಲೆಯೂ ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಣಿತಾ, ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಕೊಂಡಿದ್ದಾರೆ. ಪ್ರಣಿತಾ ಫೌಂಡೇಶನ್ ಮೂಲಕ ಹಲವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಟಿ.

  ದರ್ಶನ್ ಜೊತೆಗೆ ಕನ್ನಡದ 'ಪೋರ್ಕಿ' ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಈ ಬೆಡಗಿ ಆ ನಂತರ ಹಲವು ಸಿನಿಮಾಗಳಲ್ಲಿ ನಟಿಸಿದರು. ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವುದು ಮಾತ್ರವೇ ಅಲ್ಲದೆ ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಈಗ ಕನ್ನಡದ 'ರಾಮನ ಅವತಾರ' ಸಿನಿಮಲ್ಲಿ ಪ್ರಣಿತಾ ನಟಿಸುತ್ತಿದ್ದಾರೆ.

  English summary
  Actress Pranitha Subhash announce pregnancy. She got married to Nitin Raja last year in May month.
  Monday, April 11, 2022, 17:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X