For Quick Alerts
  ALLOW NOTIFICATIONS  
  For Daily Alerts

  ಗುಟ್ಟಾಗಿ ಮದುವೆಯಾದ ನಟಿ ಪ್ರಣಿತಾ ಸುಭಾಷ್

  |

  ಕನ್ನಡತಿ, ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಗುಟ್ಟಾಗಿ ವಿವಾಹವಾಗಿದ್ದಾರೆ. ಪ್ರಣಿತಾ ವಿವಾಹದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  Recommended Video

  Pranitha ಮದುವೆಯಾಗಿರುವ ಫೇಮಸ್ ಬ್ಯುಸಿನೆಸ್ ಮ್ಯಾನ್ ಯಾರು ಗೊತ್ತಾ?? | Filmibeat Kannada

  ನಟಿ ಪ್ರಣಿತಾ ಸುಭಾಷ್ ಇತ್ತೀಚೆಗಷ್ಟೆ ಕನಕಪುರ ರಸ್ತೆಯ ರೆಸಾರ್ಟ್‌ ಒಂದರಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉದ್ಯಮಿಯೊಬ್ಬರೊಂದಿಗೆ ವಿವಾಹವಾಗಿದ್ದಾರೆ. ಪ್ರಣಿತಾ ಮದುವೆಯಾಗಿರುವ ವ್ಯಕ್ತಿಯ ಹೆಸರು ನಿತಿನ್ ರಾಜು ಎನ್ನಲಾಗಿದ್ದು, ಬೆಂಗಳೂರಿನಲ್ಲಿ ಶಾಪಿಂಗ್ ಮಾಲ್ ಹೊಂದಿದ್ದು ಇತರೆ ಬ್ಯುಸಿನೆಸ್‌ಗಳನ್ನು ಸಹ ಅವರು ಹೊಂದಿದ್ದಾರೆ.

  ಕೆಲವು ದಿನಗಳ ಹಿಂದೆಯೇ ಪ್ರಣಿತಾ ಮದುವೆ ಸುದ್ದಿ ವೈರಲ್ ಆಗಿತ್ತು, ಆಗ ತಮ್ಮನ್ನು ಸಂಪರ್ಕಿಸಿದ್ದ ಮಾಧ್ಯಮದವರಿಗೆ 'ನಾನು ಮದುವೆ ಆಗಿಲ್ಲ. ಹಾಗೇನಾದರೂ ಮದುವೆ ಆದರೆ ಖಂಡಿತ ಎಲ್ಲರಿಗೂ ತಿಳಿಸಿಯೇ ಆಗುತ್ತೇನೆ' ಎಂದಿದ್ದರು. ಆದರೆ ಈಗ ಪ್ರಣಿತಾ ಮದುವೆ ಆಗಿರುವುದು ಖಾತ್ರಿಯಾಗಿದೆ. ಈ ಬಗ್ಗೆ ಪ್ರಣಿತಾ ಸಹ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

  ತಮ್ಮ ಮದುವೆ ವಿಷಯವನ್ನು ಬಹಳ ಗುಟ್ಟಾಗಿ ಇಡಬೇಕೆಂದು ಪ್ರಣಿತಾ ಯತ್ನಿಸಿದ್ದರು. ಆದರೆ ಮದುವೆಗೆ ಹಾಜರಾಗಿದ್ದ ಕುಟುಂಬ ಸದಸ್ಯರೊಬ್ಬರು ಮದುವೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಗುಟ್ಟು ಬಹಿರಂಗವಾಗಿದೆ.

  ಕನ್ನಡದ 'ಪೊರ್ಕಿ' ಸಿನಿಮಾದಿಂದ ನಟನೆ ಆರಂಭಿಸಿದ ಪ್ರಣಿತಾ ಸುಭಾಷ್ ಕನ್ನಡ, ತೆಲುಗು, ತಮಿಳು ಈಗ ಹಿಂದಿ ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ಅಜಯ್ ದೇವಗನ್ ನಟನೆಯ ಭುಜ್ ಹಾಗೂ ಪರೇಶ್ ರಾವಲ್, ಶಿಲ್ಪಾ ಶೆಟ್ಟಿ ನಟನೆ 'ಹಂಗಾಮಾ 2' ಸಿನಿಮಾದಲ್ಲಿ ಪ್ರಣಿತಾ ನಟಿಸಿದ್ದಾರೆ.

  English summary
  Actress Pranitha Subhash got married businessman Nitin Raj in a private ceremony recently. Photo of marriage went viral.
  Monday, May 31, 2021, 13:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X