»   » ತೊಡೆ ಕಚ್ಚಿದ್ದ 'ಬಿಗ್ ಬಾಸ್' ಪ್ರಥಮ್ ನ್ಯಾಯಾಲಯಕ್ಕೆ ಹಾಜರು

ತೊಡೆ ಕಚ್ಚಿದ್ದ 'ಬಿಗ್ ಬಾಸ್' ಪ್ರಥಮ್ ನ್ಯಾಯಾಲಯಕ್ಕೆ ಹಾಜರು

Posted By:
Subscribe to Filmibeat Kannada

'ಬಿಗ್‌ ಬಾಸ್ ಕನ್ನಡ 4' ವಿಜೇತ ಪ್ರಥಮ್ ರವರು ಭುವನ್ ತೊಡೆ ಕಚ್ಚಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. 'ಒಳ್ಳೇ ಹುಡುಗ' ಪ್ರಥಮ್ ರವರು ಬೆಂಗಳೂರಿನಲ್ಲಿ ಕ್ರಿಮಿನಲ್ ನ್ಯಾಯಾಲಯದ ಮುಂದೆ ಸೋಮವಾರ ಹಾಜರಾಗಿದ್ದಾರೆ.

ಬಿಟ್ಟಿ ಪ್ರಚಾರಕ್ಕಾಗಿ ನಡಿತಾ ಪ್ರಥಮ್-ಭುವನ್ 'ತೊಡೆ ಕಾದಾಟ'?

'ಬಿಗ್‌ ಬಾಸ್ ಕನ್ನಡ 4' ಸ್ಪರ್ಧಿ ಭುವನ್ ಪೊನ್ನಣ್ಣ ರವರು ನಿನ್ನೆ ತಲಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಥಮ್ ಕಾಲು ಕಚ್ಚಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಪ್ರಥಮ್ ಗಾಗಿ ಹುಡುಕಾಟ ನಡೆಸಿದ್ದರು. ಅಲ್ಲದೇ ಪೊಲೀಸರು ಪ್ರಥಮ್ ಜೊತೆ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದರು. ಆದರೆ ಪ್ರಥಮ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿದ್ದೇನೆ ಎಂದು ಹೇಳಿದ್ದರು. ಆದರೆ ಈಗ ಪೊಲೀಸ್ ಕಣ್ಣು ತಪ್ಪಿಸಿ ನೇರವಾಗಿ ಪ್ರಥಮ್ ರವರು 2ನೇ ಎಸಿಎಂಎಂ ಕೋರ್ಟ್‌ ಮುಂದೆ ಹಾಜರಾಗಿದ್ದಾರೆ.

Pratham apeared before ACMM court in bengaluru

ಬಂಧನದ ಸಾಧ್ಯತೆ ಇದ್ದಿದ್ದರಿಂದ ಒಳ್ಳೆ ಹುಡುಗ ಪ್ರಥಮ್ ಅವರು 2ನೇ ಎಸಿಎಂಎಂ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಬಂದಿದ್ದಾರೆ.

ಭುವನ್ ಮೇಲೆ ಪ್ರಥಮ್ ಹಲ್ಲೆ: ದೂರು ದಾಖಲು

English summary
'Big Boss Kannada 4' winner Pratham apeared before ACMM court in bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada