For Quick Alerts
  ALLOW NOTIFICATIONS  
  For Daily Alerts

  'ಬಾಟಲ್ ಕ್ಯಾಪ್ ಚಾಲೆಂಜ್' ವಿರೋಧಿಸಿದ ಪ್ರಥಮ್

  |

  ಸಿನಿಮಾ, ವಿವಾದ, ಗಾಸಿಪ್ ಇದೆಲ್ಲವೂ ಬಿಟ್ಟು ಬಾಟಲ್ ಕ್ಯಾಪ್ ಚಾಲೆಂಜ್ ಸಿನಿ ಜಗತ್ತಿನಲ್ಲಿ ಭಾರಿ ಸದ್ದು ಮಾಡ್ತಿದೆ. ಯಾವುದಾದರೂ ಬಾಟಲ್ ನ ಕ್ಯಾಪ್ ನ್ನ ಕಾಲಿನಿಂದ ತೆಗೆಯುವುದು ಈ ಚಾಲೆಂಜ್ ಆಗಿದ್ದು, ಬಾಲಿವುಡ್, ಸ್ಯಾಂಡಲ್ ವುಡ್ ಹೀಗೆ ಬಹುತೇಕ ಎಲ್ಲ ಇಂಡಸ್ಟ್ರಿಯ ಸೆಲೆಬ್ರಿಟಿಗಳು ಈ ಚಾಲೆಂಜ್ ಸ್ವೀಕರಿಸಿ ಸಕ್ಸಸ್ ಆಗಿದ್ದಾರೆ.

  ಅಕ್ಷಯ್ ಕುಮಾರ್, ಕನ್ನಡ ನಟ ಗಣೇಶ್, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ, ರಚಿತಾ ರಾಮ್ ಸೇರಿದಂತೆ ಹಲವರು ಈ ಚಾಲೆಂಜ್ ಸ್ವೀಕರಿಸಿ ಯಶಸ್ಸು ಕಂಡಿದ್ದಾರೆ.

  ಆದ್ರೀಗ, ಬಿಗ್ ಬಾಸ್ ಕನ್ನಡ 4ನೇ ಆವೃತ್ತಿಯ ವಿನ್ನರ್ ಮತ್ತು ನಟ ಪ್ರಥಮ್ ಈ ಬಾಟಲ್ ಕ್ಯಾಪ್ ಚಾಲೆಂಜ್ ನ್ನ ವಿರೋಧಿಸಿದ್ದಾರೆ. ಈ ಚಾಲೆಂಜ್ ಯಾರೂ ಮಾಡಬಾರದು ಎಂದು ಖಂಡಿಸಿದ್ದಾರೆ.

  'ಬಾಟಲ್ ಕ್ಯಾಪ್ ಚಾಲೆಂಜ್' ಸ್ವೀಕರಿಸಿದ ಸ್ಯಾಂಡಲ್ ವುಡ್ ಸ್ಟಾರ್ಸ್

  ಈ ಕುರಿತು ಕೈಯಿಂದ ಬಾಟಲ್ ಕ್ಯಾಪ್ ತೆಗೆಯುವ ವಿಡಿಯೋವೊಂದನ್ನ ಅಪ್ ಲೌಡ್ ಮಾಡಿ, ಓಪನ್ ಕ್ಯಾಪ್ ಚಾಲೆಂಜ್ ಮಾಡಿ, ಈ ಬಾಟಲ್ ಕ್ಯಾಪ್ ಬಾಲೆಂಜ್ ಬೇಡ ಎಂದು ಖಂಡಿಸಿದ್ದಾರೆ. ಇದರಿಂದ ದೇಹಕ್ಕೆ ಅಪಾಯವಾದರೂ ಆಗಬಹುದು, ಯಾರೂ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

  ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿದ ನಟಿ ರಚಿತಾ ರಾಮ್

  ಇದರ ಬದಲು ಯೋಗ ಮಾಡಿ, ಇದರಿಂದ ನಿಮ್ಮ ದೇಹ, ಆರೋಗ್ಯ ಉತ್ತಮವಾಗಿರುತ್ತೆ ಎಂದು ಸಲಹೆ ನೀಡಿದ್ದಾರೆ. ಇಂತಹ ತುಕಾಲಿ ಚಾಲೆಂಜ್ ಹುಟ್ಟುಹಾಕುವ ಬಾಲಿವುಡ್ ಸಿನಿ ನಟರ ತೆಲೆಮೇಲೆ ಮೊದಲು ಹೊಡಿಬೇಕು ಎಂದು ಕಿಡಿಕಾರಿದ್ದಾರೆ.

  Read more about: pratham ಪ್ರಥಮ್
  English summary
  Bigg boss kannada season 4 winner and actor Pratham has condemns Bottle Cap Challenge.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X