»   » ಆಸ್ಪತ್ರೆಯಿಂದ ಹೊರಬಂದು ನೇರವಾಗಿ ಕೊಳ್ಳೇಗಾಲಕ್ಕೆ ತೆರಳಿದ ಪ್ರಥಮ್.!

ಆಸ್ಪತ್ರೆಯಿಂದ ಹೊರಬಂದು ನೇರವಾಗಿ ಕೊಳ್ಳೇಗಾಲಕ್ಕೆ ತೆರಳಿದ ಪ್ರಥಮ್.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ವಿಜೇತ ಪ್ರಥಮ್ ಆತ್ಮಹತ್ಯೆ ಪ್ರಹಸನಕ್ಕೆ ಪೂರ್ಣವಿರಾಮ ಬಿದ್ದಿದೆ. ಇಂದು ಮಧ್ಯಾಹ್ನ 2.30 ರ ಸುಮಾರಿಗೆ ಕಿಮ್ಸ್ ಆಸ್ಪತ್ರೆಯಿಂದ ಪ್ರಥಮ್ ಡಿಸ್ಚಾರ್ಜ್ ಆಗಿದ್ದಾರೆ.

ಏಪ್ರಿಲ್ 5 ರಂದು ಮುಂಜಾನೆ ಫೇಸ್ ಬುಕ್ ಲೈವ್ ಮಾಡಿ, ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಥಮ್ ರವರನ್ನ ಮೊದಲು ಫೋರ್ಟಿಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿಂದ ರಾತ್ರೋ ರಾತ್ರಿ ನಿಮ್ಹಾನ್ಸ್ ಹಾಗೂ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಆದ ಪ್ರಥಮ್ ಇಂದು ಮದ್ಯಾಹ್ನ ಕಿಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು.

'ಪ್ರಥಮ್ ಈಗ ಫಿಟ್'

''ಪ್ರಥಮ್ ಫಿಟ್ ಆಗಿದ್ದಾರೆ. ಹೀಗಾಗಿ ಡಿಸ್ಚಾರ್ಜ್ ಮಾಡ್ತಿದ್ದೇವೆ. ಚಿಕಿತ್ಸೆಗೆ ಪ್ರಥಮ್ ಸ್ಪಂದಿಸಿದ್ದಾರೆ. ಬೇಜವಾಬ್ದಾರಿಯಿಂದ ನಡೆದುಕೊಂಡಿಲ್ಲ. ಆಸ್ಪತ್ರೆಗೆ ಯಾವುದೇ ತೊಂದರೆ ಕೊಟ್ಟಿಲ್ಲ. ಕೌನ್ಸಿಲಿಂಗ್ ಕೂಡ ಮಾಡಿದ್ದೇವೆ. ಹತ್ತು ದಿನಗಳ ಕಾಲ ರೆಸ್ಟ್ ತೆಗೆದುಕೊಳ್ಳುವಂತೆ ಸೂಚಿಸಿದ್ದೇವೆ'' ಅಂತ ಕಿಮ್ಸ್ ಆಸ್ಪತ್ರೆ ವೈದ್ಯರು ಹೇಳಿದರು. [ನಿದ್ರೆ ಮಾತ್ರೆ ಸೇವಿಸಿದ್ಯಾಕೆ.? 'ಕೊನೆಯ' ಲೈವ್ ನಲ್ಲಿ ಪ್ರಥಮ್ ಬಾಯ್ಬಿಟ್ಟ ಸತ್ಯವೇನು.?]

ಡಿಸ್ಚಾರ್ಜ್ ಆದ ಬಳಿಕ ಸುದ್ದಿಗೋಷ್ಠಿ

ಡಿಸ್ಚಾರ್ಜ್ ಆದ ಬಳಿಕ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ವೈದ್ಯರ ಜೊತೆಯಲ್ಲಿಯೇ ಪ್ರಥಮ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ, ''ತುಂಬಾ ಡಿಸ್ಟರ್ಬ್ ಆಗಿದ್ದೆ. ನನ್ನ ಮೇಲೆ ಬಂದ ರೂಮರ್ಸ್ ನಿಂದಾಗಿ ನಾನು ಘಾಸಿಗೊಂಡಿದ್ದೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ರಿಂದ ಆತ್ಮಹತ್ಯೆಗೆ ಯತ್ನಿಸಿದೆ. ಇನ್ಮೇಲೆ ಈ ತರಹ ಯಾವುದೂ ನಡೆಯುವುದಿಲ್ಲ'' ಅಂತ ಪ್ರಥಮ್ ನುಡಿದರು. [ಮಗನ ಪರಿಸ್ಥಿತಿ ಕಂಡು ದುಃಖತಪ್ತರಾದ ಪ್ರಥಮ್ ತಂದೆ ಮಲ್ಲಣ್ಣ]

ಕಿಮ್ಸ್ ಆಸ್ಪತ್ರೆ ವೈದ್ಯರಿಗೆ ಚಿರಋಣಿ

''ಕಿಮ್ಸ್ ಆಸ್ಪತ್ರೆ ವೈದ್ಯರು ನನ್ನನ್ನ ಚೆನ್ನಾಗಿ ನೋಡಿಕೊಂಡರು. ನಾನು ಅವರಿಗೆ ಚಿರಋಣಿ'' ಅಂತ ವೈದ್ಯರಿಗೆ ಪ್ರಥಮ್ ಧನ್ಯವಾದ ಅರ್ಪಿಸಿದರು.[ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಥಮ್ ನಾಲ್ಕು ಗಂಟೆ ಬಳಿಕ ಆಸ್ಪತ್ರೆಗೆ ದಾಖಲು]

ಮೀಡಿಯಾಗೆ ಪ್ರಥಮ್ ಕಿವಿಮಾತು

''ದಯವಿಟ್ಟು ಸತ್ಯಾಸತ್ಯತೆ ಪರಿಶೀಲಿಸಿ ವರದಿ ಮಾಡಿ. ನೀವೆಲ್ಲ ಕೈಹಿಡಿದಿದ್ದಕ್ಕೆ ನಾನು ಗೆದ್ದಿದ್ದು. ನೀವೇ ಗೆಲ್ಲಿಸಿರುವ ಪ್ರಥಮ್ ಬಗ್ಗೆ ಕೆಟ್ಟದಾಗಿ ತೋರಿಸಬೇಡಿ'' ಅಂತ ಮಾಧ್ಯಮಗಳಲ್ಲಿ ಪ್ರಥಮ್ ಮನವಿ ಮಾಡಿದರು.[ಪ್ರಥಮ್ ಆತ್ಮಹತ್ಯೆ ಯತ್ನ ಬಳಿಕ ಲೋಕೇಶ್ ಬಿಚ್ಚಿಟ್ಟ ಸ್ಫೋಟಕ ಸುದ್ದಿ!]

ವದಂತಿಗಳಿಗೆ ಕಿವಿಗೊಡಬೇಡಿ

''ನನ್ನ ಬಗ್ಗೆ ಕೇಳಿಬರುತ್ತಿರುವ ರೂಮರ್ಸ್ ಗೆ ಕಿವಿಗೊಡಬೇಡಿ. ಇವತ್ತಿನವರೆಗೂ ನನ್ನ ಹತ್ತಿರ ಬೈಕ್, ಕಾರ್ ಇಲ್ಲ. ಜೂಜು ಆಡಿಲ್ಲ. ಹುಡುಗಿಯರ ವಿಚಾರದಲ್ಲಿ ನನ್ನ ಬಗ್ಗೆ ಏನೆಲ್ಲ ಬರ್ತಿದ್ಯೋ ಅದೆಲ್ಲವೂ ಸುಳ್ಳು. ನನ್ನ ಮೇಲೆ ಒಂದು ರೂಪಾಯಿ ಕೂಡ ಸಾಲ ಇಲ್ಲ. ದೇವ್ರಾಣೆ ಅದೆಲ್ಲ ಸುಳ್ಳು. ಇದೆಲ್ಲ ನನ್ನನ್ನ ಘಾಸಿಗೊಳಿಸಿತು'' ಎಂದರು ಪ್ರಥಮ್. [ಲೋಕಲ್ ಲೋಕಿ ಮತ್ತು ಪ್ರಥಮ್ ಕಿತ್ತಾಟಕ್ಕೆ ಅಸಲಿ ಕಾರಣ ಇದೇ!]

ಡಿಸ್ಚಾರ್ಜ್ ಆದ ಪ್ರಥಮ್ ಕೊಳ್ಳೇಗಾಲಕ್ಕೆ ಹೊರಟಿದ್ದಾರೆ.!

ಕಿಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಪ್ರಥಮ್ ಕೊಳ್ಳೇಗಾಲಕ್ಕೆ ಹೊರಟಿದ್ದಾರೆ. ''ಮಹಾದೇಶ್ವರ ಬೆಟ್ಟದ ಪಕ್ಕ ತವಸಾರೆ ಬೆಟ್ಟಕ್ಕೆ ಲೈಟ್ ಹಾಕಿಸಲು ಹೋಗುತ್ತಿದ್ದೇನೆ'' ಅಂತ ಸುದ್ದಿಗೋಷ್ಠಿಯಲ್ಲಿ ಪ್ರಥಮ್ ತಿಳಿಸಿದರು.[ಬೆಳಗಾಗೋದ್ರಲ್ಲಿ 3 ಆಸ್ಪತ್ರೆ ಬದಲಿಸಿದ 'ಬಿಗ್ ಬಾಸ್' ಪ್ರಥಮ್!]

ಮುಂದಿನ ವರ್ಷ ಚಿತ್ರರಂಗಕ್ಕೆ ಗುಡ್ ಬೈ

ಪ್ರಥಮ್ ನಿರ್ದೇಶನದ 'ದೇವ್ರವ್ನೆ ಬುಡು ಗುರು' ಮತ್ತು ಈಗ ಅಭಿನಯಿಸಲು ಒಪ್ಪಿಕೊಂಡಿರುವ ಮೂರು ಚಿತ್ರಗಳನ್ನ ಬಿಟ್ಟರೆ ಇನ್ಯಾವ ಚಿತ್ರವನ್ನೂ ಪ್ರಥಮ್ ಒಪ್ಪಿಕೊಳ್ಳುವುದಿಲ್ಲವಂತೆ. ''2018 ರ ಮಧ್ಯಭಾಗದಲ್ಲಿ ನಮ್ಮ ಊರಿಗೆ ಹೋಗಿ ತೋಟ ನೋಡಿಕೊಳ್ಳುತ್ತೇನೆ'' ಎನ್ನುತ್ತಾರೆ ಪ್ರಥಮ್.

ಆಗಿರೋದೆಲ್ಲ ಒಳ್ಳೆಯದ್ದಕ್ಕೆ

''ಹಳ್ಳಿ ಜನ ಯಾವತ್ತೂ ನಿಷ್ಟಾವಂತರು. ಬಹುಮಾನದ ಒಂದು ರೂಪಾಯಿ ಕೂಡ ಮುಟ್ಟುವುದಿಲ್ಲ. ಆಗಿರೋದೆಲ್ಲವೂ ಒಳ್ಳೆಯದ್ದಾಗಿದೆ'' ಅಂತ ಇದೇ ಸಮಯದಲ್ಲಿ ಮಲ್ಲಣ್ಣ ಹೇಳಿದರು.

English summary
Bigg Boss Kannada 4 Winner Pratham is discharged from KIMS Hospital, Bengaluru. After getting discharged, Pratham headed to Kollegal with his family.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada