For Quick Alerts
  ALLOW NOTIFICATIONS  
  For Daily Alerts

  'ಮೇಲುಕೋಟೆ' ಹೆಸರು ಕೈಬಿಟ್ಟ ಪ್ರೇಮ್ ಅಡ್ಡ

  By Rajendra
  |

  ಪ್ರೇಮ್ ಅಡ್ಡ ಚಿತ್ರದಲ್ಲಿನ "ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ.." ಎಂಬ ಹಾಡಿನಲ್ಲಿ ಸೊಂಟದ ಕೆಳಗಿನ ಸಾಹಿತ್ಯ ಬಳಸಲಾಗಿದೆ ಎಂದು ಮೇಲುಕೋಟೆ ಜನ ಸಿಕ್ಕಾಪಟ್ಟೆ ರಾಂಗ್ ಆಗಿದ್ದರು. ಈ ಹಾಡಿನ ವಿರುದ್ಧ ಸಿಡಿದೆದ್ದ ಮೇಲುಕೋಟೆ ಜನ ಒಂದು ದಿನ ಬಂದ್ ಗೂ ಕರೆಕೊಟ್ಟಿದ್ದರು.

  ಈ ಎಲ್ಲಾ ಹಿನ್ನೆಲೆಯಲ್ಲಿ ಪ್ರೇಮ್ ಈ ಹಾಡಿನಲ್ಲಿ ಬಳಸಿಕೊಂಡಿರುವ 'ಮೇಲುಕೋಟೆ' ಪದವನ್ನು ಕೈಬಿಡಲು ಮುಂದಾಗಿದ್ದಾರೆ. ಮೇಲುಕೋಟೆಗೆ ಬದಲಾಗಿ 'ಏಳುಕೋಟೆ' ಎಂಬ ಪದವನ್ನು ಬಳಸಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಈಗಾಗಲೆ "ಮೇಲುಕೋಟೆ ಹುಡುಗಿ" ಹಾಡನ್ನು ಯೂಟ್ಯೂಬ್ ನಲ್ಲೂ ಹಾಕಲಾಗಿದ್ದು, ಸೂಪರ್ ಹಿಟ್ ಆಗಿದೆ.

  ಯೂಟ್ಯೂಬ್ ನಲ್ಲಿ ಈಗಾಗಲೆ ಈ ಹಾಡನ್ನು 24800 ವೀಕ್ಷಿಸಿದ್ದಾರೆ. ಮಳವಳ್ಳಿ ಸಾಯಿಕೃಷ್ಣ ರಚಿಸಿರುವ ಈ ಹಾಡನ್ನು ಕೈಲಾಶ್ ಖೇರ್, ರಾಜು ತಾಳಿಕೋಟೆ ಹಾಗೂ ಅನುರಾಧಾ ಭಟ್ ಹಾಡಿದ್ದಾರೆ. ಹಾಡಿನಲ್ಲಿ 'ಮೇಲುಕೋಟೆ' ಎಂಬ ಪದ ಬಳಸಿರುವುದು ಅಲ್ಲಿನ ಜನರನ್ನು ಕೆಣಕಿತ್ತು. ಮೇಲುಕೋಟೆ ಸಂಪೂರ್ಣ ಸಾಹಿತ್ಯ ಇಲ್ಲಿದೆ ಓದಿ.

  ವಿ. ಹರಿಕೃಷ್ಣ ಅವರ ಸಂಗೀತವಿರುವ ಈ ಹಾಡನ್ನು ಚಿತ್ರದಿಂದ ಕೈಬಿಡಬೇಕು. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಮೇಲುಕೋಟೆ ಜನ ಪ್ರೇಮ್ ವಿರುದ್ಧ ಕಿಡಿಕಾರಿದ್ದರು. ಈ ಸಂಬಂಧ ಅವರು ತಹಸೀಲ್ದಾರ್ ಅವರಿಗೂ ದೂರು ನೀಡಿದ್ದರು.

  ಪ್ರೇಮ್ ಅಡ್ಡ ಚಿತ್ರ ನವೆಂಬರ್ 9ಕ್ಕೆ ತೆರೆಕಾಣಬೇಕಾಗಿತ್ತು. ಆದರೆ ಇನ್ನೂ ಮೊದಲ ಪ್ರತಿ ಸಿದ್ಧವಾಗಿಲ್ಲದ ಕಾರಣ ಒಂದೆರಡು ವಾರ ತಡವಾಗುವ ಸಾಧ್ಯತೆಗಳಿವೆ ಎನ್ನುತ್ತವೆ ಮೂಲಗಳು.

  ಇನ್ನು ಈ ಹಾಡಿನಲ್ಲಿ ಮೈಸೂರು, ಮಂಡ್ಯ, ಪಡುವಾರಳ್ಳಿ ಊರಿನ ಹೆಸರುಗಳು ಬಳಕೆಯಾಗಿವೆ. ಸದ್ಯಕ್ಕೆ ಈ ಊರಿನವರು ಯಾವುದೇ ಕ್ಯಾತೆ ತೆಗೆದಿಲ್ಲ. ಹಾಗಾಗಿ ಪ್ರೇಮ್ ಕೂಡ ಈ ಹೆಸರುಗಳನ್ನು ಕೈಬಿಟ್ಟಿಲ್ಲ. ಸದ್ಯಕ್ಕೆ ಮೇಲುಕೋಟೆ ಮಾತ್ರ ಏಳುಕೋಟೆ ಆಗಿದೆಯಷ್ಟೆ. (ಏಜೆನ್ಸೀಸ್)

  English summary
  A lyrics from Kannada film Prem Adda, "Melkote Hudgi Obbalu Paduvara Halli Jatrenaga inuki Inuki Nodthala en Singara… Mandi tanaka langa etkondu…" has now been changed as "Elukote Hudigi Obbalu...". Many people from Melkote objected the song for creating bad impression about the Temple Town and its residents. The song written by Malavalli Saikrishna and music by V Harikrishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X