»   » ಕೋರ್ಟ್ ಮೆಟ್ಟಿಲೇರಿದ 'ಪ್ರೇಮ್ ಅಡ್ಡ' ಭಾರೀ ಕಿತ್ತಾಟ

ಕೋರ್ಟ್ ಮೆಟ್ಟಿಲೇರಿದ 'ಪ್ರೇಮ್ ಅಡ್ಡ' ಭಾರೀ ಕಿತ್ತಾಟ

Posted By:
Subscribe to Filmibeat Kannada
Prem Adda Iamge
ಪ್ರಚಾರ ಪ್ರಿಯ, ಗಿಮಿಕ್ ರಾಜಾ ಮುಂತಾದ ಬಿರುದುಗಳನ್ನು ಸ್ಯಾಂಡಲ್ ವುಡ್ ನಲ್ಲಿ ಹೊಂದಿರುವ ನಿರ್ದೇಶಕ ಪ್ರೇಮ್, ಇದೀಗ ಭಾರೀ ಗರಂ ಆಗಿದ್ದಾರೆ. ತಮ್ಮ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನಕ್ಕಿಂತ ಪ್ರಚಾರವೇ ಮುಖ್ಯ ಎಂದೇ ಭಾವಿಸಿದಂತಿರುವ ಪ್ರೇಮ್, 'ಪ್ರೇಮ್ ಅಡ್ಡ' ಶೀರ್ಷಿಕೆ ವಿವಾದವನ್ನು ಮುಂದುವರಿಸಿದ್ದಾರೆ.

ಕೆಎಫ್‌ ಸಿಸಿ ನಿಯಮದಂತೆ 'ಪ್ರೇಮ್ ಅಡ್ಡ' ಚಿತ್ರದ ಶೀರ್ಷಿಕೆಯನ್ನು ಒಂದೇ ಸೈಜಿನಲ್ಲಿ ಮುದ್ರಿಸಬೇಕಾಗಿತ್ತು. ಆದರೆ ಚಿತ್ರತಂಡ ಅವರ ಷರತ್ತಿಗೆ ವಿರುದ್ಧವಾಗಿ ಪ್ರೇಮ್ ಎಂಬುದನ್ನು ಚಿಕ್ಕದಾಗಿ ಹಾಗೂ ಅಡ್ಡ ಎಂಬುದನ್ನು ದೊಡ್ಡದಾಗಿ ಮುದ್ದಿಸಿತ್ತು. ಇದಕ್ಕೆ ಕೆ ಎಫ್ ಸಿಸಿ ಕ್ಯಾತೆ ತೆಗೆದಿತ್ತು. ಈ ಶೀರ್ಷಿಕೆಗೆ ತಡೆಯಾಜ್ಞೆ ಕೋರಿ ನೊಟೀಸ್ ನೀಡಿದ್ದಲ್ಲದೇ ಚಿತ್ರದ ಜಾಹೀರಾತುಗಳನ್ನು ಪ್ರಕಟಿಸದಂತೆ ಮುದ್ರಣ ಮಾಧ್ಯಮಕ್ಕೆ ಕರೆ ನೀಡಿತ್ತು.

ಪ್ರೇಮ್ ಅಡ್ಡ ಚಿತ್ರತಂಡವೀಗ ನೇರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧವೇ ಸಮರ ಸಾರಿ ಕೋರ್ಟ್ ಮೆಟ್ಟಿಲೇರಿದೆ. ಇದರ ವಿರುದ್ಧ ಈಗ 'ಪ್ರೇಮ್ ಅಡ್ಡ' ನಿರ್ಮಾಪಕ ಮೇಕಾ ಮುರಳಿಕೃಷ್ಣ ಕೋರ್ಟ್ ಮೊರೆ ಹೋಗಿದ್ದಾರೆ. ಅತ್ತ ಅಡ್ಡ ಚಿತ್ರದ ನಿರ್ಮಾಪಕ ಬಿಕೆ ಶ್ರೀನಿವಾಸ್ ಕೂಡ ಸುಮ್ಮನೆ ಕುಳಿತಿಲ್ಲ, ಅವರೂ 'ಪ್ರೇಮ್ ಅಡ್ಡ'ದ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.

ಈ ಮೊದಲು, 'ಅಡ್ಡ' ಎಂಬ ಶೀರ್ಷಿಕೆ ಬಿ.ಕೆ. ಶ್ರೀನಿವಾಸ್ ಕೈಯಲ್ಲಿರುವುದರಿಂದ ಅದೇ ಶೀರ್ಷಿಕೆಯನ್ನು ಪ್ರೇಮ್ ನಾಯಕತ್ವದ ಚಿತ್ರಕ್ಕೆ ಕೊಡಲಾಗದು ಎಂದು ವಾಣಿಜ್ಯ ಮಂಡಳಿ ಹೇಳಿತ್ತು. ಆಗ ಓಕೆ ಎಂದಿದ್ದ ಪ್ರೇಮ್, 'ಪ್ರೇಮ್ ಅಡ್ಡ' ಎಂದು ತನ್ನ ಚಿತ್ರಕ್ಕೆ ಹೆಸರಿಟ್ಟಿದ್ದರು. ಇದನ್ನು ಚಲನ ಚಿತ್ರ ವಾಣಿಜ್ಯ ಮಂಡಳಿ ಒಪ್ಪಿರಲಿಲ್ಲ. ಪ್ರೇಮ್ ಮತ್ತು ಅಡ್ಡ ಇವುಗಳನ್ನು ಒಂದೇ ಗಾತ್ರದಲ್ಲಿ ಪ್ರಕಟಿಸಬೇಕು ಎಂದು ಷರತ್ತು ನೀಡಿತ್ತು.

ಇದೀಗ, ಶೀರ್ಷಿಕ ಸಮರ ಹೊಸ ಬೆಳವಣಿಗೆ ಕಂಡಿದೆ. ಇನ್ನೊಂದು ಮಜಲನ್ನು ತಲುಪಿದೆ. ಈ ಕುರಿತು ನಿರ್ದೇಶಕ ಹಾಗೂ ಪ್ರೇಮ್ ಅಡ್ಡ ನಾಯಕ ಪ್ರೇಮ್ "ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಮಗೆ ಅನ್ಯಾಯವಾಗುತ್ತಿದೆ. ನಮ್ಮ ಚಿತ್ರದ ಜಾಹೀರಾತುಗಳನ್ನು ಪ್ರಕಟಿಸದಂತೆ ಮಂಡಳಿಯು ಪತ್ರಿಕೆಗಳಿಗೆ ನೋಟೀಸ್ ನೀಡಿದೆ. ಇದರಿಂದ ನಮಗೆ ಅನ್ಯಾಯವಾಗಿದೆ, ನಮಗೆ ನ್ಯಾಯ ಬೇಕು. ಅದಕ್ಕೆ ಕೋರ್ಟ್ ಮೊರೆ " ಎಂದಿದ್ದಾರೆ.

"ಕೆಎಫ್‌ ಸಿಸಿ ನನಗೆ ಆದೇಶ ನೀಡುವುದು ನನಗಿಷ್ಟವಿಲ್ಲ. ನಾನು ಒಬ್ಬ ನಿರ್ದೇಶಕ. ನಮ್ಮ ಕ್ರಿಯೇಟಿವಿಟಿಗೆ ಅವರ ನಿರ್ದೇಶನ ಬೇಡ. ಶೀರ್ಷಿಕೆ ಹೇಗೆ ಇಡಬೇಕು ಅನ್ನೋದು ನನಗೆ ಗೊತ್ತು. ಕೆಎಫ್‌ಸಿಸಿ ಮೇಲೆ ಗೌರವ ಇದೆ. ಆದ್ರೆ ಅವ್ರು ಹೇಳಿದಂತೆ ಕೇಳೋದಿಲ್ಲ. ಏನು ಮಾಡ್ಕೋತಾರೋ ಮಾಡ್ಕೊಳ್ಳಿ" ಎಂದು ಪ್ರೇಮಗ ಗುಡುಗಿದ್ದರು.

"ನಾನು ಪ್ರೇಮ್ ಅನ್ನೋದನ್ನು ಚಿಕ್ಕದಾಗಿಯೇ ಮುದ್ರಿಸುತ್ತೇನೆ. ಅಡ್ಡ ಅನ್ನೋದನ್ನೇ ದೊಡ್ಡದಾಗಿ ಹಾಕುತ್ತೇನೆ. ಅವರು (ಕೆಎಫ್‌ ಸಿಸಿ) ಏನು ಮಾಡ್ತಾರೋ ನೋಡ್ತೀನಿ. ನಮ್ಮ ಸಿನಿಮಾಗೆ ಯಾವ ಹೆಸ್ರು ಇಡ್ಬೇಕು ಅನ್ನೋದು ನಮ್ಮ ಹಕ್ಕು. ಅದನ್ನು ಬೇರೆ ಯಾರೂ ನಿರ್ಧರಿಸಬೇಕಾಗಿಲ್ಲ. ನಮ್ಗೆ ನಷ್ಟ ಆದ್ರೆ ಅದನ್ನು ಕೆಎಫ್‌ಸಿಸಿಯವರು ಕೊಡ್ತಾರಾ" ಎಂದು ಈ ಮದಲು ಕೆಂಡಾಮಂಡಲವಾಗಿದ್ದರು ಪ್ರೇಮ್.

ಮಹೇಶ್ ಬಾಬು ನಿರ್ದೇಶನದ 'ಪ್ರೇಮ್ ಅಡ್ಡ' ಚಿತ್ರವು ತಮಿಳಿನ 'ಸುಬ್ರಮಣ್ಯಪುರಂ' ರಿಮೇಕ್. ಇಲ್ಲಿ ಪ್ರೇಮ್‌ ಅವರಿಗೆ ಕೃತಿ ಕರಬಂದ ನಾಯಕಿ. ಒಟ್ಟಿನಲ್ಲಿ ಈ ಚಿತ್ರಕ್ಕೆ ಆರಂಭದಿಂದಲೂ ಏನಾದರೊಂದು ವಿಘ್ನಗಳು, ಪ್ರಚಾರ-ಅಪಪ್ರಚಾರಗಳು ಹಾಗೂ ವಾದ-ವಿವಾದಗಳು ಅಂಟಿಕೊಂಡೇ ಬಂದಿವೆ. ಮುಂದೇನಾಗುತ್ತೋ ಕಾದು ನೋಡಬೇಕಷ್ಟೇ! (ಒನ್ ಇಂಡಿಯಾ ಕನ್ನಡ)

English summary
Prem Adda movie Title Controversy continued and Director Prem movie team went to Court for Justice. As the KFCC Rules, the title size and font should be same from starting to end in Title. But, Prem Adda team neglected the rules, even it accepted before.
Please Wait while comments are loading...