For Quick Alerts
  ALLOW NOTIFICATIONS  
  For Daily Alerts

  ಯಶ್-ರಾಧಿಕಾ ನಿಶ್ಚಿತಾರ್ಥಕ್ಕೆ ಕೋಟಿ ವೆಚ್ಚದಲ್ಲಿ ರೆಡಿಯಾದ ವೇದಿಕೆ

  By Suneetha
  |

  ಸುಮಾರು 5 ವರ್ಷ ಕಾಲ ಯಾರಿಗೂ ಗೊತ್ತಾಗದೇ ಸೈಲೆಂಟ್ ಆಗಿ ಜೋಡಿ ಹಕ್ಕಿಗಳಂತೆ ವಿಹರಿಸುತ್ತಿದ್ದ, ಯಶ್-ರಾಧಿಕಾ ಪಂಡಿತ್ ಅವರು ಇಂದು (ಆಗಸ್ಟ್ 12) ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ.[ಯಶ್-ರಾಧಿಕಾ ನಿಶ್ಚಿತಾರ್ಥ: ಹುಡುಗನ ತಾಯಿ ಏನಂತಾರೆ.?]

  ಪ್ರೀತಿ-ಮದುವೆ ಬಗ್ಗೆ ಯಾರೇ ಪ್ರಶ್ನೆ ಮಾಡಿದ್ರೂ ಮೆಲ್ಲಗೆ ಜಾರಿಕೊಳ್ಳುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ಮನದನ್ನೆ ರಾಧಿಕಾ ಪಂಡಿತ್ ಅವರನ್ನು, ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರ ಬಾಯಿಗೂ ಬೀಗ ಜಡಿದಿದ್ದಾರೆ.[ನಟ ಯಶ್ - ರಾಧಿಕಾ ಪಂಡಿತ್ ಲವ್ ಸಕ್ಸಸ್: ನಿಶ್ಚಿತಾರ್ಥ ಫಿಕ್ಸ್.!]

  ಅಂದಹಾಗೆ ಇಂದು ನಡೆಯುವ ಅದ್ಧೂರಿ ನಿಶ್ಚಿತಾರ್ಥಕ್ಕೆ ಈಗಾಗಲೇ ವೇದಿಕೆ ಸಿದ್ಧವಾಗಿದ್ದು, ಸ್ಯಾಂಡಲ್ ವುಡ್ ನ ಗಣ್ಯಾತೀ ಗಣ್ಯರು ಸಂಭ್ರಮದ ಕ್ಷಣದಲ್ಲಿ ಭಾಗಿಯಾಗುತ್ತಿದ್ದಾರೆ. ಇಂದು (ಆಗಸ್ಟ್ 12) ಗೋವಾದಲ್ಲಿ ನಡೆಯಲಿರುವ ನಿಶ್ಚಿತಾರ್ಥ ಕಾರ್ಯಕ್ರಮದ ಪಟ್ಟಿಗಳತ್ತ, ಕಣ್ಣು ಹಾಯಿಸಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ.......

  ಎಷ್ಟು ಗಂಟೆಗೆ ನಿಶ್ಚಿತಾರ್ಥ

  ಎಷ್ಟು ಗಂಟೆಗೆ ನಿಶ್ಚಿತಾರ್ಥ

  ವರಮಹಾಲಕ್ಷ್ಮಿ ಹಬ್ಬದ ಪವಿತ್ರ ದಿನವಾದ ಇಂದು ಯಶ್ ಮತ್ತು ರಾಧಿಕಾ ಪಂಡಿತ್ ಪರಸ್ಪರ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ. ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ ನಿಶ್ಚಿತಾರ್ಥ ಸಮಾರಂಭ ನೆರವೇರಲಿದೆ.[ಯಶ್ ಈ ತರಹ ಪ್ರಪೋಸ್ ಮಾಡಿದ್ರೆ, ಯಾರ್ ಬೇಕಾದ್ರೂ ಒಪ್ಕೊಳ್ತಾರೆ.!]

  ಎಲ್ಲಿ.?

  ಎಲ್ಲಿ.?

  ಸುಂದರ ತಾಣ ಗೋವಾದ ಆಗುಂದಾ ಬಳಿಯ ತಾಜ್ ವಿವಾಂತ್ ಹಾಲಿಡೇ ವಿಲೇಜ್ ಹೋಟೆಲ್ ನಲ್ಲಿ, ಅದ್ಧೂರಿ ಬಜೆಟ್ ನಲ್ಲಿ ತಯಾರಾಗಿರುವ ಹೂವಿನ ಮಂಟಪದಲ್ಲಿ ತಾರಾ ಜೋಡಿ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ. ನಟಿ ರಾಧಿಕಾ ಪಂಡಿತ್ ತಾಯಿ ಮಂಗಳಾ ಅವರ ತವರೂರಾದ ಗೋವಾದಲ್ಲಿ ಇಂದು ಯಶ್ ಮತ್ತು ರಾಧಿಕಾ ಪಂಡಿತ್ ಎಂಗೇಜ್ ಆಗಲಿದ್ದಾರೆ.

  ಅರುಣ್ ಸಾಗರ್ ಕಲ್ಪನೆಯಲ್ಲಿ ಮೂಡಿಬಂದ ಸೆಟ್

  ಅರುಣ್ ಸಾಗರ್ ಕಲ್ಪನೆಯಲ್ಲಿ ಮೂಡಿಬಂದ ಸೆಟ್

  ಕನ್ನಡ ನಟ ಕಮ್ ಕಲಾ ನಿರ್ದೇಶಕ ಅರುಣ್ ಸಾಗರ್ ಅವರ ಕಲ್ಪನೆಯಲ್ಲಿ ಮೂಡಿಬಂದ ಅದ್ಭುತ ಸೆಟ್ ನಲ್ಲಿ ತಾರೆಗಳಿಬ್ಬರ ರಾಯಲ್ ಎಂಗೇಜ್ ಮೆಂಟ್ ಜರುಗಲಿದೆ. ಈ ನಿಶ್ಚಿತಾರ್ಥದ ವೇದಿಕೆಯನ್ನು ಹೆಚ್ಚಾಗಿ ಬಿಳಿ ಹೂವುಗಳಿಂದ ಸಿಂಗರಿಸಲಾಗಿದ್ದು, ಇಡೀ ವೇದಿಕೆ ಸ್ವರ್ಗದಂತೆ ಭಾಸವಾಗುತ್ತಿದೆ. ವಿಶೇಷವಾಗಿ ರಾಧಿಕಾ ಪಂಡಿತ್ ಅವರ ಇಚ್ಛೆಯಂತೆ ಬಿಳಿ ಹೂವುಗಳಿಂದ ವೇದಿಕೆಯನ್ನು ಸಿಂಗಾರ ಮಾಡಲಾಗಿದೆ.

  ಎಷ್ಟು ಬಗೆಯ ಹೂವುಗಳಿಂದ ಸಿಂಗಾರ.?

  ಎಷ್ಟು ಬಗೆಯ ಹೂವುಗಳಿಂದ ಸಿಂಗಾರ.?

  ಸುಮಾರು ನಾಲ್ಕು ಬಗೆಯ ಹೂವುಗಳಿಂದ ಇಡೀ ನಿಶ್ಚಿತಾರ್ಥದ ವೇದಿಕೆಯನ್ನು ಸಿಂಗಾರ ಮಾಡಲಾಗಿದ್ದು, ಅದರಲ್ಲೂ ಜಾಸ್ತಿ ಬಿಳಿ ಹೂವುಗಳನ್ನು ಬಳಸಿಕೊಳ್ಳಲಾಗಿದೆ. ಡೆಕೋರೇಟರ್ ಅಲ್ತಾಫ್ ಎಂಬುವವರು ಈ ಶ್ವೇತ ಮಂಟಪವನ್ನು ಸಿಂಗಾರ ಮಾಡಿದ್ದಾರೆ.

  ಎಷ್ಟು ವೆಚ್ಚ.?

  ಎಷ್ಟು ವೆಚ್ಚ.?

  ಸುಮಾರು 4 ಲಕ್ಷ ವೆಚ್ಚದಲ್ಲಿ ವೇದಿಕೆ ಸೇರಿದಂತೆ, ಇಡೀ ಸಭಾಂಗಣವನ್ನು ಹೂವಿನಿಂದ ಅಲಂಕಾರ ಮಾಡಲಾಗಿದೆ. ಬೆಂಗಳೂರು ಮತ್ತು ಊಟಿಯಿಂದ ಈ ವಿಶೇಷ ಹೂವುಗಳನ್ನು ತರಿಸಿಕೊಳ್ಳಲಾಗಿದೆ.

  ಸಂಜೆ ವಿಶೇಷ ಪಾರ್ಟಿ.!

  ಸಂಜೆ ವಿಶೇಷ ಪಾರ್ಟಿ.!

  ಬೆಳಗ್ಗೆ ಆರಂಭವಾಗುವ ಈ ಕಾರ್ಯಕ್ರಮ ಸಂಜೆ ತನಕ ಕೂಡ ಮುಂದುವರಿಯಲಿದೆ. ಸಂಜೆ ಸುಮಾರು 7ರ ಹೊತ್ತಿಗೆ ಯಶ್ ಅವರು ವಿಶೇಷ ಕಾಕ್ ಟೇಲ್ ಪಾರ್ಟಿಯನ್ನು ಇಟ್ಟುಕೊಂಡಿದ್ದಾರೆ. ಆ ಕಾರಣಗಳಿಂದ ಆಹ್ವಾನಿತ ಅತಿಥಿಗಳಿಗಾಗಿ ಅಂತ ಎರಡು ದಿನಗಳ ಮಟ್ಟಿಗೆ ಹೋಟೆಲ್ ರೂಮ್ ಬುಕ್ ಮಾಡಲಾಗಿದೆ.

  ಯಾರೆಲ್ಲಾ ಹೋಗಿದ್ದಾರೆ.?

  ಯಾರೆಲ್ಲಾ ಹೋಗಿದ್ದಾರೆ.?

  ನಿನ್ನೆ ಸಂಜೆ ಕ್ರೇಜಿಸ್ಟಾರ್ ರವಿಚಂದ್ರನ್, ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಕೆ.ಮಂಜು, ರೆಬೆಲ್ ಸ್ಟಾರ್ ಅಂಬರೀಶ್ ಮುಂತಾದವರು ಗೋವಾಗೆ ಪ್ರಯಾಣ ಬೆಳೆಸಿದ್ದರು. ನಿರ್ದೇಶಕ ಎ.ಹರ್ಷ, ಇಮ್ರಾನ್ ಸರ್ದಾರಿಯಾ ಸೇರಿದಂತೆ ಹಲವರು ಈಗಾಗಲೇ ಗೋವಾ ತಲುಪಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಂದು ಬೆಳಗ್ಗೆ 6.10ರ ಇಂಡಿಗೋ ಏರ್ ಲೈನ್ಸ್ ಮೂಲಕ ಗೋವಾಗೆ ಪ್ರಯಾಣ ಬೆಳೆಸಿದ್ದಾರೆ.

  ಬಿಗಿ ಬಂದೋಬಸ್ತ್

  ಬಿಗಿ ಬಂದೋಬಸ್ತ್

  ಅಂದಹಾಗೆ ಈ ರಾಯಲ್ ಸಮಾರಂಭದಲ್ಲಿ ಬಿಗಿ ಬಂದೋಬಸ್ತ್ ಏರ್ಪಾಡು ಮಾಡಲಾಗಿದ್ದು, ಸಾರ್ವಜನಿಕರಿಗೆ ಹಾಗೂ ಮಾಧ್ಯಮದವರಿಗೆ ಒಳಹೋಗಲು ಅವಕಾಶ ಇಲ್ಲ. ಎಲ್ಲರನ್ನೂ ಪರಿಶೀಲಿಸಿ ಒಳಗಡೆ ಬಿಡಲಾಗುತ್ತಿದೆ. ಆಮಂತ್ರಣ ಇದ್ದವರಿಗೆ ಮಾತ್ರ ಒಳಗಡೆ ಹೋಗುವ ಅವಕಾಶ. ಯಶ್ ಮತ್ತು ರಾಧಿಕಾ ಅವರ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ.

  ಮುತುವರ್ಜಿ ವಹಿಸಿದ ರಾಧಿಕಾ ಕುಟುಂಬ

  ಮುತುವರ್ಜಿ ವಹಿಸಿದ ರಾಧಿಕಾ ಕುಟುಂಬ

  ಕಳೆದ ಮೂರ್ನಾಲ್ಕು ದಿನಗಳಿಂದ ಮುತುವರ್ಜಿ ವಹಿಸಿ ರಾಧಿಕಾ ಪಂಡಿತ್ ಅವರ ಕುಟುಂಬ ಈ ವಿಶೇಷ ಕಾರ್ಯಕ್ರಮ ಸಿದ್ಧತೆ ನಡೆಸಿದ್ದಾರೆ. ಬೆಳಗ್ಗಿನ ತಿಂಡಿ ಮತ್ತು ಮಧ್ಯಾಹ್ನದ ಊಟಕ್ಕೆ ಈಗಾಗಲೇ ವಿಶೇಷ ತಯಾರಿ ನಡೆಯುತ್ತಿದೆ.

  English summary
  After 5 long years of Dating, Kannada Actor Yash and Kannada Actress Radhika Pandit are finally getting engaged Today (August 12th, 2016) in Goa. Here is the Preparations of Yash and Radhika Pandit Engagement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X