For Quick Alerts
  ALLOW NOTIFICATIONS  
  For Daily Alerts

  ಬೆಂಬಲ ನೀಡಿ ಎಂದು ಕನ್ನಡದಲ್ಲಿ ಮನವಿ ಮಾಡಿದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್

  |

  'ಒರು ಆಡಾರ್ ಲವ್' ಚಿತ್ರದ ಕಣ್ಸನ್ನೆಯ ಒಂದೇ ಒಂದು ದೃಶ್ಯದ ಮೂಲಕ ರಾತ್ರೋ ರಾತ್ರಿ ಜನಪ್ರಿಯತೆ ಗಳಿಸಿದವರು ನಟಿ ಪ್ರಿಯಾ ವಾರಿಯರ್. ನಿರ್ಮಾಪಕ ಕೆ. ಮಂಜು ಮಗ ಶ್ರೇಯಸ್ ನಾಯಕರಾಗಿರುವ 'ವಿಷ್ಣು ಪ್ರಿಯ' ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಮಲಯಾಳಂ, ತಮಿಳಿನಲ್ಲಿ ಸಿನಿಮಾಗಳನ್ನು ನಿರ್ದೇಶಿಸಿರುವ ವಿ.ಕೆ. ಪ್ರಕಾಶ್ ಎಂಬುವವರು ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

  Recommended Video

  ಕ್ಯಾನ್ಸರ್ ಪೀಡಿತರಿಗಾಗಿ ತಲೆ ಕೂದಲು ದಾನ ಮಾಡಿದ ನಟಿ | Sukrutha Wagle | Cancer Awareness | Oneindia kannada

  'ವಿಷ್ಣು ಪ್ರಿಯ' ಚಿತ್ರದ ಮೊದಲ ಲುಕ್ ಏಪ್ರಿಲ್ 5ರಂದು ಬಿಡುಗಡೆಯಾಗುತ್ತಿದೆ. ಈ ಸಂತಸವನ್ನು ಪ್ರಿಯಾ ವಾರಿಯರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸಂಗತಿಯನ್ನು ಅವರು ಕನ್ನಡದಲ್ಲಿಯೇ ತಿಳಿಸಿರುವುದು ವಿಶೇಷ. 90ರ ದಶಕದಲ್ಲಿ ನಡೆದ ನೈಜ ಘಟನೆಯೊಂದನ್ನು ನಿರ್ದೇಶಕ ಪ್ರಕಾಶ್ ಹೇಳುತ್ತಿದ್ದಾರೆ. ಈ ಕಥೆಯ ಎಳೆಯನ್ನು ನಿರ್ದೇಶಕರಿಗೆ ನಿರ್ಮಾಪಕ ಕೆ. ಮಂಜು ಅವರೇ ಹೇಳಿದ್ದರು. ಮುಂದೆ ಓದಿ...

  ವಿಷ್ಣು ಪ್ರಿಯದ ಮೊದಲ ಲುಕ್

  ವಿಷ್ಣು ಪ್ರಿಯದ ಮೊದಲ ಲುಕ್

  ಮಂಜು ವಾರಿಯರ್ ಮತ್ತು ಶ್ರೇಯಸ್ ಅಭಿನಯದ 'ವಿಷ್ಣು ಪ್ರಿಯ' ಚಿತ್ರದ ಫಸ್ಟ್ ಲುಕ್ ಇದೇ 5ರಂದು ಬಿಡುಗಡೆಯಾಗುತ್ತಿದೆ ಎಂಬ ಸಂಗತಿಯನ್ನು ಪ್ರಿಯಾ ವಾರಿಯರ್ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

  ಕ್ರೈಂ ಥ್ರಿಲ್ಲಿಂಗ್ ಚಿತ್ರಕ್ಕೆ ಪ್ರಿಯಾ ಪ್ರಕಾಶ್ ವಾರಿಯರ್ ನಾಯಕಿ!ಕ್ರೈಂ ಥ್ರಿಲ್ಲಿಂಗ್ ಚಿತ್ರಕ್ಕೆ ಪ್ರಿಯಾ ಪ್ರಕಾಶ್ ವಾರಿಯರ್ ನಾಯಕಿ!

  ಸಪೋರ್ಟ್ ಮಾಡಿ ಎಂದ ಪ್ರಿಯಾ

  ಸಪೋರ್ಟ್ ಮಾಡಿ ಎಂದ ಪ್ರಿಯಾ

  'ನನ್ನ ಎಲ್ಲಾ ಕನ್ನಡದ ಪ್ರೀತಿಯ ಅಭಿಮಾನಿಗಳಿಗೆ ಪ್ರಿಯ ಮಾಡುವ ನಮಸ್ಕಾರಗಳು. ನನ್ನ ಮೊದಲನೇ ಕನ್ನಡದ ಸಿನಿಮಾ " ವಿಷ್ಣು ಪ್ರಿಯ" ದ ಫಸ್ಟ್ ಲುಕ್ ಏಪ್ರಿಲ್ 5 ಕ್ಕೆ ಬಿಡುಗಡೆ ಆಗಲಿದೆ, ಎಲ್ಲರೂ ದಯವಿಟ್ಟು ಶೇರ್ ಮಾಡಿ ಹಾಗೂ ಸಪೋರ್ಟ್ ಮಾಡಿ....ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದ ಸದಾ ನನ್ನ ಮೇಲೆ ಮತ್ತು ನಮ್ಮ ಸಿನಿಮಾ ತಂಡದ ಮೇಲೆ ಇರಲಿ' ಎಂದು ಪ್ರಿಯಾ ಕನ್ನಡದಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.

  ಕನ್ನಡ ಸಿನಿಮಾಗಳ ಬಗ್ಗೆ ಗೊತ್ತಿದೆ ಎಂದಿದ್ದ ಪ್ರಿಯಾ

  ಕನ್ನಡ ಸಿನಿಮಾಗಳ ಬಗ್ಗೆ ಗೊತ್ತಿದೆ ಎಂದಿದ್ದ ಪ್ರಿಯಾ

  'ವಿಷ್ಣು ಪ್ರಿಯ' ಚಿತ್ರದಲ್ಲಿ ಪ್ರಿಯಾ ವಾರಿಯರ್ ತಮ್ಮದೇ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಕನ್ನಡ ಸಿನಿಮಾಗಳ ಬಗ್ಗೆ ನನಗೆ ತಿಳಿದಿದೆ. ಇಲ್ಲಿ ವಿಭಿನ್ನ ಚಿತ್ರಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಕನ್ನಡದಿಂದ ಆಫರ್ ಬಂದಾಗ ಒಂದು ಕ್ಷಣ ಕೂಡ ಯೋಚಿಸದೆ ಒಪ್ಪಿಕೊಂಡೆ ಎಂದು ಪ್ರಿಯಾ ಹೇಳಿದ್ದರು.

  ದರ್ಶನ್-ಶಿವಣ್ಣ ಬಗ್ಗೆ ಪ್ರಿಯಾ ವಾರಿಯರ್ ಏನಂದ್ರು?ದರ್ಶನ್-ಶಿವಣ್ಣ ಬಗ್ಗೆ ಪ್ರಿಯಾ ವಾರಿಯರ್ ಏನಂದ್ರು?

  ವಿಷ್ಣುವರ್ಧನ್ ಪ್ರೀತಿಯ ಕಾರಣ ಈ ಹೆಸರು

  ಸಾಹಸ ಸಿಂಹ ವಿಷ್ಣುವರ್ಧನ್ ಆಪ್ತರಾಗಿದ್ದ ಕೆ. ಮಂಜು, ವಿಷ್ಣುವರ್ಧನ್ ಅಭಿನಯದ ಹಲವು ಸಿನಿಮಾಗಳನ್ನು ನಿರ್ಮಿಸಿದ್ದರು. ಅವರ ಮೇಲಿನ ಪ್ರೀತಿಯ ಕಾರಣಕ್ಕೆ ತಮ್ಮ ಪುತ್ರನ ಸಿನಿಮಾಕ್ಕೆ 'ವಿಷ್ಣು ಪ್ರಿಯ' ಎಂಬ ಹೆಸರನ್ನಿಟ್ಟಿದ್ದಾರೆ. ಈ ಸಿನಿಮಾವನ್ನು ಅವರು ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ಕೂಡ ಬಿಡುಗಡೆ ಮಾಡಲು ಉದ್ದೇಶಿಸಿದ್ದಾರೆ.

  English summary
  Wink girl Priya Varrier Prakash Varrier has shared an instagram post in Kannada on her Vishnu Priya movie.
  Wednesday, April 1, 2020, 18:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X