For Quick Alerts
  ALLOW NOTIFICATIONS  
  For Daily Alerts

  ಪತಿ ಮುಸ್ತಾಫಾ ಜೊತೆ ರಂಜಾನ್ ಆಚರಣೆ ಹೇಗಿದೆ? ಪ್ರಿಯಾಮಣಿ ಉತ್ತರ

  |

  ದಕ್ಷಿಣ ಭಾರತದ ಖ್ಯಾತ ನಟಿ, ಕರ್ನಾಟಕದ ಪ್ರಿಯಾಮಣಿ ಮೂರು ವರ್ಷಗಳ ಹಿಂದೆ ಬ್ಯುಸಿನೆಸ್‌ಮ್ಯಾನ್ ಮುಸ್ತಾಫಾ ಅವರನ್ನು ವಿವಾಹವಾದರು.

  ಬಿಗ್ ಬಾಸ್ ದಿವಾಕರ್ ವಿರುದ್ಧ ದೂರು ಕೊಡಲು ಮುಂದಾದ ಅಹೋರಾತ್ರ..?

  ಸಿನಿಮಾ ಕಾರಣಕ್ಕಾಗಿ ಬಹುತೇಕ ದಕ್ಷಿಣ ಭಾರತದ ನಗರಗಳು, ಅದರಲ್ಲಿಯೂ ಬೆಂಗಳೂರಿನಲ್ಲಿಯೇ ಹೆಚ್ಚಿಗೆ ಇರುತ್ತಿದ್ದ ಪ್ರಿಯಾಮಣಿ ಲಾಕ್‌ಡೌನ್ ಪ್ರಾರಂಭವಾದಾಗಿನಿಂದಲೂ ಮುಂಬೈ ನಲ್ಲಿಯೇ ನೆಲೆಸಿದ್ದಾರೆ.

  ಬೆಂಗಳೂರಿಗೆ ಬರಲು ಹಾತೊರೆಯುತ್ತಿದ್ದಾರೆ ನಟಿ ಪ್ರಿಯಾಮಣಿಬೆಂಗಳೂರಿಗೆ ಬರಲು ಹಾತೊರೆಯುತ್ತಿದ್ದಾರೆ ನಟಿ ಪ್ರಿಯಾಮಣಿ

  ಈ ಲಾಕ್‌ಡೌನ್ ಸಮಯದಲ್ಲಿಯೇ ರಂಜಾನ್ ಬಂದಿದ್ದು, ಪತಿಯ ಜೊತೆ ರಂಜಾನ್ ಆಚರಣೆಯ ಮಜಾವನ್ನು ಪ್ರಿಯಾಮಣಿ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಪ್ರಿಯಾಮಣಿ ಮಾತನಾಡಿದ್ದಾರೆ.

  'ಪತಿ ಮುಸ್ತಾಫಾ ಉಪಚಾಸ ಮಾಡುತ್ತಿದ್ದಾರೆ'

  'ಪತಿ ಮುಸ್ತಾಫಾ ಉಪಚಾಸ ಮಾಡುತ್ತಿದ್ದಾರೆ'

  ರಂಜಾನ್ ತಿಂಗಳ ಉಪವಾಸವನ್ನು ಪತಿ ಮುಸ್ತಾಫಾ ಮಾಡುತ್ತಿದ್ದಾರೆ ಆದರೆ ನಾನು ಉಪವಾಸ ಮಾಡುತ್ತಿಲ್ಲ. ಪತಿ ಮತ್ತು ಅತ್ತೆ ಮಾತ್ರವೇ ಉಪವಾಸದಲ್ಲಿ ನಿರತರಾಗಿದ್ದಾರೆ. ನಾನು ಮತ್ತು ಮಾವ ಉಪವಾಸ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

  ಅತ್ತೆಗೆ ಸಹಾಯ ಮಾಡುತ್ತೇನೆ: ಪ್ರಿಯಾಮಣಿ

  ಅತ್ತೆಗೆ ಸಹಾಯ ಮಾಡುತ್ತೇನೆ: ಪ್ರಿಯಾಮಣಿ

  ನಾನು ಅಡುಗೆ ಮಾಡುವುದಿಲ್ಲ, ಹಾಗಾಗಿ ಅಡುಗೆ ಮನೆಯಲ್ಲಿ ಅತ್ತೆಗೆ ಸಹಾಯ ಮಾಡುತ್ತೇನೆ. ಸಂಜೆ ಪತಿ ಮತ್ತು ಅತ್ತೆ ಉಪವಾಸ ಬಿಡುವ ವೇಳೆಗೆ ನಾನು ಊಟದ ಟೇಬಲ್ ತಯಾರಿಟ್ಟಿರುತ್ತೇನೆ. ಅವರು ಉಪವಾಸ ಬಿಟ್ಟು ಊಟ ಮಾಡುತ್ತಾರೆ ಎಂದು ತನ್ನ ದಿನನಿತ್ಯದ ಕಾರ್ಯದ ಬಗ್ಗೆ ತಿಳಿಸಿದ್ದಾರೆ ಪ್ರಿಯಾಮಣಿ.

  ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ ವೇಳೆ ಕ್ರಿಕೆಟಿಗನ ಕೆನ್ನೆಗೆ ಬಾರಿಸಿದ್ದರೇ ನಟಿ ಪ್ರಿಯಾಮಣಿ?ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ ವೇಳೆ ಕ್ರಿಕೆಟಿಗನ ಕೆನ್ನೆಗೆ ಬಾರಿಸಿದ್ದರೇ ನಟಿ ಪ್ರಿಯಾಮಣಿ?

  'ಕುಟುಂಬದೊಂದಿಗೆ ಉತ್ತಮವಾಗಿ ಕಾಲ ಕಳೆಯುತ್ತಿದ್ದೇನೆ'

  'ಕುಟುಂಬದೊಂದಿಗೆ ಉತ್ತಮವಾಗಿ ಕಾಲ ಕಳೆಯುತ್ತಿದ್ದೇನೆ'

  ಲಾಕ್‌ಡೌನ್ ಸಮಯದಲ್ಲಿ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿರುವುದಾಗಿ ಹೇಳಿದ ಪ್ರಿಯಾಮಣಿ. ಎಲ್ಲರೂ ಸೇರಿ ಸಿನಿಮಾಗಳನ್ನು ನೋಡುತ್ತಿದ್ದೇವೆ. ಟಿವಿ ಸೀರಿಯಲ್, ವೆಬ್ ಸೀರೀಸ್‌ಗಳನ್ನು ನೋಡುತ್ತಿದ್ದೇವೆ ಎಂದು ಪ್ರಿಯಾಮಣಿ ಹೇಳಿದ್ದಾರೆ.

  ಬೆಂಗಳೂರಿಗೆ ಬರಲು ಹಾತೊರೆಯುತ್ತಿರುವ ಪ್ರಿಯಾಮಣಿ

  ಬೆಂಗಳೂರಿಗೆ ಬರಲು ಹಾತೊರೆಯುತ್ತಿರುವ ಪ್ರಿಯಾಮಣಿ

  ಕೆಲವು ದಿನಗಳ ಮುಂಚೆ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಿಯಾಮಣಿ, ಬೆಂಗಳೂರಿಗೆ ಬರಲು ಮನಸ್ಸು ಹಾತೊರೆಯುತ್ತಿದೆ. ಪೋಷಕರನ್ನು ನೋಡಿ ಬಹಳ ದಿನಗಳಾಯಿತು. ಲಾಕ್‌ಡೌನ್ ಮುಗಿದ ಕೂಡಲೇ ಮೊದಲು ಬೆಂಗಳೂರಿಗೆ ಬರುತ್ತೇನೆ ಎಂದಿದ್ದರು.

  'ತಲೈವಿ' ಸಿನಿಮಾದಿಂದ ಪ್ರಿಯಾಮಣಿ ಔಟ್: ಶಶಿಕಲಾ ಪಾತ್ರಕ್ಕೆ ಬಂದ್ರು 'ಜೋಶ್' ನಟಿ'ತಲೈವಿ' ಸಿನಿಮಾದಿಂದ ಪ್ರಿಯಾಮಣಿ ಔಟ್: ಶಶಿಕಲಾ ಪಾತ್ರಕ್ಕೆ ಬಂದ್ರು 'ಜೋಶ್' ನಟಿ

  ಹಲವು ಸಿನಿಮಾಗಳಲ್ಲಿ ಪ್ರಿಯಾಮಣಿ ನಟನೆ

  ಹಲವು ಸಿನಿಮಾಗಳಲ್ಲಿ ಪ್ರಿಯಾಮಣಿ ನಟನೆ

  ದಿ ಫ್ಯಾಮಿಲಿ ಮ್ಯಾನ್ ವೆಬ್‌ ಸೀರೀಸ್‌ನಲ್ಲಿ ಹೀರೋ ಮನೋಜ್ ಬಾಜಪೇಯಿ ಪತ್ನಿಯಾಗಿ ನಟಿಸಿ ಗಮನ ಸೆಳೆದಿದ್ದ ಪ್ರಿಯಾಮಣಿ. ಈಗ ಅಸುರನ್ ತೆಲುಗು ರೀಮೇಕ್‌ 'ನಾರಪ್ಪ' ದಲ್ಲಿ ವೆಂಕಟೇಶ್ ಪತ್ನಿಯಾಗಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಡಾಕ್ಟರ್ 56 ಸಿನಿಮಾದಲ್ಲೂ ಸಹ ನಟಿಸುತ್ತಿದ್ದಾರೆ.

  ರಮ್ಯಾಕೃಷ್ಣನ್ ಮಾಡಿದ್ದ ಆ ಪಾತ್ರದಂತಿರಬೇಕಂತೆ ಪ್ರಿಯಾಮಣಿ ಕನಸಿನ ಪಾತ್ರ!ರಮ್ಯಾಕೃಷ್ಣನ್ ಮಾಡಿದ್ದ ಆ ಪಾತ್ರದಂತಿರಬೇಕಂತೆ ಪ್ರಿಯಾಮಣಿ ಕನಸಿನ ಪಾತ್ರ!

  English summary
  Actress Priyamani not doing Ramzan fasting. She said Only husband Mustafa and mother in law were doing fasting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X