Just In
Don't Miss!
- Sports
ರಾಜಸ್ಥಾನ ತಂಡದಿಂದ ಸ್ಟೀವ್ ಸ್ಮಿತ್ ಔಟ್, ಸಂಜು ಹೊಸ ಕ್ಯಾಪ್ಟನ್!
- Lifestyle
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
- Automobiles
ಭಾರೀ ಗಾತ್ರದ ಎಸ್ಯುವಿಯನ್ನು ಬಾಯಿಂದ ಹಿಂದಕ್ಕೆಳೆದ ಹುಲಿ
- News
ಮಕ್ಕಳಿಗೆ ಯಾವ ಕೊರೊನಾ ಲಸಿಕೆ ಸೂಕ್ತ; ಏಮ್ಸ್ ನಿರ್ದೇಶಕರ ಸಲಹೆ
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Finance
ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ; ಟಾಟಾ ಮೋಟಾರ್ಸ್ 6%ಗೂ ಹೆಚ್ಚು ಗಳಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಐಶ್ವರ್ಯ ಉಪೇಂದ್ರಗೆ ಅಮ್ಮನೇ ಆಕ್ಟಿಂಗ್ ಗುರು
ಸಾಮಾನ್ಯವಾಗಿ ಅಪ್ಪ ಅಮ್ಮ ಮಕ್ಕಳ ಬುಕ್ ಹಿಡಿದುಕೊಂಡು ಎಷ್ಟು ಓದಿದ್ದೀಯಾ, ಆ ಪ್ರಶ್ನೆಗೆ ಉತ್ತರ ಹೇಳು.. ಈ ಪ್ರಶ್ನೆಗೆ ಉತ್ತರ ಹೇಳು.. ಅಂತ ಕೇಳುತ್ತಾರೆ. ಆದರೆ, ಐಶ್ವರ್ಯ ವಿಷಯದಲ್ಲಿ ಅದು ಉಲ್ಟಾ ಆಗಿದೆ.
ತಾಯಿಯೇ ಮೊದಲ ಗುರು ಎನ್ನುವ ಹಾಗೆ ಐಶ್ವರ್ಯ ಉಪೇಂದ್ರಗೆ ನಟನೆಯ ಮೊದಲ ಗುರು ಅವರ ತಾಯಿ ಪ್ರಿಯಾಂಕ. ಹೀಗೆ ಹೇಳುತ್ತಿರುವುದಕ್ಕೆ ಉದಾಹರಣೆಯಾಗಿ ಈ ಫೋಟೋ ಇದೆ. 'ದೇವಕಿ' ಚಿತ್ರೀಕರಣ ಸಮಯದ ಒಂದು ಸ್ವೀಟ್ ಫೋಟೋವನ್ನು ನಿರ್ದೇಶಕ ಲೋಹಿತ್ ಹಂಚಿಕೊಂಡಿದ್ದಾರೆ.
ಒಂದು ದೃಶ್ಯದ ಚಿತ್ರೀಕರಣಕ್ಕೂ ಮುಂಚೆ ಪ್ರಿಯಾಂಕ ಸೀನ್ ಪೇಪರ್ ಹಿಡಿದು ಐಶ್ವರ್ಯಗೆ ಡೈಲಾಗ್ ಕೇಳು ಎಂದು ಕೇಳುತ್ತಿದ್ದಾರೆ. ಮಗಳು ಯಾವ ರೀತಿ ತಯಾರಿ ಆಗಿದ್ದಾಳೆ, ಇನ್ನು ಹೇಗೆ ಚೆನ್ನಾಗಿ ಮಾಡಬಹುದು ಎನ್ನುವ ಸಲಹೆ ನೀಡುತ್ತಿದ್ದರೆ.
ಐಶ್ವರ್ಯ ಕೂಡ ಬಹಳ ಬುದ್ದಿವಂತೆ. ಒಂದು ದೃಶ್ಯದ ಬಗ್ಗೆ ನಿರ್ದೇಶಕರು ಹೇಳಿದರೆ ಅದು ಯಾಕೆ ಹಾಗೆಯೇ ಆಗಬೇಕು. ಹಿಂದಿನ ಸೀನ್ ನಲ್ಲಿ ಏನಾಗಿರುತ್ತದೆ ಎಂದೆಲ್ಲ ಕೇಳುತ್ತಾಳಂತೆ.
ಅಂದಹಾಗೆ, 'ದೇವಕಿ' ಸಿನಿಮಾದ ಮೂಲಕ ಉಪೇಂದ್ರ ಪ್ರೀತಿಯ ಪುತ್ರಿ ಐಶ್ವರ್ಯ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಈ ಸಿನಿಮಾದ ಬಿಡುಗಡೆಯ ದಿನಾಂಕ ಜೂನ್ ನಿಂದ ಜುಲೈಗೆ ಮುಂದಕ್ಕೆ ಹೋಗಿದೆ.