ಅತ್ತೆಯ ಹುಟ್ಟುಹಬ್ಬ ಆಚರಿಸಿದ ಪ್ರಿಯಾಂಕ ಉಪೇಂದ್ರ

ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಅತ್ತೆ - ಸೊಸೆ ನಡುವೆ ನಡೆಯುವ ಜಗಳಗಳನ್ನು ನೀವು ನೋಡಿರುತ್ತೀರಿ. ಆ ರೀತಿ ಮನೆಗಳಲ್ಲಿ ಅತ್ತೆ - ಸೊಸೆ ಜಗಳ ಆಡಿದರೆ ಗಂಡನ ಪಾಡು ಕೇಳುವವರೇ ಇಲ್ಲ. ಆದರೆ ಉಪೇಂದ್ರ ಮನೆಯಲ್ಲಿ ಈ ರೀತಿಯ ಸಮಸ್ಯೆ ಇಲ್ಲ.

ನಟಿ ಪ್ರಿಯಾಂಕ ಉಪೇಂದ್ರ ಹಾಗೂ ಉಪೇಂದ್ರ ತಾಯಿ ಅನುಸೂಯ ನಡುವೆ ಎಷ್ಟೊಂದು ಒಳ್ಳೆಯ ಅನುಬಂಧ ಇದೆ. ಅತ್ತೆ ಕಂಡರೆ ಪ್ರಿಯಾಂಕಗೆ ತುಂಬ ಗೌರವ, ಅದೇ ರೀತಿ ಉಪ್ಪಿ ತಾಯಿಗೆ ಸೊಸೆಯನ್ನು ಕಂಡರೆ ಪ್ರೀತಿ.

ಪ್ರಿಯಾಂಕ ಉಪೇಂದ್ರ ತಮ್ಮ ಅತ್ತೆಯ ಹುಟ್ಟುಹಬ್ಬವನ್ನು ನಿನ್ನೆ (ಮೇ 21) ಆಚರಿಸಿದ್ದಾರೆ. ಉಪೇಂದ್ರ ಅಣ್ಣ, ಅವರ ಮಕ್ಕಳು, ಪ್ರಿಯಾಂಕ ಉಪೇಂದ್ರ ಹಾಗೂ ಮಕ್ಕಳು ಸೇರಿ ಅಜ್ಜಿಯ ಬರ್ತ್ ಡೇ ಯನ್ನು ಆಚರಿಸಿದ್ದಾರೆ.

priyanka upendra celebrated mother in law birthday

ಮಗ, ಸೊಸೆ, ಮೊಮ್ಮಕ್ಕಳ ಜೊತೆಗೆ ಕೇಕ್ ಕಟ್ ಮಾಡಿ ಅನುಸೂಯ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪ್ರೀತಿಯ ಅತ್ತೆ ಬರ್ತ್ ಡೇ ಫೋಟೋವನ್ನು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಪ್ರಿಯಾಂಕ ಉಪೇಂದ್ರ ಹಂಚಿಕೊಂಡಿದ್ದಾರೆ.

ಪ್ರಿಯಾಂಕ ಉಪೇಂದ್ರ ಸದ್ಯ 'ದೇವಕಿ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ, ಈ ಚಿತ್ರ ಜೂನ್ ನಲ್ಲಿ ಬಿಡುಗಡೆಯಾಗುತ್ತಿದೆ.

More from Filmibeat

English summary
Kannada actress Priyanka Upendra celebrated mother in law Anusuya birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X