»   » 'ಫಸ್ಟ್‌ ರ‍್ಯಾಂಕ್‌ ರಾಜು' ಮುಂದಿನ ಸಿನಿಮಾ ಯಾವುದು

'ಫಸ್ಟ್‌ ರ‍್ಯಾಂಕ್‌ ರಾಜು' ಮುಂದಿನ ಸಿನಿಮಾ ಯಾವುದು

Posted By:
Subscribe to Filmibeat Kannada

ನಿರ್ಮಾಪಕ ಕೆ.ಮಂಜು ಅವರು ಯಶ್ ಅವರ ಸಿನಿಮಾದ ಜೊತೆ ಜೊತೆಗೆ ಮತ್ತೊಂದು ಹೊಸ ಸಿನಿಮಾ 'ಸ್ಮೈಲ್ ಪ್ಲೀಸ್' ಲಾಂಚ್ ಮಾಡಿದ್ದಾರೆ. ಚಿತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿ 'ಫಸ್ಟ್‌ ರ‍್ಯಾಂಕ್‌ ರಾಜು' ಖ್ಯಾತಿಯ ನಟ ಗುರುನಂದನ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಡೈಲಾಗ್ ಬರಹಗಾರ ರಘು ಸಮರ್ಥ್ ಅವರು ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲಿದ್ದು, ಮಾರ್ಚ್ ತಿಂಗಳಿನಲ್ಲಿ 'ಸ್ಮೈಲ್ ಪ್ಲೀಸ್' ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಇದೊಂದು ಪಕ್ಕಾ ಕಾಮಿಡಿ ಸಿನಿಮಾ ಆಗಿದ್ದು ಕೆ.ಮಂಜು ಅವರು ಬಂಡವಾಳ ಹೂಡುತ್ತಿದ್ದಾರೆ.[ಫಸ್ಟ್‌ ರ‍್ಯಾಂಕ್‌ ರಾಜು ಏಕೆ ನೋಡಬೇಕು?, ಇಲ್ಲಿದೆ ಕಾರಣಗಳು]

Producer K Manju's 'Smile Please' movie with Actor Raghunandan

ನಿರ್ಮಾಪಕ ಮಂಜು ಹೇಳುವ ಪ್ರಕಾರ ಇವರ ನಿರ್ಮಾಣದಲ್ಲಿ ಸೆಟ್ಟೇರಿರುವ ಎರಡು ಸಿನಿಮಾಗಳು (ಯಶ್ ಸಿನಿಮಾ ಮತ್ತು ಸ್ಮೈಲ್ ಪ್ಲೀಸ್) ಒರಿಜಿನಲ್ ಕಥೆ. ಯಾವುದೇ ರಿಮೇಕ್ ಆಗಲಿ ಅಥವಾ ಬೇರೆ ಕಥೆಯಿಂದ ಸ್ಪೂರ್ತಿ ಪಡೆದಂತಹ ಸಿನಿಮಾ ಅಲ್ಲ.

ಕಾಮಿಡಿ ಸಿನಿಮಾ 'ಸ್ಮೈಲ್ ಪ್ಲೀಸ್' ಪಕ್ಕಾ ಕಾಮಿಡಿ ಸಿನಿಮಾ ಆಗಿದ್ದು ಚಿತ್ರದಲ್ಲಿ ರಂಗಾಯಣ ರಘು, ಅನಂತ್ ನಾಗ್ ಅವರೂ ಮಿಂಚಲಿದ್ದಾರೆ. ಸಂಗೀತ ನಿರ್ದೇಶಕರು ಇನ್ನೂ ಯಾರೂಂತ ಇಂದು ಪಕ್ಕಾ ಆಗಲಿದ್ದು, ಇವತ್ತಿನಿಂದಲೇ ಮ್ಯೂಸಿಕ್ ಕಂಪೋಸಿಷನ್ ಕೆಲಸ ಆರಂಭವಾಗಲಿದೆ.

English summary
Producer K Manju has launched a new film with 1st Rank Raju actor Gurunandan playing the lead role. Dialogue writer Raghu Samarth will direct the film. Shooting the film will start in March. It will be a comedy film. Manju will thus produce two films simultaneously.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada