For Quick Alerts
  ALLOW NOTIFICATIONS  
  For Daily Alerts

  ಮುತ್ತಪ್ಪ ರೈ ಜೀವನ ಆಧರಿಸಿದ ಸಿನಿಮಾಕ್ಕೆ ಎದುರಾಯ್ತು ಕಂಟಕ

  |

  ಮಾಜಿ ಡಾನ್, ದಿವಂಗತ ಮುತ್ತಪ್ಪ ರೈ ಜೀವನ ಆಧರಿಸಿ 'ಎಂಆರ್' ಹೆಸರಿನ ಸಿನಿಮಾವೊಂದು ಸೆಟ್ಟೇರಿದ್ದು, ರವಿ ಶ್ರೀವತ್ಸ ಆ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಆದರೆ ಸಿನಿಮಾಕ್ಕೆ ಸಂಕಷ್ಟವೊಂದು ಎದುರಾಗಿದೆ.

  ಮುತ್ತಪ್ಪ ರೈಗೆ ಆಪ್ತರಾಗಿದ್ದ, ಸಿನಿಮಾ ನಿರ್ಮಾಪಕರೂ ಆಗಿರುವ ಪದ್ಮನಾಭ ಅವರು ಎಂಆರ್ ಸಿನಿಮಾಕ್ಕೆ ತಕರಾರು ಎತ್ತಿದ್ದು, 'ಮುತ್ತಪ್ಪ ರೈ ಅವರ ಕುಟುಂಬದವರ ಅನುಮತಿ ಇಲ್ಲದೆ ಅವರ ಜೀವನ ಆಧರಿಸಿದ ಸಿನಿಮಾ ಮಾಡುವಂತಿಲ್ಲ' ಎಂದಿದ್ದಾರೆ.

  ಮುತ್ತಪ್ಪ ರೈ ಸಿನಿಮಾ: ಮಾಜಿ ಡಾನ್ ಪಾತ್ರದಲ್ಲಿ ನಟಿಸುತ್ತಿರುವುದು ಯಾರು ಗೊತ್ತೆ?ಮುತ್ತಪ್ಪ ರೈ ಸಿನಿಮಾ: ಮಾಜಿ ಡಾನ್ ಪಾತ್ರದಲ್ಲಿ ನಟಿಸುತ್ತಿರುವುದು ಯಾರು ಗೊತ್ತೆ?

  ಮುತ್ತಪ್ಪ ರೈ ಅವರು ವಿಲ್‌ ನಲ್ಲಿ ಬರೆದಿರುವಂತೆ, ಅವರ ಜೀವನ ಆಧರಿಸಿ ಸಿನಿಮಾ, ವೆಬ್ ಸರಣಿ, ಪುಸ್ತಕ ಯಾವುದೇ ಮಾಡಿದರು ಅದಕ್ಕೆ ಕುಟುಂಬ ಸದಸ್ಯರ ಒಪ್ಪಿಗೆ ಬಡೆಯಬೇಕು ಎಂದು ನಮೂದಿಸಿದ್ದಾರೆ. ಆದರೆ ರವಿ ಶ್ರೀವತ್ಸ ಮುತ್ತಪ್ಪ ರೈ ಕುಟುಂಬ ಸದಸ್ಯರ ಒಪ್ಪಿಗೆ ಇಲ್ಲದೆ ಸಿನಿಮಾ ಮಾಡುತ್ತಿದ್ದಾರೆ, ಇದು ತಪ್ಪು ಎಂದಿದ್ದಾರೆ ಪದ್ಮನಾಭ್.

  'ಕುಟುಂಬದ ಒಪ್ಪಿಗೆ ಇಲ್ಲದೆ ಸಿನಿಮಾ ಮಾಡುವಂತಿಲ್ಲ'

  'ಕುಟುಂಬದ ಒಪ್ಪಿಗೆ ಇಲ್ಲದೆ ಸಿನಿಮಾ ಮಾಡುವಂತಿಲ್ಲ'

  'ಜಾನ್ ಜಾನಿ ಜನಾರ್ಧನ್', 'ಕಾಲೇಜ್ ಕುಮಾರ್' ಸಿನಿಮಾಗಳನ್ನು ನಿರ್ಮಿಸಿದ್ದ ಪದ್ಮನಾಭ್, 'ನಾನೇ ಮುತ್ತಪ್ಪ ರೈ ಅವರ ಸಿನಿಮಾ ಮಾಡುವ ಯೋಜನೆಯಲ್ಲಿದ್ದೇನೆ. ಗುಣಮಟ್ಟದ ಮೇಕಿಂಗ್‌ನೊಂದಿಗೆ, ಹಲವು ಭಾಷೆಗಳಲ್ಲಿ ಒಟ್ಟಿಗೆ ಸಿನಿಮಾ ಬಿಡುಗಡೆ ಮಾಡುವ ಆಲೋಚನೆಯೂ ಇದೆ' ಎಂದಿದ್ದಾರೆ ಪದ್ದಮನಾಭ್.

  ಮುತ್ತಪ್ಪ ರೈ ಸಿನಿಮಾ ನಾನೇ ಮಾಡುತ್ತೇನೆ: ಪದ್ಮನಾಭ್

  ಮುತ್ತಪ್ಪ ರೈ ಸಿನಿಮಾ ನಾನೇ ಮಾಡುತ್ತೇನೆ: ಪದ್ಮನಾಭ್

  'ಮುತ್ತಪ್ಪ ರೈ ಅವರು ಹಲವಾರು ವೆಬ್‌ ಸರಣಿ, ಸಿನಿಮಾಗಳನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡುತ್ತಿದ್ದರು. 'ನನ್ನ ಜೀವನ ಆಧರಿಸಿದ ಸಿನಿಮಾ ಸಹ ಇದೇ ಗುಣಮಟ್ಟದ್ದಾಗಿರಬೇಕು' ಎಂದು ಅವರು ನನ್ನ ಬಳಿ ಹೇಳಿದ್ದರು. ಹಾಗಾಗಿ ಅವರ ಆಸೆಯಂತೆಯೇ ಗುಣಮಟ್ಟದ ಮೇಕಿಂಗ್‌ನಲ್ಲಿ ಸಿನಿಮಾ ತೆಗೆಯಬೇಕು ಎಂಬ ಯೋಜನೆ ಹಾಕಿಕೊಂಡಿದ್ದೇನೆ' ಎಂದಿದ್ದಾರೆ ಪದ್ಮನಾಭ್.

  ಮುತ್ತಪ್ಪ ರೈ ಕುರಿತು ಜಯರಾಜ್ ಪುತ್ರ ಅಜಿತ್ ಹೇಳಿದ ಅಚ್ಚರಿಯ ಸಂಗತಿಮುತ್ತಪ್ಪ ರೈ ಕುರಿತು ಜಯರಾಜ್ ಪುತ್ರ ಅಜಿತ್ ಹೇಳಿದ ಅಚ್ಚರಿಯ ಸಂಗತಿ

  ನಾವು ಸಿನಿಮಾ ನಿಲ್ಲಿಸುವುದಿಲ್ಲ: ಶೋಭಾ ರಾಜಣ್ಣ

  ನಾವು ಸಿನಿಮಾ ನಿಲ್ಲಿಸುವುದಿಲ್ಲ: ಶೋಭಾ ರಾಜಣ್ಣ

  ಇದಕ್ಕೆ ಪ್ರತಿಕ್ರಿಯಿಸಿರುವ 'ಎಂಆರ್' ಸಿನಿಮಾದ ನಿರ್ಮಾಪಕಿ ಶೋಭಾ ರಾಜಣ್ಣ, 'ಏನೇ ಆಗಲಿ ನಾವು ಸಿನಿಮಾ ನಿಲ್ಲಿಸುವುದಿಲ್ಲ' ಎಂದಿದ್ದಾರೆ. ಈಗಾಗಲೇ ಸಿನಿಮಾ ಪ್ರಾರಂಭ ಮಾಡಿದ್ದೇನೆ. ಲಕ್ಷಾಂತರ ಬಂಡವಾಳ ಹೂಡಿ ಆಗಿದೆ. ಈ ಸಮಯದಲ್ಲಿ ಸಿನಿಮಾ ನಿಲ್ಲಿಸಲು ಸಾಧ್ಯವಿಲ್ಲ' ಎಂದಿದ್ದಾರೆ ಶೋಭಾ ರಾಜಣ್ಣ.

  ತಮಿಳು ಚಿತ್ರರಂಗದ ಕಡೆ ಮುಖ ಮಾಡಿದ Ninasam Satish | Filmibeat Kannada
  'ಪದ್ಮನಾಭ್ ಅವರು ಸಿನಿಮಾ ಮಾಡಲಿ ತೊಂದರೆಯಿಲ್ಲ

  'ಪದ್ಮನಾಭ್ ಅವರು ಸಿನಿಮಾ ಮಾಡಲಿ ತೊಂದರೆಯಿಲ್ಲ

  ಪದ್ಮನಾಭ್ ಅವರು ಮುತ್ತಪ್ಪ ರೈ ಜೀವನ ಆಧರಿಸಿದ ಸಿನಿಮಾ ಮಾಡಲಿ, ನಮ್ಮ ಅಡ್ಡಿಯಿಲ್ಲ, ನಮ್ಮ ಸಿನಿಮಾ ಬೇರೆ ಅವರ ಸಿನಿಮಾ ಬೇರೆ. ನಾವು ಬಾಂಬೆಯಲ್ಲಿ ಚಿತ್ರೀಕರಣ ನಡೆಸಲು ಹೋಗಲಿದ್ದೇವೆ, ಈಗಾಗಲೇ ಟಿಕೆಟ್‌ಗಳ ಬುಕ್ ಎಲ್ಲಾ ಆಗಿದೆ' ಎಂದಿದ್ದಾರೆ ಶೋಭಾ ರಾಜಣ್ಣ.

  'ಮುತ್ತಪ್ಪ ರೈ' ಗೆ ಜೊತೆಯಾಗಲು ಕೇರಳದಿಂದ ಬಂದ ಚೆಲುವೆ'ಮುತ್ತಪ್ಪ ರೈ' ಗೆ ಜೊತೆಯಾಗಲು ಕೇರಳದಿಂದ ಬಂದ ಚೆಲುವೆ

  English summary
  producer Padmanabh objected about Ravi Shrivatsa's MR movie which is made on Muthappa Rai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X