»   » ಪಿ.ವಿ.ಆರ್ ವಿರುದ್ಧ ಸಿಡಿದೆದ್ದ ಕನ್ನಡ ಹೋರಾಟಗಾರರು.!

ಪಿ.ವಿ.ಆರ್ ವಿರುದ್ಧ ಸಿಡಿದೆದ್ದ ಕನ್ನಡ ಹೋರಾಟಗಾರರು.!

Posted By:
Subscribe to Filmibeat Kannada

ಪಿ.ವಿ.ಆರ್ ನಲ್ಲಿ ಕನ್ನಡ ಸಿನಿಮಾಗಳು ಪ್ರದರ್ಶನ ಮಾಡಬೇಕೆಂದು ಕನ್ನಡ ಹೋರಾಟಗಾರರು ಪ್ರತಿಭಟನೆ ಮಾಡಿರುವ ಘಟನೆ ಇಂದು ಬೆಂಗಳೂರಿನಲ್ಲಿ ನಡೆದಿದೆ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ತಿಂಗಳಿನಲ್ಲಾದರೂ, ಕನ್ನಡ ಸಿನಿಮಾಗಳನ್ನ ಪ್ರದರ್ಶನ ಮಾಡಬೇಕೆಂದು ಒತ್ತಾಯಿಸಿ, ಕೋರಮಂಗಲದ ಪಿ.ವಿ.ಆರ್ ಮಾಲ್ ಗೆ ಕನ್ನಡ ಸಂಘಟನೆಗಳ ಒಕ್ಕೂಟ ಮುತ್ತಿಗೆ ಹಾಕಲು ಪ್ರಯತ್ನಿಸಿದೆ. ಈ ವೇಳೆ ಪೊಲೀಸರು ಪ್ರತಿಭಟನೆಕಾರರನ್ನ ಬಂಧಿಸಿದ್ದಾರೆ.

Protest against Pvr koramangala

ಕರ್ನಾಟಕದ ಬಹುತೇಕ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳಿಗಿಂತ ಹೆಚ್ಚು ಪರಭಾಷೆ ಸಿನಿಮಾಗಳೇ ಪ್ರದರ್ಶನವಾಗುತ್ತಿದೆ. ಇನ್ನು ಮಲ್ಟಿಫ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಾಗಳನ್ನ ಪ್ರದರ್ಶನ ಮಾಡುವುದು ಅಷ್ಟಿಕಷ್ಟೇ. ಹೀಗಿರುವಾಗ, ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳನ್ನ ಪ್ರದರ್ಶನ ಮಾಡಿ ಎಂದು ಹೋರಾಟ ಮಾಡುವುದು ದುರಂತವೇ ಸರಿ.

English summary
Kannada leaders Protested against PVR for displaying Kannada cinema for Kannada Rajyotsava. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಸಿನಿಮಾಗಳ ಪ್ರದರ್ಶನ ಮಾಡಬೇಕೆಂದು ಪಿವಿಆರ್ ವಿರುದ್ಧ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada