For Quick Alerts
  ALLOW NOTIFICATIONS  
  For Daily Alerts

  'ಮಮ್ಮಿ' ನಿರ್ದೇಶಕ ಲೋಹಿತ್ ಜೊತೆ 'ದಿಯಾ' ಪೃಥ್ವಿ ಅಂಬಾರ್ ಸಿನಿಮಾ

  |

  'ದಿಯಾ' ಸಿನಿಮಾ ಯಶಸ್ಸಿನ ನಂತರ ಪೃಥ್ವಿ ಅಂಬಾರ್ ಚಿತ್ರಗಳು ಹೆಚ್ಚಾಗುತ್ತಿದೆ. ಹೊಸ ಹೊಸ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕುತ್ತಿದ್ದಾರೆ. ಸದ್ಯ 'ಶುಗರ್‌ಲೆಸ್' ಸಿನಿಮಾ ಚಿತ್ರೀಕರಣ ಮಾಡುತ್ತಿರುವ ಪೃಥ್ವಿ ಈಗ ನಿರ್ದೇಶಕ ಲೋಹಿತ್ ಜೊತೆ ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ.

  'ಮಮ್ಮಿ ಸೇವ್ ಮೀ' ಸಿನಿಮಾ ನಿರ್ದೇಶನ ಮಾಡಿದ್ದ ಲೋಹಿತ್ ನಿರ್ಮಾಣದಲ್ಲಿ ಪೃಥ್ವಿ ಅಂಬಾರ್ ಈಗಾಗಲೇ 'ಲೈಫ್ ಈಸ್ ಬ್ಯೂಟಿಫುಲ್' ಸಿನಿಮಾ ಮಾಡುತ್ತಿದ್ದಾರೆ.

  'ದಿಯಾ' ಸಿನಿಮಾ ಬಳಿಕ ಪೃಥ್ವಿ ಅಂಬರ್ ಹೊಸ ಸಿನಿಮಾ ಅನೌನ್ಸ್: ಡಾಲಿ ಧನಂಜಯ್ ಸಾಥ್'ದಿಯಾ' ಸಿನಿಮಾ ಬಳಿಕ ಪೃಥ್ವಿ ಅಂಬರ್ ಹೊಸ ಸಿನಿಮಾ ಅನೌನ್ಸ್: ಡಾಲಿ ಧನಂಜಯ್ ಸಾಥ್

  ಈ ಚಿತ್ರದ ಜೊತೆ ಮತ್ತೊಂದು ಹಾರರ್ ಸಿನಿಮಾ ಮಾಡಲು ಈ ಜೋಡಿ ಮುಂದಾಗಿದೆ. ನವೆಂಬರ್ ತಿಂಗಳಲ್ಲಿ ಈ ಚಿತ್ರ ಆರಂಭಿಸಲು ಲೋಹಿತ್ ನಿರ್ಧರಿಸಿದ್ದಾರೆ.

  'ಲೈಫ್ ಈಸ್ ಬ್ಯೂಟಿಫುಲ್' ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಚಿತ್ರವನ್ನು ಅರುಣ್ ಕುಮಾರ್ ಮತ್ತು ಸಾಬು ಅಲೋಶಿಯಸ್ ಇಬ್ಬರು ಜೊತೆಯಾಗಿ ನಿರ್ದೇಶನ ಮಾಡುತ್ತಿದ್ದಾರೆ. ಲೋಹಿತ್ ಎಚ್ ಬ್ಯಾನರ್ ನಲ್ಲಿ ಚಿತ್ರಕ್ಕೆ ಕಿಶೋರ್ ನರಸಿಂಹಯ್ಯ ಬಂಡವಾಳ ಹೂಡುತ್ತಿದ್ದಾರೆ.

  Recommended Video

  ಅಂಬರೀಷ್ ಮನೆ ಪಕ್ಕ ಫ್ಲಾಟ್ ತಗೋಬೇಕು ಅಂತ ತುಂಬಾ ಆಸೆ ಪಟ್ಟಿದ್ದ ಚಿರು : PrashanthSambargi | Chiranjeevi Sarja

  'ದಿಯಾ' ಸಿನಿಮಾ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 23ರಂದು ಮತ್ತೆ ರಿ ರಿಲೀಸ್ ಆಗ್ತಿದೆ. ಚಿತ್ರದ ಕ್ಲೈಮ್ಯಾಕ್ಸ್ ಬದಲಾಯಿಸಿ, ಕಥೆಗೆ ಟ್ವಿಸ್ಟ್ ನೀಡಿ ಮತ್ತೆ ತೆರೆಮೇಲೆ ತರುತ್ತಿದ್ದಾರೆ ನಿರ್ಮಾಪಕರು.

  English summary
  Dia Fame Actor Pruthvi Ambar teams up with director LOHITH for his first horror film.
  Saturday, October 17, 2020, 15:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X