ಕನ್ನಡ ಸಿನಿಮಾರಂಗದಲ್ಲಿ ಮಲ್ಟಿ ಸ್ಟಾರ್ ಸಿನಿಮಾಗಳ ಪರ್ವ ಶುರುವಾಗಿದೆ. ಮೂರ್ನಾಲ್ಕು ಸ್ಟಾರ್ ಗಳು ಒಟ್ಟಿಗೆ ಅಭಿನಯಿಸಿದ ಚಿತ್ರಗಳು ಸಕ್ಸಸ್ ಕಾಣಲು ಪ್ರಾರಂಭವಾಗಿದೆ. ಸ್ಟಾರ್ ವಾರ್ ಗಳನ್ನ ಬಿಟ್ಟು ಅಭಿಮಾನಿಗಳು ಇಬ್ಬರು ಮೂವರು ಕಲಾವಿದರು ಅಭಿನಯಿಸಿದ ಚಿತ್ರಗಳನ್ನ ಒಟ್ಟಿಗೆ ಕೂತು ಥಿಯೇಟರ್ ನಲ್ಲಿ ನೋಡಿ ಎಂಜಾಯ್ ಮಾಡುತ್ತಿದ್ದಾರೆ.
ಕಳೆದ ವರ್ಷ ಬಿಡುಗಡೆಯಾದ 'ಚೌಕ' ಚಿತ್ರದಲ್ಲಿ ನಾಲ್ವರು ಕನ್ನಡದ ನಾಯಕರು ತೆರೆಯನ್ನ ಹಂಚಿಕೊಂಡಿದ್ದರು, 'ಚೌಕ' ಸಿನಿಮಾದ ಜೊತೆಯಲ್ಲಿ 'ಹ್ಯಾಪಿ ನ್ಯೂ ಇಯರ್', 'ಮಫ್ತಿ', 'ದಯವಿಟ್ಟು ಗಮನಿಸಿ' ಹೀಗೆ ಹಲವಾರು ಚಿತ್ರಗಳಲ್ಲಿ ಸ್ಟಾರ್ ಗಳು ಒಟ್ಟಿಗೆ ಆಕ್ಟ್ ಮಾಡಿದ್ದರು. ಸಿನಿ ಪ್ರಿಯರು ಕೂಡ ಚಿತ್ರವನ್ನ ನೋಡಿ ಸಕ್ಸಸ್ ನೀಡಿದ್ದರು.
ಹೊಸ ವರ್ಷ ಪ್ರಾರಂಭವಾಗಿದೆ ಈ ವರ್ಷ ಮಲ್ಟಿ ಸ್ಟಾರ್ ಚಿತ್ರವಾಗಿ 'ದಿ ವಿಲನ್' ರಿಲೀಸ್ ಆಗಲಿದೆ. ಇದಾದ ನಂತರ ಮುನಿರತ್ನ ನಿರ್ಮಾಣದಲ್ಲಿ ಸೆಟ್ಟೇರಬೇಕಾಗಿರುವ ಚಾಣಾಕ್ಷ ಚಂದ್ರಗುಪ್ತ ಸಿನಿಮಾ ಕೂಡ ಪ್ರಾರಂಭವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಚಿತ್ರಕ್ಕೆ ಸಂಬಂಧಿಸಿದಂತೆ ಮೊದಲ ಸೂಚನೆ ಸಿಕ್ಕಿದ್ದು ಪುನೀತ್ ರಾಜ್ ಕುಮಾರ್ ಸಿನಿಮಾದ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ನೀಡಿದ್ದಾರೆ.
ಚಂದ್ರಗುಪ್ತನಾಗಲು ಅಪ್ಪು ರೆಡಿ
'ಕುರುಕ್ಷೇತ್ರ' ಸಿನಿಮಾವನ್ನ ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ಮುನಿರತ್ನ ಚಾಣಾಕ್ಷ ಚಂದ್ರಗುಪ್ತ ಎನ್ನುವ ಕತೆಯನ್ನ ತಯಾರು ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದರು. ಈ ಚಿತ್ರದಲ್ಲಿ ಸುದೀಪ್, ಉಪೇಂದ್ರ ಹಾಗೂ ಪುನೀತ್ ಅಭಿನಯಿಸಿದರೆ ಚೆನ್ನಾಗಿರುತ್ತೆ ಎಂದು ತಿಳಿಸಿದ್ದರು. ಈ ಬಗ್ಗೆ ಮಾಧ್ಯಮದವರು ಪುನೀತ್ ಅವರಿಗೆ ಪ್ರಶ್ನೆ ಮಾಡಿದಾಗ ಪೌರಾಣಿಕ ಚಿತ್ರದಲ್ಲಿ ಅಭಿನಯಿಸಲು ಸಿದ್ದ ಎಂದಿದ್ದಾರೆ.
ಚಿತ್ರ ಕಥೆ ಹಾಗೂ ಗುಣಮಟ್ಟ ಮುಖ್ಯ
"ಮಲ್ಟಿ ಸ್ಟಾರ್ ಸಿನಿಮಾಗಳು ಮತ್ತು ಐತಿಹಾಸಿಕ ಚಿತ್ರಗಳಲ್ಲಿ ಅಭಿನಯಿಸಲು ನನಗೂ ಆಸೆಯಿದೆ. ಯಾವ ಕಲಾವಿದನ ಜೊತೆ ಆದರೂ ಆಕ್ಟ್ ಮಾಡಲು ನಾನು ಸಿದ್ದ ಆದರೆ ಚಿತ್ರದ ಕಥೆ ಮತ್ತು ತಾಂತ್ರಿಕವಾಗಿ ಎಷ್ಟರ ಮಟ್ಟಿಗೆ ಗುಣಮಟ್ಟ ಚೆನ್ನಾಗಿರುತ್ತೆ ಅನ್ನುವುದು ತುಂಬಾ ಮುಖ್ಯ" ಎಂದಿದ್ದಾರೆ ಪುನೀತ್.
ಒಂದೇ ಚಿತ್ರದಲ್ಲಿ ಪುನೀತ್, ಉಪೇಂದ್ರ, ಸುದೀಪ್ ಅಭಿನಯ
ಚಾಣಾಕ್ಷ ಮತ್ತು ಚಂದ್ರಗುಪ್ತ
ಚಾಣಾಕ್ಷ ಮತ್ತು ಚಂದ್ರಗುಪ್ತ ಚಿತ್ರದಲ್ಲಿ ಪುನೀತ್ ಚಂದ್ರಗುಪ್ತ ಪಾತ್ರವನ್ನ ಮಾಡಿದರೆ ಸುದೀಪ್ ಅಲೆಗ್ಜಾಂಡರ್ ಪಾತ್ರವನ್ನ ನಿರ್ವಹಿಸಬೇಕು ಎನ್ನುವುದು ನಿರ್ಮಾಪಕ ಮುನಿರತ್ನ ಅವರ ಆಸೆ. ಅದರಂತೆ ಪುನೀತ್ ಕೂಡ ಸುದೀಪ್ ಜೊತೆ ಅಭಿನಯಿಸಲು ಯಾವುದೇ ಬೇಸರವಿಲ್ಲ ಎಂದು ತಿಳಿಸದ್ದಾರೆ.
ಕುರುಕ್ಷೇತ್ರ ಸೆಟ್ ಗೆ ಹೋಗಿದ್ದ ಪತ್ರಕರ್ತರಿಗೆ ಸಿಕ್ಕ ಸರ್ಪ್ರೈಸ್ ಸಂಗತಿಗಳು
ಮುನಿರತ್ನ ಕನಸಿನ ಕಥೆ
ಸದ್ಯ ದರ್ಶನ್ ಅಭಿನಯದ 'ಕುರುಕ್ಷೇತ್ರ' ಚಿತ್ರಕ್ಕೆ ಕತೆಯನ್ನ ಆಯ್ಕೆ ಮಾಡಿರುವ ಮುನಿರತ್ನ ಚಾಣಾಕ್ಷ ಚಂದ್ರಗುಪ್ತ ಸಿನಿಮಾಗೂ ತಾವೇ ಕಥೆಯನ್ನ ತಯಾರು ಮಾಡಲಿದ್ದಾರಂತೆ. ಜೂನ್ ಅಥವಾ ಜುಲೈನಲ್ಲಿ ಸಿನಿಮಾ ಮಹೂರ್ತ ಮಾಡುವ ಆಲೋಚನೆಯನ್ನೂ ಮಾಡಿದ್ದಾರಂತೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.