»   » ಸ್ಯಾಂಡಲ್ ವುಡ್ ನಲ್ಲಿ ನಾಯಕರ ಟ್ರೆಂಡಿ ಹೇರ್ ಸ್ಟೈಲ್ ಹವಾ

ಸ್ಯಾಂಡಲ್ ವುಡ್ ನಲ್ಲಿ ನಾಯಕರ ಟ್ರೆಂಡಿ ಹೇರ್ ಸ್ಟೈಲ್ ಹವಾ

Posted By:
Subscribe to Filmibeat Kannada
ಸ್ಯಾಂಡಲ್ ವುಡ್ ನಲ್ಲಿ ನಾಯಕರ ಟ್ರೆಂಡಿ ಹೇರ್ ಸ್ಟೈಲ್ ಹವಾ | Filmibeat Kannada

ಸಿನಿಮಾ ಕಲಾವಿದರು ಅಂದ ಮೇಲೆ ಪ್ರತಿ ಸಿನಿಮಾಗಳಿಗೂ ಬದಲಾಗುತ್ತಿರಬೇಕು. ಅಭಿನಯಿಸುವ ಸಿನಿಮಾದಲ್ಲಿ ಹಿಂದಿನ ಚಿತ್ರಕ್ಕಿಂತಲೂ ವಿಭಿನ್ನವಾಗಿ ಕಾಣಿಸಿಕೊಳ್ಳಬೇಕು. ಸದ್ಯ ಚಂದನವನದ ನಾಯಕರು ತಮ್ಮ ಹೇರ್ ಸ್ಟೈಲ್ ನಿಂದ ಸಖತ್ ಸುದ್ದಿ ಮಾಡುತ್ತಿದ್ದಾರೆ. ಹೇರ್ ಸ್ಟೈಲ್ ನಲ್ಲಿ ಎಕ್ಸ್‌ಪೆರಿಮೆಂಟ್ ಮಾಡೋದಕ್ಕೆ ಹಿಂದು ಮುಂದು ನೋಡುತ್ತಿದ್ದ ಹೀರೋಗಳು ಈಗ ಪ್ರತಿ ಸಿನಿಮಾಗಳಿಗೂ ಲುಕ್ ಬದಲಾಯಿಸಿಕೊಂಡು ತೆರೆ ಮೇಲೆ ಬರ್ತಿದ್ದಾರೆ.

ಹಿಂದೆಲ್ಲಾ ಒಂದೆರೆಡು ಚಿತ್ರಗಳಲ್ಲಿ ಮಾತ್ರ ಹೀರೋಗಳು ತಮ್ಮ ಹೇರ್ ಸ್ಟೈಲ್ ಬದಲಾಯಿಸಲು ಗ್ರೀನ್ ಸಿಗ್ನಲ್ ಕೊಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಪ್ರತಿ ಚಿತ್ರಗಳಿಗೂ ಹೀರೋಗಳು ಹೇರ್ ಸ್ಟೈಲ್ ಬದಲಾಯಿಸಿಕೊಳ್ಳುತ್ತಿದ್ದಾರೆ. ತಾವಿಷ್ಟ ಪಡುವ ಸ್ಟಾರ್ ಗಳು ಟ್ರೆಂಡಿ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಅಭಿಮಾನಿಗಳು ಕೂಡ ಅವರನ್ನೇ ಅನುಸರಿಸುತ್ತಿದ್ದಾರೆ.

ಜರ್ಮನ್ ಯುವಕನ ಕನ್ನಡ ಪ್ರೇಮಕ್ಕೆ ತಲೆ ಬಾಗಿದ ಅಣ್ಣಾವ್ರ ಮಗ ಪುನೀತ್

ಕೇವಲ ಒಂದೆರೆಡು ನಾಯಕರಲ್ಲ, ಚಿತ್ರರಂಗದ ಎಲ್ಲಾ ಸ್ಟಾರ್ ಹೀರೋಗಳು ಟ್ರೆಂಡ್ ಸೆಟ್ ಮಾಡುವಂತಹ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಯಾವ ಹೀರೋ ಯಾವ ರೀತಿಯ ಕೇಶ ವಿನ್ಯಾಸದಲ್ಲಿ ಮಿಂಚುತ್ತಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಟ್ರೆಂಡ್ ಸೆಟ್ ಮಾಡುತ್ತಿದೆ ಪುನೀತ್ ಹೇರ್ ಸ್ಟೈಲ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಮಾನ್ಯವಾಗಿ ತಮ್ಮ ಹೇರ್ ಸ್ಟೈಲ್ ನಲ್ಲಿ ಎಕ್ಸ್‌ಪೆರಿಮೆಂಟ್ ಮಾಡುವುದಕ್ಕೆ ಮನಸ್ಸು ಮಾಡುವುದಿಲ್ಲ. 'ಯಾರೇ ಕೂಗಾಡಲಿ' ಸಿನಿಮಾದ ನಂತರ ಅಪ್ಪು ಟ್ರೆಂಡಿ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಹೊಸ ಚಿತ್ರಕ್ಕಾಗಿ ಹೊಸ ಹೇರ್ ಕಟ್ ಮಾಡಿಸಿದ್ದು ಸದ್ಯ ಈ ಲುಕ್ ಟ್ರೆಂಡ್ ಹುಟ್ಟುಹಾಕುತ್ತಿದೆ.

ಸುದೀಪ್ ಹೇರ್ ಸ್ಟೈಲ್ ಫಾಲೋ ಮಾಡುವ ಫ್ಯಾನ್ಸ್

ಕಿಚ್ಚ ಸುದೀಪ್ ಪ್ರತಿ ಸಿನಿಮಾಗಳಲ್ಲಿ ತಮ್ಮ ಹೇರ್ ಸ್ಟೈಲ್ ಬದಲಾಯಿಸಿಕೊಳ್ಳುತ್ತಾರೆ. 'ಹೆಬ್ಬುಲಿ', 'ಪೈಲ್ವಾನ್' ಹಾಗೂ 'ದಿ ವಿಲನ್' ಹೀಗೆ ಸಾಕಷ್ಟು ಚಿತ್ರಗಳಲ್ಲಿ ಕಿಚ್ಚ ಮಾಡಿಸಿಕೊಂಡ ಕೇಶ ವಿನ್ಯಾಸ ಸಖತ್ ವೈರಲ್ ಆಗಿತ್ತು. ಲೆಕ್ಕವಿಲ್ಲದಷ್ಟು ಅಭಿಮಾನಿಗಳು ಸುದೀಪ್ ಅವರಂತೆ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದರು.

ವಿಭಿನ್ನ ಹೇರ್ ಸ್ಟೈಲ್ ನಲ್ಲಿ ರಾಕಿಂಗ್ ಸ್ಟಾರ್

'ಗಜಕೇಸರಿ' ಸಿನಿಮಾದಲ್ಲಿ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದ ರಾಕಿಂಗ್ ಸ್ಟಾರ್ ಈಗ 'ಕೆ ಜಿ ಎಫ್' ನಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ ಹೇರ್ ಕಟ್ ಮಾಡಿಸಿಕೊಂಡಿಲ್ಲ ಅಂತ ಅದೆಷ್ಟೋ ಜನರು ತಿಳಿದುಕೊಂಡಿದ್ದಾರೆ. ಆದರೆ ಅದು ತಪ್ಪು ಯಶ್ ಮಾಡಿಕೊಂಡಿರುವುದು ಕೂಡ ಬೇರೆಯದ್ದೇ ರೀತಿಯ ಕೇಶ ವಿನ್ಯಾಸ.

ಹೊಸ ಲುಕ್ ನಲ್ಲಿ ಗೋಲ್ಡನ್ ಸ್ಟಾರ್

ಗೋಲ್ಡನ್ ಸ್ಟಾರ್ ಗಣೇಶ್ ಇತ್ತೀಚಿನ ದಿನಗಳಲ್ಲಿ ಒಂದೇ ಚಿತ್ರದಲ್ಲಿ ಎರಡು ಮೂರು ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಮುಗುಳುನಗೆ' ಸಿನಿಮಾದಲ್ಲಿ ವಿಭಿನ್ನವಾಗಿರುವ ಕೇಶ ವಿನ್ಯಾಸಗಳಲ್ಲಿ ಕಾಣಿಸಿಕೊಂಡ ನಂತರ ಈಗ 'ಆರೆಂಜ್' ಚಿತ್ರದಲ್ಲಿಯೂ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ ಗಣೇಶ್.

'KGF' ನಲ್ಲಿ ಯಶ್ ಬಳಸಿರುವ ಈ ಬೈಕ್ ಹಿಂದಿದೆ ಒಂದು ಕುತೂಹಲಕಾರಿ ವಿಷಯ!

English summary
Kannada cine artistes Puneet Rajkumar, Shivarajkumar, Sudeep, Ganesh and Yash have changed their hair style, Fans are also styling hair styles like heros.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada