»   » ಹುಬ್ಬಳ್ಳಿ ಹೈದರು ಕುಣಿದು ಕುಪ್ಪಳಿಸುವಂತೆ ಮಾಡಿದ ಪುನೀತ್

ಹುಬ್ಬಳ್ಳಿ ಹೈದರು ಕುಣಿದು ಕುಪ್ಪಳಿಸುವಂತೆ ಮಾಡಿದ ಪುನೀತ್

Written By:
Subscribe to Filmibeat Kannada

ಹಿಂದೆ ಕನ್ನಡದ ವರನಟ ಡಾ. ರಾಜ್ ಕುಮಾರ್ "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂದು ಹಾಡಿದ್ದು ಇದೇ ಹುಬ್ಬಳ್ಳಿಯಲ್ಲಿ. ಇಂದು ವರನಟನ ಪುತ್ರ ಪುನೀತ್ ರಾಜ್ ಕುಮಾರ್ "ಅಭಿಮಾನಿಗಳೇ ನಮ್ಮನೇ ದೇವ್ರು" ಹಾಡಿಗೆ ಹೆಜ್ಜೆ ಹಾಕಿದ್ದು ಇದೇ ಗಂಡು ಮೆಟ್ಟಿದ ನೆಲದಲ್ಲಿ.

ಶುಕ್ರವಾರ ಹುಬ್ಬಳ್ಳಿಯಲ್ಲಿ ಪವರ್ ಸ್ಟಾರ್ ರಂಗು. ಚೆನ್ನಮ್ಮ ವೃತ್ತದಲ್ಲಿ ಸಹಸ್ರಾರು ಅಭಿಮಾನಿಗಳು ತುಂಬಿದ್ದರು. ಕೆಎಸ್ ಆರ್ ಟಿಸಿ ಬಸ್ ಏರಿ ಕನ್ನಡದ ಬಾವುಟ ಹಿಡಿದು ಹೆಜ್ಜೆ ಹಾಕಿದ ಪುನೀತ್ ಅವರೊಂದಿಗೆ ಅಭಿಮಾನಿಗಳು ಸಂಭ್ರಮಿಸಿದರು.[ದೊಡ್ಮನೆ 'ಅಪ್ಪು'ವನ್ನು ಅಪ್ಪಿಕೊಂಡ ಅಭಿಮಾನಿ ದೇವರುಗಳು]

puneeth rajkumar,

ದೊಡ್ಮನೆ ಹುಡುಗ ಚಿತ್ರದ ಚಿತ್ರೀಕರಣ ರಾಜ್ ಕುಮಾರ್ ಅವರ ಆಕಸ್ಮಿಕ ಚಿತ್ರದ ದಿನಗಳನ್ನು ನೆನಪು ಮಾಡಿತು. ಅಭಿಮಾನಿಗಳು ಮುಗಿಬಿದ್ದ ಪರಿಣಾಮ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೆಕಾಯಿತು.[ಕೋಟಿ ರೂಪಾಯಿ ವೆಚ್ಚದಲ್ಲಿ 'ದೊಡ್ಮನೆ ಹುಡುಗ' ಸಾಂಗ್ ಶೂಟ್]

ಬುಧವಾರ ಮತ್ತು ಗುರುವಾರ ಬಳ್ಳಾರಿ ಮತ್ತು ಹೊಸಪೇಟೆಯಲ್ಲಿ ನಡೆದ ಚಿತ್ರೀಕರಣಕ್ಕೂ ಅಪಾರ ಸಂಖ್ಯೆಯ ಅಭಿಮಾನಿಗಳು ಮುತ್ತಿಗೆ ಹಾಕಿದ್ದರು.ಜನರು ಕಟ್ಟಡ ಏರಿ ಚಿತ್ರೀಕರಣ ನೋಡಿ ಸಂಭ್ರಮಿಸಿದರು. ನೆಚ್ಚಿನ ನಟನೊಂದಿಗೆ ಫೋಟೋ ತೆಗೆದುಕೊಳ್ಳಲು ಹರಸಾಹಸ ಪಟ್ಟರು.[ಪುನೀತ್ ಜೊತೆ ಡ್ಯಾನ್ಸ್ ಮಾಡಲು ಅಭಿಮಾನಿಗಳಿಗೆ ಇಲ್ಲಿದೆ ಅವಕಾಶ]

 puneeth rajkumar,
-
-
-
-
-
-
-
-
-
-
-
-
-
-
-
-
English summary
'Dodmane Huduga' which was in news from almost a year is finally all set to roll. Thousands of fans took a part in this shooting along with Puneeth Rajkumar at Hubballi Chennamma circle on 24. June 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada